ಸಕಲ ದೇವಕೋಟಿಗಳಿಗೂ ಅಧಿನಾಯಕ, ಹಾಗಾಗಿ ಯಾವುದೇ ಶುಭಕಾರ್ಯವೂ ಮೊದಲು ವಿನಾಯಕನಪೂಜೆಯಿಂದಲೇ ಪ್ರಾರಂಭವಾಗುತ್ತದೆ.ನಮ್ಮ ದೇಶದಲ್ಲಿ ಗಣಪನ ಹಬ್ಬವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುತ್ತಿದೆ.ದೇಶ ನಾಯಕರಲ್ಲಿ ಒಬ್ಬರಾದ ಶ್ರೀ ಬಾಲಗಂಗಾಧರ ತಿಲಕರ ಶ್ರಮದ ಫಲವಾದ ಈ ಹಬ್ಬ ಎಲ್ಲಾ ಕೋಮಿನವರ ಹಬ್ಬವಾಗಿದೆ.

ಕೊರೋನಾ ಮಹಾಮಾರಿ ಆವರಿಸಿ, ಜನ ತತ್ತರಿಸುತ್ತಿದ್ದರೂ ಕಾಲಚಕ್ರದ ಚಲನೆ ನಡೆಯುತ್ತಲೇ ಇದೆ. ಸಂವತ್ಸರಗಳು ಜಾರಿ ಹಬ್ಬಹರಿದಿನಗಳು ಮುಂದೆ ಸಾಗುತ್ತಲೇ ಇವೆ. ಇದರ ನಡುವೆ ಜನರು ಹೊಂದಿಕೊಂಡು ಎಲ್ಲಾ ಹಬ್ಬ ಹರಿದಿನಗಳನ್ನು ಆಚರಿಸುತ್ತಲೇ ಇದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ವಿಜೃಂಭಣೆಯಿಂದ ಆಚರಿಸುವ ಗಣಪತಿ ಹಬ್ಬ ಬರಲಿದೆ. ಸ್ಪಂದನವು ಕಳೆದ ವರ್ಷದಂತೆ ಈ ಬಾರಿಯೂ ಸಹ ಸರಳ ಹಾಗೂ ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸುವ ಎಂದು ಸಂಕಲ್ಪ ಮಾಡಲು ನಿಮ್ಮೆಲ್ಲರನ್ನು ಪ್ರೋತ್ಸಾಹಿಸುತ್ತದೆ. ಅದರಂತೆ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿಯೇ ತಯಾರಿಸಿದ ಅರಿಶಿನ ಗಣಪನನ್ನು ಪೂಜಿಸುತ್ತಾ ಹಬ್ಬವನ್ನು ಆಚರಿಸೋಣ.

ಕಳೆದಬಾರಿಯಂತೆ ಈ ಬಾರಿಯು ಸಹ ಪರಿಸರ ಜಾಗೃತಿ ಮೂಡಿಸಲು ಪರಿಸರಸ್ನೇಹಿ ಅರಿಸಿನ ಗಣಪನ ಅಭಿಯಾನ ಹಮ್ಮಿಕೊಂಡಿದ್ದು ಇದರ ಅಂಗವಾಗಿ “ಪರಿಸರಸ್ನೇಹಿ ಅರಿಸಿನ ಗಣಪ ಸ್ಪರ್ಧೆ”ಯನ್ನು ಏರ್ಪಡಿಸಿದೆ.
ಆಯ್ಕೆಯಾದ ಅತ್ಯುತ್ತಮ ಗಣಪನ ಮೂರ್ತಿಗಳಿಗೆ ಬಹುಮಾನಗಳನ್ನು ನೀಡಲಾಗುತ್ತದೆ. ಎಲ್ಲರೂ ಭಾಗವಹಿಸಿ ನಮ್ಮ ಪ್ರಯತ್ನವನ್ನು ಯಶಸ್ವಿಗೊಳಿಸಿ ಪರಿಸರ ಉಳಿಸಿ.ಸರ್ಕಾದ ಪರಿಸರ
ಕಾಳಜಿ ಕಾರ್ಯಕ್ರಮಗಳಿಗೆ ಕೈಜೋಡಿಸೋಣ.

.ಸ್ಪರ್ಧೆಯ ವಿವರಗಳು:
*ಪರಿಸರ ಸ್ನೇಹಿ ಗಣಪನಮೂರ್ತಿಯನ್ನು ಅರಿಶಿನದಿಂದ ಮಾತ್ರವೇ ತಯಾರಿಸಬೇಕು
* ಪರಿಸರ ಸ್ನೇಹಿ ಅರಿಸಿನ ಗಣಪನನ್ನು ನೀವು ತಯಾರಿಸುತ್ತಿರುವ 5 ನಿ. ವಿಡಿಯೋ ಮತ್ತು
ಪೂರ್ಣ ತಯಾರಾದ ಅರಿಸಿನ ಗಣಪನ ಒಂದು ಫೋಟೋವನ್ನು ಅಲಂಕಾರಕ್ಕೂ ಮುಂಚಿತವಾಗಿ ಸೆಪ್ಟೆಂಬರ್ 7 ರಿಂದ 10ನೇ ತಾರೀಖಿನೊಳಗೆ ಸ್ಪಂದನದ ಇಮೇಲ್ ವಿಳಾಸ https://docs.google.com/forms/d/1a7MagiVsYwrnJLGHjBv8D3_O8Pc5H-dK7kiBb2rU2ew/edit?usp=drivesdk ಗೆ ಕಳುಹಿಸುವುದು.
* ವಿಡಿಯೋ ಪ್ರಾರಂಭದಲ್ಲಿ ಚುಟುಕಾಗಿ ನಿಮ್ಮ
ಪರಿಚಯ ಮತ್ತು ವಿಳಾಸ ಹೇಳಿ ರೆಕಾಡ್೯ ಮಾಡಿ
* ನಿಗದಿತ ದಿನಾಂಕದೊಳಗೆ ಸ್ಪರ್ಧೆಯ ವಿಡಿಯೋ ಮತ್ತು ಪೋಟೊ ಕಳುಹಿಸುವುದು.

By admin