ಚಾಮರಾಜನಗರ: ತಾಲ್ಲೂಕಿನ ಕೋಡಿಮೋಳೆ ಗ್ರಾಮದ ಭಗತ್ ಸಿಂಗ್ ಯುವಸೇನೆ ವತಿಯಿಂದ ನೂತನವಾಗಿ ಹೊರತರಲಾಗಿರುವ ೨೦೨೨ರ ಕ್ಯಾಲೆಂಡರ್‌ನ್ನು ಡಿವೈಎಸ್ಪಿ ಪ್ರಿಯದರ್ಶಿನಿಸಾಣೆಕೊಪ್ಪ ಅವರು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿ, ಭಗತ್ ಸಿಂಗ್ ಸಂಘಟನೆಯ ಕಾರ್ಯಕರ್ತರು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು, ಅಸಹಾಯಕರ ನೆರವಿಗೆ ಬರಬೇಕು, ಜನರಲ್ಲಿ ನೈತಿಕಮೌಲ್ಯಗಳನ್ನು ತುಂಬುವ ಕೆಲಸಮಾಡಬೇಕು ಎಂದ ಅವರು, ಸಂಘದ ಕಾರ್ಯಕರ್ತರು ಅಭಿನಂದಿಸಿದರು.
ಭಗತ್ ಸಿಂಗ್ ಯುವಸೇನೆ ಸಂಘದ ಅಧ್ಯಕ್ಷ ಕಾಂತರಾಜು, ಪದಾಧಿಕಾರಿಗಳಾದ ಶಿವು, ಮಲೇಶ್, ಸೋಹನ್‌ಕುಮಾರ್, ದೇವರಾಜು, ಉಪ್ಪಾರ ಯುವಕಸಂಘದ ಕಾರ್ಯದರ್ಶಿ ಸಿ.ಹಾಜರಿದ್ದರು.