ಮೈಸೂರು, ಡಿಸೆಂಬರ್ 28:- ಹೆಚ್.ಡಿ.ಕೋಟೆ ಪುರಸಭಾ ವ್ಯಾಪ್ತಿಯಲ್ಲಿ ಅಂಗವಿಕಲ ಹಾಗೂ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ನಗರ ಪುನರ್ವಸತಿ ಯೋಜನೆಯಡಿ ಖಾಲಿಯಿರುವ ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಯ ನೇಮಕಾತಿಗಾಗಿ ಪುರಸಭೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ ಅರ್ಜಿದಾರರು ಪುರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತೀರ ಬೇಕು. ವಾಸ ಸ್ಥಳ ದೃಡೀಕರಣ ಪತ್ರ ಲಗತ್ತಿಸಬೇಕು. 18 ರಿಂದ 45 ವರ್ಷ ವಯೋಮಿತಿಯೊಳಗಿರಬೇಕು. ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು. ಅಂಧರಿಗೆ ಭಾಗಶ: ಶ್ರವಣದೋಷವುಳ್ಳವರಿಗೆ ಮತ್ತು ದೈಹಿಕ ಅಂಗವಿಕಲರಿಗೆ ಅವಕಾಶ ಕಲ್ಪಿಸಲಾಗುವುದು. ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಅಂಗವಿಕಲತೆಯ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ, ಗುರುತಿನ ಚೀಟಿ ದಾಖಲಾತಿಯನ್ನು ಲಗತ್ತೀಸ ಬೇಕು. ಪುರಸಭಾ ವ್ಯಾಪ್ತಿಯಲ್ಲಿ ಸಂಚರಿಸಿ ಮಾಹಿತಿ, ಸೌಲಭ್ಯ ಕಲ್ಪಿಸಲು ಸಮರ್ಥರಾಗಿರಬೇಕು. ಆಯ್ಕೆ ಮಾಡುವಾಗ ಸರ್ಕಾರ ನಿಗಧಿಪಡಿಸಿರುವ ಕರ್ತವ್ಯಗಳನ್ನು ನಿರ್ವಹಿಸಲು ಸಮರ್ಥ ಎಂಬ ಬಗ್ಗೆ ಪರಿಶೀಲಿಸಿ ಆಯ್ಕೆ ಮಾಡಲಾಗುವುದು.ಗೌರವಧನ ಆಧಾರದ ಮೇಲೆ ಕೆಲಸ ನಿರ್ವಹಿಸುವುದರಿಂದ ಖಾಯಂ ಗೊಳಿಸುವಂತೆ ಕೋರಲು ಅವಕಾಶ ವಿರುವುದಿಲ್ಲ. ಕಛೆರಿಯಿಂದ ನಿಗಧಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ 2022ನೇ ಜನವರಿ 14 ರಂದು ಸಂಜೆ:-5.30 ರೊಳಗೆ ಕಛೇರಿಗೆ ಸಲ್ಲಿಸಬಹುದು ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಅವರನ್ನು ಸಂಪರ್ಕಿಸಬಹುದು ಎಂದು ಪುರಸಭೆಯ ಮುಖ್ಯಾಧಿಕಾರಿಗಳು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
