ಮೈಸೂರು, ಸೆ.26- ಮೈಸೂರಿನ ರೆಡ್ ಎಫ್ ಎಂ 93.5 ರೇಡಿಯೋ ಸ್ಟೇಷನ್ ನ 10ನೇ ವರ್ಷದ ‘ರೆಡ್ ಅಂಬಾರಿ’ ಸೋಮವಾರ ಚಾಲನೆ ನೀಡಲಾಯಿತು.ಕಚೇರಿ ಎದುರು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ರಮೇಶ್ ನರಸಯ್ಯ ಹಾಗೂ ಖ್ಯಾತ ನಟಿ ಅನು ಪ್ರಭಾಕರ್ ಚಾಲನೆ ನೀಡಿದರು.
ಬಳಿಕ ನಟಿ ಅನು ಪ್ರಭಾಕರ್ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಎಲ್ಲೆಡೆ ಕಡೆ ತೆಗೆದುಕೊಂಡು ಹೋಗಲು ಅನುಕೂಲ. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ನಾಡಹಬ್ಬದಲ್ಲಿ ಸಂಭ್ರಮದಿಂದ ಭಾಗವಹಿಸಿ ಎಂದರು.ನಟಿ ಶ್ರುತಿ ನಾಯ್ಡು, ಪತ್ರಕರ್ತೆ ರಶ್ಮಿ ಕೋಟಿ, ಅಪೋಲೋ ಹಾಸ್ಪಿಟಲ್ ನ ಡಾ.ಜಯಕುಮಾರ್, ಉರಗ ತಜ್ಞ ಸುಬ್ರಮಣ್ಯ ಮತ್ತಿತರರು ಉಪಸ್ಥಿತರಿದ್ದರು.