ಮೈಸೂರು: ಕೋವಿಡ್ ಮಹಾಮಾರಿ ಎಲ್ಲ ಕ್ಷೇತ್ರದ ಜನರ ಮೇಲೆ ಪರಿಣಾಮ ಬೀರಿದ್ದು ಅದರಲ್ಲೂ ಸಿನಿಮಾ ಕ್ಷೇತ್ರದಲ್ಲಿರುವ ಲಕ್ಷಾಂತರ ಮಂದಿ ಸಹನಟರು, ಕಲಾವಿದರು, ಕಾರ್ಮಿಕರು, ಸಿನಿಮಾ ಪ್ರತಿನಿಧಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಇವರಿಗೆ ತಮ್ಮ ಕೈಲಾದ ಸಹಾಯವನ್ನು ನಟ ಉಪೇಂದ್ರ ಮಾಡುತ್ತಿದ್ದಾರೆ.

ಈಗಾಗಲೇ ರಾಜ್ಯದಾದ್ಯಂತ ಇರುವ ಬಡ ಕಲಾವಿದರ ನೆರವಿಗೆ ಧಾವಿಸಿರುವ ಉಪೇಂದ್ರ ಅವರು ಮೈಸೂರಿಗೂ ದಿನಸಿಕಿಟ್ ನೀಡಿದ್ದು ಅದನ್ನು ನಗರದ ಉಮಾ ಟಾಕೀಸ್ ಬಳಿ ಸಿನಿಮಾ ಪ್ರತಿನಿಧಿಗಳಿಗೆ ( ಆರ್ .ಪಿ) ವಿತರಿಸಲಾಯಿತು.

ಈ ವೇಳೆ ದಿನಸಿ ಕಿಟ್‍ ಗಳನ್ನು ವಿತರಿಸಿ ಮಾತನಾಡಿದ ಸಿನಿಮಾ ವಿತರಕ  ನಂದೀಶ್ ಅವರು, ಕೊರೊನಾ ಎರಡನೇ ಅಲೆ ಹಿನ್ನಲೆಯಲ್ಲಿ ಮೈಸೂರಿನ ಸಿನಿಮಾ ಪ್ರತಿನಿಧಿಗಳು ಕಂಗಾಲಾಗಿದ್ದು, ನೌಕರರು ಹಾಗೂ ಕಾರ್ಮಿಕರು ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವಂತಾಗಿದೆ. ಸಿನಿಮಾ ನಂಬಿಕೊ0ಡು ಜೀವನ ಸಾಗಿಸುತ್ತಿದ್ದವರ ಬದುಕು ಬೀದಿಗೆ ಬಂದಿದೆ. ಇವರ ಕಷ್ಟವನ್ನರಿತು ಉಪೇಂದ್ರ ಅವರು ನೆರವಿಗೆ ಬಂದಿರುವುದು ಖುಷಿ ತಂದಿದೆ ಎಂದರು.

ಈ ವೇಳೆ ಮಲ್ಲೇಶ್,  ಜಯರಾಮ್,  ರವಿಶಂಖರ್, ನಂದೀಶ್  ಸೇರಿದಂತೆ ಹಲವರು ಇದ್ದರು.

 

By admin