‘ಆಡುಮುಟ್ಟದಸೊಪ್ಪಿಲ್ಲ, ಕುವೆಂಪುಬರೆಯದಸಾಹಿತ್ಯವಿಲ್ಲ’ ಕತೆ, ಕವನ, ನಾಟಕ, ವಿಮರ್ಶೆ, ಮಹಾಕಾವ್ಯ, ಖಂಡಕಾವ್ಯ, ಕಾದಂಬರಿ, ಕಾವ್ಯಮೀಮಾಂಸೆ,ಪ್ರಬಂಧ,ಅಂಕಣ,ಭಾಷಣ,ಲೇಖನ,ಶಿಶುಸಾಹಿತ್ಯ,ಅನುವಾದ,ವಿಮರ್ಶೆ,ಆತ್ಮಕಥೆ,ಸಿನಿಚಿತ್ರಕಥೆ-ಸಂಭಾಷಣೆ-ಹಾಡು, ರಗಳೆ, ಜೀವನಚರಿತ್ರೆ, ಭಾವಗೀತೆ, ಪದಕೋಶ, ಪತ್ರಿಕೋದ್ಯಮ, ರಾಜಕಾರಣ, ಆರ್ಥಿಕಜ್ಞಾನ, ಇಂಗ್ಲಿಷ್‌ಸಾಹಿತ್ಯ ಮುಂತಾದ ಪ್ರಾಕಾರಗಳಲ್ಲಿ ಒಟ್ಟು ೭೫ ಕೃತಿ ಸೃಜಿಸಿ ಯಶಸ್ವಿಯಾದ ಪ್ರಪಂಚದ ಏಕಮೇವಾದ್ವಿತೀಯ! ವರಕವಿ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ತೀರ್ಥಹಳ್ಳಿ-ಕುಪ್ಪಳಿಯ ಶ್ರೀಮತಿಸೀತಮ್ಮಶ್ರೀವೆಂಕಟಪ್ಪಗೌಡರ ಪುತ್ರರತ್ನರಾಗಿ ೨೯.೧೨.೧೯೦೪ರಂದು ಹಿರೀಕೊಡಿಗೆಯಲ್ಲಿ ಜನಿಸಿದರು. ಐಗಳಮಠ ಗ್ರಾಮೀಣಶಾಲೆ ಶಿಕ್ಷಣ ಮುಗಿಸಿ ೧೯೨೯ರಲ್ಲಿ[ಮೈ.ವಿ.ವಿ] ಎಂ.ಎ. ಪದವಿಗಳಿಸಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಾಪಕ ಸೇವೆ ಆರಂಭಿಸಿದರು. ಕೆಲಕಾಲನಂತರ ಮೈಸೂರು ಯುವರಾಜ ಕಾಲೇಜಿನಲ್ಲಿ ಪ್ರವಾಚಕರಾಗಿದ್ದು ಶೀಘ್ರದಲ್ಲೆ ಮಹಾರಾಜ ಕಾಲೇಜಿನ ಪ್ರಾಧ್ಯಾಪಕ-ಪ್ರಾಂಶುಪಾಲರಾಗಿ ವೃತ್ತಿಜೀವನ ಕೈಗೊಂಡರು. ಬಾಲ್ಯದಿಂದಲೆ ಪ್ರಕೃತಿ ಆರಾಧಕರಾಗಿ ರಾಮಕೃಷ್ಣಪರಮಹಂಸ ವಿವೇಕಾನಂದ ಮುಂತಾದ ಮಹಾತ್ಮರ ಆ[ವಿ]ಚಾರಗಳಿಂದ ಪ್ರಭಾವಿತರಾದರು.

ಪದ್ಮ[ವಿ]ಭೂಷಣ,ಅಭಿನವಪಂಪ,ಜ[ಯು]ಗದಕವಿ,ರಾಷ್ಟ್ರಕವಿ,ನಾಡೋಜ, ಕರ್ನಾಟಕರತ್ನ,೪ವಿ.ವಿ.ಯಿಂದ ಡಿ.ಲಿಟ್/ಗೌ||ಡಾಕ್ಟರೇಟ್‌ಪುರಸ್ಕೃತ ಏಕೈಕಸಾಹಿತಿ! ಕುವೆಂಪು ಕುರಿತು ವಿವಿಧಲೇಖಕರು ಬರೆದ ೨೨ಕೃತಿ ಗಳಿವೆ. ರಾಜ್ಯ,ರಾಷ್ಟ್ರ,ಅಂತಾರಾಷ್ಟ್ರಮಟ್ಟದ ೨೪ಪ್ರಶಸ್ತಿ-ಪುರಸ್ಕಾರ-ಬಿರುದುಗಳು ಸಂದಿರುವುದು ಪ್ರಾದೇಶಿಕಭಾಷಾ ಸಾಹಿತಿಯ ವಿಶ್ವದಾಖಲೆ! ಅಖಿಲಭಾರತ ೩೯ನೇ ಕನ್ನಡಸಾಹಿತ್ಯಸಮ್ಮೇಳನ[೧೯೫೭]ಅಧ್ಯಕ್ಷ. ಕರ್ನಾಟಕ ಸರ್ಕಾರ ಇವರ ಜನ್ಮದಿನವನ್ನು ವಿಶ್ವಮಾನವದಿನವೆಂದು ಘೋಷಿಸಿ ಆಚರಣೆಮಾಡುತ್ತಿದೆ.

ರಾಜ್ಯದ ೮ವಿ.ವಿ.ಯ ವಿಶ್ವಕೋಶದಲ್ಲಿ, ಗ್ರಂಥಸೂಚಿಯಲ್ಲಿ ಇವರ ಉಲ್ಲೇಖವಿದೆ. ಜಗತ್ತಿನ ೩೨ ಭಾಷೆಗಳಲ್ಲಿ ಇವರ ಕೃತಿಗಳು ಅನುವಾದಗೊಂಡಿದೆ. ಬಹುಶಃ ರಾಜಕೀಯವಿಲ್ಲದಿದ್ದರೆ/ಇನ್ನೊಂದೆರಡುವರ್ಷ ಬದುಕಿದ್ದಿದ್ದರೆ ನೋಬೆಲ್ ಪ್ರಶಸ್ತಿ ದೊರಕುತ್ತಿತ್ತು? ಎಂಬುದರಲ್ಲಿ ಲವಲೇಶ ಸಂಶಯವಿಲ್ಲ!೧೯೫೬-೬೦ಅವಧಿಯಲ್ಲಿ ಮೈಸೂರುವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಯಗದ್ದುಗೆಏರಿ, ರಾಜ್ಯ-ರಾಷ್ಟ್ರ-ಯುಜಿಸಿ ನಿಬ್ಬೆರಗಾಗುವಂಥ ನೂರಾರು ಶೈಕ್ಷಣಿಕ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿದರು. ವಿ.ವಿ.ಆಡಳಿತದಲ್ಲಿ ಹಗಲಿರುಳು ತೊಡಗಿಸಿಕೊಂಡು ಅಧ್ಯಾಪಕರ, ಸಂಶೋಧಕರ ಹಾಗೂ ಅಧ್ಯಾಪಕೇತರರೆಲ್ಲರ ವಿಶ್ವಾಸ-ಗೌರವ ಗಳಿಸಿದರು. ೧೯೬೦ರಲ್ಲಿ ನೂರಾರು ಎಕರೆ ವಿಸ್ತೀರ್ಣವುಳ್ಳ ರಾಜ್ಯದ ಪ್ರಪ್ರಥಮ ಸ್ನಾತಕೋತ್ತರ ಕೇಂದ್ರ ‘ಮಾನಸಗಂಗೋತ್ರಿ’ ಕನಸಕೂಸಿನ ಜನಕ! ಅಧ್ಯಯನಾಂಗ, ಸಂಶೋಧನಾಂಗ, ಪ್ರಸಾರಾಂಗ, ಮುದ್ರಣಾಲಯ,ಆಡಳಿತಾಂಗ ರೂವಾರಿ![ಹಾಡುಗಾರಿಕೆ+ವಾದ್ಯ+ಸುಗಮ]ಸಂಗೀತ-ನೃತ್ಯ-ನಾಟಕ ವಿಷಯಗಳಲ್ಲಿ ಸ್ನಾತಕೋತ್ತರಪದವಿ, ಪದವಿ, ಬೋಧನೆ-ಸಂಶೋಧನೆಗೆಂದು ಲಲಿತಕಲೆಗಳಕಾಲೇಜು ಸ್ಥಾಪಿಸಿದ ಪಿತಾಮಹ! ಮಾನವಿಕ, ವಿಜ್ಞಾನ, ವಾಣಿಜ್ಯ ನಿಖಾಯಗಳನ್ನು ಪ್ರತ್ಯೇಕಿಸಿ ಆಡಳಿತ+ಅಧ್ಯಯನ ವಿಕೇಂದ್ರೀಕರಣಗೊಳಿಸಿದ [ವಿ]ಜ್ಞಾನಿ! ಕನ್ನಡವಿಶ್ವಕೋಶ, ಕನ್ನಡಗ್ರಂಥಸೂಚಿ, ಎಪಿಗ್ರಾಫಿಕರ್ನಾಟಕ, ಮಾನವಿಕಕರ್ನಾಟಕ, ವಿಜ್ಞಾನಕರ್ನಾಟಕ, ಪ್ರಬುದ್ಧಕರ್ನಾಟಕ, ನಾಲ್ಕಾಣೆಪುಸ್ತಕ ಮುಂತಾದ ನೂರಾರು ನೂತನ ಮಾದರಿ ಪ್ರಕಟಣೆಗಳಿಗೆ ನಾಂದಿಹಾಡಿದ ಸರಸ್ವತಿಪುತ್ರ! ತತ್‌ಫಲವಾಗಿ ಉನ್ನತಾಧ್ಯಯನ/ಸಂಶೋಧನ ಕ್ಷೇತ್ರದಲ್ಲಿ ರಾಷ್ಟ್ರ-ಅಂತರ್‌ರಾಷ್ಟ್ರ ಮಟ್ಟದ ವಿದ್ವಾಂಸರುಗಳು ತಯಾರಾಗಿ ಅವರ ಅಧಿಕಾರಾವಧಿಯಲ್ಲಿ ಪ್ರಪಂಚಖ್ಯಾತಿ ಪಡೆಯಿತು ಮೈ.ವಿ.ವಿ.! ಭುವನೇಶ್ವರಿಯ ಮಾನಸಪುತ್ರರಾಗಿ ಸಹಸ್ರಾರು ಕನ್ನಡ ಸೇವೆಸಲ್ಲಿಸಿದರು. ವೃತ್ತಿ-ಪ್ರವೃತ್ತಿ ಸರಿಸಮವಾಗಿಸಿ ಎರಡೂ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದರು. ೧೯೪೯ರಲ್ಲಿ ‘ರಾಮಾಯಣ ದರ್ಶನಂ’ ಮಹಾಕಾವ್ಯರಚಿಸಿ, ೧೯೬೮ರಲ್ಲಿ ಕನ್ನಡಸಾಹಿತ್ಯಕ್ಕೆ ಮೊಟ್ಟಮೊದಲ ‘ಜ್ಞಾನಪೀಠಪ್ರಶಸ್ತಿ’ ತಂದುಕೊಟ್ಟರು! ಉತ್ತ್ತಮ ಶಿಷ್ಯವೃಂದ ತಯಾರು ಗೊಳಿಸುವಲ್ಲಿ ಸಿದ್ಧಹಸ್ತರೆನಿಸಿದ್ದು ಅವರಲ್ಲಿ ಪ್ರಮುಖರು ದೇಜಗೌ, ಸಿಪಿಕೆ, ಎಚ್ಚೆಸ್ಕೆ, ಹಾ.ಮಾ.ನಾಯಕ್, ಪ್ರಭುಶಂಕರ್, ಪ್ರಹ್ಲಾದರಾವ್, ಜಿ.ಟಿ.ನಾರಾಯಣರಾವ್, ಉ.ಕಾ.ಸುಬ್ರಾಯಾಚಾರ್, ತಿಪ್ಪೇರುದ್ರಸ್ವಾಮಿ, ಮಲೆಯೂರುಗುರುಸ್ವಾಮಿ, ಮುಂತಾದ ನೂರಾರು ವಿದ್ವಾಂಸರು!


ಸಾಹಿತ್ಯದ ವಿವಿಧ ಮಜಲುಗಳು:- ಕುವೆಂಪು ತಮ್ಮ ಚೊಚ್ಚಲ ಕವಿತೆ ಬರೆದದ್ದು ಇಂಗ್ಲಿಷ್ ಭಾಷೆಯಲ್ಲಿ. ಇವರ ಪ್ರಪ್ರಥಮ ಕವನ ಸಂಕಲನ: ‘ದಿ ಬಿಗಿನರ್ಸ್ ಮ್ಯುಸ್’ ಓದಿದ ಕಸಿನ್ಸ್‌ಎಂಬ ಐರಿಷ್‌ಕವಿ ನೀಡಿದ ಸಲಹೆಯಂತೆ ಕನ್ನಡದಲ್ಲಿ ಕವಿತೆ ಬರೆಯಲು ಪ್ರಾರಂಭಿಸಿ ಕನ್ನಡವನ್ನೆ ಪ್ರಾಣವಾಗಿಸಿ ತಮ್ಮ ಬದುಕನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟರು. ಇವರ ಪ್ರಥಮ ಕವನಸಂಕಲನ;- ಚೈತ್ರವೈಶಾಖ, ವಸಂತಾಗಮನ. ಕಥಾಸಂಕಲನ;- ಅಮಲನಕತೆ, ಕೊಳಲು. ಕಾದಂಬರಿಗಳು;- ಮಲೆಗಳಲ್ಲಿಮದುಮಗಳು, ಕಾನೂರುಹೆಗ್ಗಡಿತಿ. ಇತರೆ:- ಪಾಂಚಜನ್ಯ,

ನವಿಲು,ಪಕ್ಷಿಕಾಶಿ,ಚಂದ್ರಮಂಚಕೆಬಾಚಕೋರಿ,ಕಿಂದರಿಜೋಗಿ,ಯಮನಸೋಲು,ರಕ್ತಾಕ್ಷಿ,ಮಹಾರಾತ್ರಿ,ಬೆರಳ್‌ಗೆಕೊರಳ್,ಶೂದ್ರತಪಸ್ವಿ,ಜಲಗಾರ,ಚಿತ್ರಾಂಗದ,ಮುಂತಾದವು.ಈಕೃತಿಗಳಲ್ಲಿ ಅವೆಷ್ಟೊ ನವನವೀನ ಪದಪುಂಜಗಳು ಕಾಣಸಿಗುತ್ತವೆ. ವೈವಿಧ್ಯಮಯಬಣ್ಣನೆ,ಮನೋಲ್ಲಾಸ ಗೊಳಿಸುತ್ತವೆ. ಅಸಂಖ್ಯಾತ ಮನುಷ್ಯಸಹಜ

ಭಾವನೆ,ಪ್ರೀತಿ,ರಾಷ್ಟ್ರಪ್ರೇಮ,ನಾಡಪ್ರೇಮ,ರೈತಪ್ರೇಮ,ಕನ್ನಡಪ್ರೇಮ,ಆಧ್ಯಾತ್ಮಿಕತೆ, ಸತ್ ಸಾಕ್ಷಾತ್ಕಾರ ತುಂಬಿತುಳುಕುತ್ತವೆ. ದಾಂಪತ್ಯಜೀವನಕ್ಕೆ ವೈದಿಕ ಧರ್ಮದ ಪರ್ಯಾಯವಾಗಿ ‘ಮಂತ್ರಮಾಂಗಲ್ಯ’ ನವ್ಯಪದ್ಧತಿ ಸೃಷ್ಟಿಸಿ ಸರಳವಿವಾಹ ಪ್ರತಿಪಾದಿಸಿ ಕ್ರಾಂತಿಯೋಗಿಯಾದರು. ‘ಕನ್ನಡವೆನೆ ಕುಣಿದಾಡುವುದೆನ್ನೆದೆ’ ‘ಬಾರಿಸುಕನ್ನಡ ಡಿಂಡಿಮವ..’ ‘ಮನುಜಮತ ವಿಶ್ವಪಥ’ ಎಲ್ಲಕ್ಕೂ ಮಿಗಿಲಾಗಿ ಸರ್ಕಾರದಿಂದ ಮಾನ್ಯತೆಗೊಂಡ ಅಧಿಕೃತನಾಡಗೀತೆ ‘ಜೈಭಾರತ ಜನನಿಯ ತನುಜಾತೆ’ ಮುಂತಾದವು ಆಚಂದ್ರಾರ್ಕ ಮೊಳಗುತಿರುತ್ತವೆ! ೧೯೩೭ರಲ್ಲಿ ಹೇಮಾವತಿಯೊಡನೆ ವಿವಾಹವಾಗಿ ೪ಮಕ್ಕಳ ತಂದೆಯಾದರು. ಪುತ್ರಿಯರಿಬ್ಬರು:-ತಾರಿಣಿ, ಇಂದುಕಲ ಮತ್ತು ಪುತ್ರರೀರ್ವರು:- ಪೂರ್ಣಚಂದ್ರತೇಜಸ್ವಿ, ಕೋಕಿಲೋದಯವನಚೈತ್ರ. ಮೈಸೂರಿನ ಸ್ವಂತಮನೆ ‘ಉದಯರವಿ’ಯಲ್ಲಿ ಸಾರ್ಥಕ ತುಂಬುಜೀವನದ ೯೦ನೇ ವಯಸ್ಸಲ್ಲಿ ೧೧.೧೧.೧೯೯೪ರಂದು ಇಹಲೋಕ ತ್ಯಜಿಸಿ, ಕುಪ್ಪಳಿಯಲ್ಲಿ ಅಂತ್ಯಸಂಸ್ಕಾರ ನಂತರ ಸಮಾಧಿ ಸ್ಮಾರಕ’ಕವಿಶೈಲ’ದಲ್ಲಿ ಅಮರವಾಗಿದ್ದಾರೆ! ಕುಪ್ಪಳಿಮನೆ ವಸ್ತುಸಂಗ್ರಹಾಲಯವಾಗಿದೆ.

ರಾಜ್ಯದಾದ್ಯಂತ ಜಿಲ್ಲೆ/ತಾಲ್ಲೂಕು/ಹೋಬಳಿ/ಹಳ್ಳಿ/ ನಗರ ಎಲ್ಲೆಡೆ ಇವರ ಹೆಸರಿನ ಬೀದಿ,ವೃತ್ತ,ಬಡಾವಣೆ,ಅಧ್ಯಯನಪೀಠ,ವಿಶ್ವವಿದ್ಯಾಲಯ,ಸ್ವರ್ಣಪದಕ,ಬಹುಮಾನ,ಭಾಷಾಭಾರತಿಸಂಸ್ಥೆ, ಖಾಸಗಿ/ಸರ್ಕಾರಿ ಉದ್ಯಮ ಟ್ರಸ್ಟ್, ಮಂದಿರ, ರಾರಾಜಿಸುತ್ತಿವೆ! ಕುವೆಂಪು ತಮ್ಮ ಆತ್ಮಕಥೆ ‘ನೆನಪಿನ ದೋಣಿಯಲ್ಲಿ’ ಹೇಳಿಕೊಳ್ಳುತ್ತಾರೆ:-ನಾನುಬಾಲ್ಯದಲ್ಲಿ ಕೇಳುತ್ತಿದ್ದ ಹಲವಾರುಕತೆಗಳಲ್ಲಿ ನನ್ನಎಳೆಮನಸ್ಸಿನ ಮೇಲೆ ಅಚ್ಚೊತ್ತಿದ ಕಥೆ-ರಾಮಾಯಣ. ಅವರು ಬಾಲಕನಿದ್ದಾಗಲೆ ಕಾವ್ಯವನ್ನು ಕೇಳುವ ಸಂಸ್ಕಾರವಿತ್ತು. ತತ್ಪರಿಣಾಮಸ್ಫೂರ್ತಿಯಿಂದ ೧೯೩೦ರಷ್ಟು ಹಿಂದೆಯೆ ರಾಮಾಯಣದರ್ಶನಂಗೆ ಮುನ್ನವೆ ‘ಸಮುದ್ರಲಂಘನ’ ಕಿರುಕಾವ್ಯ ರಚಿಸಿದ್ದರು!

 ಕುವೆಂಪು ತಮ್ಮ 'ರಾಮಾಯಣ ದರ್ಶನಂ' ಮಹಾನ್ ಕೃತಿ ರಚನೆಯ ಪ್ರಾರಂಭದಲ್ಲಿ ಜಗತ್ತಿನ ಕೆಲವು ಕವಿಶ್ರೇಷ್ಟ್ರರಿಗೆ, ಅಗ್ರಜರಿಗೆ, ಗುರುವೃಂದಕ್ಕೆ ಭಕ್ತಿ ಗೌರವಗಳಿಂದ ಪ್ರಥಮ ನಮನ ಸಲ್ಲಿಸಿದ್ದಾರೆ:-ಹೋಮರ್‌ಗೆ ವರ್ಜಿಲ್‌ಗೆ ಡಾಂಟೆ ಮೇಣ್ ಮಿಲ್ಟನ್‌ಗೆ,ನಾರಣಪ್ಪಂಗೆ ಮೇಣ್ ಪಂಪನಿಗೆ ಋಷಿವ್ಯಾಸ, ಭಾಸ ಭವಭೂತಿ ಮೇಣ್ ಕಾಳಿದಾಸ ಆದ್ಯರಿಗೆ,ನರಹರಿ ತುಲಸೀದಾಸ ಮೇಣ್ ಕೃತ್ತಿವಾಸಾದಿ, ನನ್ನಯ್ಯ ಫ಼ಿರ್ದೂಸಿ ಕಂಬ ಅರವಿಂದರಿಗೆ.ಇಡೀಕೃತಿಯನ್ನು ತಮ್ಮನೆಚ್ಚಿನ ಗುರು ಟಿ.ಎಸ್.ವೆಂಕಣ್ಣಯ್ಯನವರಿಗೆ ಅರ್ಪಿಸಿರುವ ಜತೆಗೆ ಇನ್ನಿತರ ಗುರು,ಸಹೋದ್ಯೋಗಿ,ಬಂಧು-ಮಿತ್ರರಿಗೂ ಕೃತಜ್ಞತೆಸಲ್ಲಿಸಿದ್ದಾರೆ. ಇದು ಅವರಲ್ಲಿದ್ದ ಅಪೂರ್ವಗುಣ ಅಮೋಘಮನಸ್ಥಿತಿ ಪ್ರತಿ ಬಿಂಬಿಸುತ್ತದೆ. ಅವರೊಬ್ಬ ಸಾಹಿತ್ಯಚಕ್ರವರ್ತಿ,ಮಹಾಜ್ಞಾನಿ,ಬರಹಬ್ರಹ್ಮ,ವಿಶ್ವಮಾನವ,ಕನಸುಗಾರ,ವರ್ಣರಂಜಿತವ್ಯಕ್ತಿ-ಶಕ್ತಿ! ಆದ್ದರಿಂದಲೆ ಬೇಂದ್ರೆಯವರು 'ಜಗದಕವಿ-ನೀ-ಯುಗದಕವಿ' ಎಂದು ಬಣ್ಣಿಸಿದ್ದಾರೆ; ದೊಡ್ಡರಂಗೇಗೌಡರು ಹಿಮಾಲಯದೆತ್ತರ ಕನ್ನಡ ಬೆಳೆಸಿದ ನುಡಿ ನಿರ್ಮಾತೃ ಎಂದುಹೊಗಳಿದ್ದಾರೆ; ಕುವೆಂಪು ಎಂಬುದರರ್ಥ ಕನ್ನಡಕಾವ್ಯಸಂಸ್ಕೃತಿ; ಕುವೆಂಪು ಸಾಹಿತ್ಯಾನಂತತೆ ಕ್ಷಿತಿಜದಷ್ಟಿದೆ, ಅಸ್ಮಿತೆವರ್ಣನೆ ಸಾಗರದಷ್ಟಿದೆಎಂದು ಬಿ.ಎನ್.ನಟರಾಜ್ ತಮ್ಮ'ಕನ್ನಡಡಿಂಡಿಮ' ಕವನಸಂಕಲನದಲ್ಲಿ ಬರೆದುಕೊಂಡಿದ್ದಾರೆ. ೧೯೬೯ರಲ್ಲಿ 'ಯಾರೀ..ಕುಮಾರಕವಿ...'ಎಂದು ಉದ್ಗರಿಸಿದ ಕುವೆಂಪು ೧೯೭೭ರಲ್ಲಿ  ಇವರ ಚೊಚ್ಚಲ ಕವನ[ಸುಧೆ]ಸಂಕಲನಕ್ಕೆ ಆಶೀರ್ವಚನ ಬರೆದು ಕೊಟ್ಟರು. ಆಕಾರಣಕ್ಕೆ ಕುಮಾರಕವಿ ಕಾವ್ಯನಾಮದಿಂದಲೆ ೪೨ಕ್ಕೂ ಹೆಚ್ಚು ಕೃತಿ ಬರೆದಿದ್ದಾರೆ! ಕನ್ನಡಕ್ಕಾಗಿ ಕೈಎತ್ತು ನಿನ್ನಕೈ ಕಲ್ಪವೃಕ್ಷ ವಾಗುವುದು, ಕನ್ನಡಕ್ಕಾಗಿ ಕೊರಳೆತ್ತು ನಿನ್ನಕೊರಳು ಪಾಂಚಜನ್ಯವಾಗುವುದು ಝೇಂಕಾರವನ್ನು ಸ್ವಯಂ ಪುಟ್ಟಪ್ಪನವರೆ ಅಳವಡಿಸಿ ಕೊಂಡು ಪ್ರಪಂಚದಾದ್ಯಂತ ಕನ್ನಡಪಸರಿಸಲು ಕ್ರಮಕೈಗೊಂಡರು. ಆಸ್ತಿಕ,ನಿರಹಂಕಾರಿ,ನಿಸ್ವಾರ್ಥಿ,ಸಾತ್ವಿಕಆಹಾರ-ತಾತ್ವಿಕವಿಚಾರದ ಶ್ರೇಷ್ಠಮಾನವ. ಇವರನ್ನು ಪಡೆದ ಭಾರತೀಯರು/ಕನ್ನಡಿಗರು ಧನ್ಯರು! ಈ ಕವಿ-ಕಾವ್ಯದ ಬಗ್ಗೆ ಅನೇಕ ಸಂಶೋಧನಾರ್ಥಿಗಳು ಪ್ರೌಢಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದಿದ್ದಾರೆ. 

ಕುವೆಂಪು ಬಗ್ಗೆ ಗುರು-ರಾಷ್ಟ್ರಪತಿ-ಗಣ್ಯಾತಿಗಣ್ಯರು ಹೇಳಿದ್ದು:-


*ಭಾರತದ ಮಾಜಿರಾಷ್ಟ್ರಪತಿ ಡಾ||ಎಸ್. ರಾಧಾಕೃಷ್ಣನ್ :- ಕುವೆಂಪುರವರು ರವೀಂದ್ರನಾಥ ಟಾಗೂರರ ಉತ್ತರಾಧಿಕಾರಿ.
*ಕನ್ನಡದಕಣ್ವ ಪ್ರೊ||ಬಿ.ಎಂ.ಶ್ರೀ:-ಕುವೆಂಪುರವರ ಪ್ರತಿಭೆ, ವ್ಯಕ್ತಿತ್ವ ಪ್ರತಿಯೊಬ್ಬ ಗುರುವನ್ನೂ ಆಕರ್ಷಿಸುತ್ತವೆ.
*ಆಚಾರ್ಯತೀ.ನಂ.ಶ್ರೀ:- ಕುವೆಂಪುರವರಿಂದಾಗಿ ಕನ್ನಡ ಸಾಹಿತ್ಯವು ಶ್ರೀಮಂತವಾಗುತ್ತಿದೆ.


*ತತ್ವಶಾಸ್ತ್ರಜ್ಞಪ್ರೊ||ಎ.ಆರ್.ವಾಡಿಯ:- ಎಲ್ಲಗುರುಗಳ ಅಪೇಕ್ಷೆಯಂತೆ ನಾನೂ ಪುಟ್ಟಪ್ಪನಂಥ ಶಿಷ್ಯೋತ್ತಮನನ್ನೆ ಪಡೆಯಬಯಸುತ್ತೇನೆ.


*ವಿಮರ್ಷಾಭೀಷ್ಮ ಪ್ರೊ||ತ.ಶು.ಶಾಮರಾಯ:- ಕುವೆಂಪುಅವರ ಪ್ರತಿಯೊಂದು ನಾಟಕವೂ ದಿವ್ಯಭಾವಗಳ ಹೆಗ್ಗುರಿಯಲ್ಲಿ ಮುನ್ನಡಿ ಇಟ್ಟಿದೆ.


*ಕನ್ನಡದಅಶ್ವಿನಿದೇವತೆಗಳೆಂದೆನಿಸಿದ್ದ ಕುವೆಂಪು ಗುರುದ್ವಯರಾದ ಪ್ರೊ||ಟಿ.ಎಸ್.ವೆಂಕಣ್ಣಯ್ಯ-ಪ್ರೊ||ಎ.ಆರ್.ಕೃಷ್ಣ ಶಾಸ್ತ್ರಿ:-
ನಮ್ಮ ಇಡೀ ಪ್ರಾಧ್ಯಾಪಕ ವೃತ್ತಿಜೀವನದಲ್ಲಿ ನಾವು ಕಂಡ ಅಸಾಧಾರಣ ಮತ್ತು ಅಪ್ರತಿಮ ಶಿಷ್ಯೋತ್ತಮ!


*ಪ್ರೊ||ಟಿ.ಎಸ್.ವೆಂಕಣ್ಣಯ್ಯನವರು ಒಮ್ಮೆ ಕುವೆಂಪು ಕವನ ಪಂಕ್ತಿಗಳನ್ನು ಅವರಿಂದಲೇ ಓದಿಸಿ ಕೇಳಿದ ನಂತರ ಹೇಳಿದ್ದು:- ಏನಯ್ಯಾ


ಪುಟ್ಟಪ್ಪ, ಪ್ರಪಂಚದ ಬೇರಾವಕವಿ ಇಂಥಪದ್ಯವನ್ನು ಬರೆದಿದ್ದಾನೆ ಹೇಳು? ಎಂದು ಕೇಳಿದಾಗ ಕುವೆಂಪು ರೋಮಾಂಚನಗೊಂಡರಂತೆ!


*ಕನ್ನಡಕ್ಕೆ ಹಾಸ್ಯದುಸಿರುನೀಡಿದ ನಾ.ಕಸ್ತೂರಿ:- ಆಕೃತಿಯಲ್ಲಿ ಪುಟ್ಟಅಪ್ಪನಾದರೂ ಸಾಹಿತ್ಯದಲ್ಲಿ ಬಲುದೊಡ್ಡಅಪ್ಪ ನನ್ನಪ್ರಿಯಮಿತ್ರ ಪುಟ್ಟಪ್ಪ.


*ನಾಡೋಜ ದೇಜಗೌ.:- ಕುವೆಂಪು ಸಾಹಿತ್ಯದಲ್ಲಿ ಪಾರಮಾರ್ಥಿಕ ಲೌಕಿಕಗಳೆರಡೂ ಪರಸ್ಪರ ಹೆಣೆದುಕೊಂಡಿವೆ, ಅವರ ಕಾವ್ಯಜೀವನ


ಲೋಕಜೀವನ ಎರಡರಲ್ಲೂ ಸಾಮರಸ್ಯವಿದೆ


ಅಂಕಣಕಾರ ಎಚ್ಚೆಸ್ಕೆ:-ವಾಮನನಾಗಿ ಬಂದವನು ತ್ರಿವಿಕ್ರಮನಾದಂತೆ, ಬಿಡಿಯಿಂದ ಬ್ರಹ್ಮಾಂಡಕ್ಕೂ ಜಿಗಿಯುವುದು ಕುವೆಂಪು ಸಾಮರ್ಥ್ಯ

ಪ್ರಭುಶಂಕರ:- ೨೦ನೆ ಶತಮಾನದ ಕನ್ನಡ ಸಾಹಿತ್ಯದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ ಒಬ್ಬ ಯುಗಪುರುಷ ಕುವೆಂಪು
ಪು.ತಿ.ನ.:- ಕುವೆಂಪುರವರು ಪುರೋಹಿತಶಾಹಿ ವಿರೋಧಿಯಾಗಿದ್ದರೇ ಹೊರತು ಬ್ರಾಹ್ಮಣ ವಿರೋಧಿಯಾಗಿರಲಿಲ್ಲ.
ಕೇರಳರಾಜಮನೆತನದ ಸ್ವಾಮಿಶ್ರೀಸಿದ್ಧೇಶ್ವರಾನಂದ:-ಪುಟ್ಟಪ್ಪನನ್ನು ನನ್ನ ಮಾನಸ ಪುತ್ರನನ್ನಾಗಿ ಸ್ವೀಕರಿಸಿರುವೆ.
ಸ್ವಾಮಿವೀತಮೋಹಾನಂದಜೀ, ಶ್ರೀರಾಮಕೃಷ್ಣ ಆಧ್ಯಾತ್ಮಿಕ ಮಠ, ಕಲ್ಕತ್ತ:- ವಿವೇಕಾನಂದವಾಣಿ ಕುವೆಂಪುಮೂಲಕ ಕನ್ನಡದಲ್ಲಿ ಅಸ್ತಿತ್ವ


ಕಂಡು ರೂಪಾಂತರ ಹೊಂದಿದೆ
ಡಾ||ರಾಜ್:-ಕನ್ನಡಕ್ಕೆ ಹೋರಾಡು ಕನ್ನಡದ ಕಂದಾ…, ಎಲ್ಲಾದರುಇರು ಎಂಥಾದರುಇರು, ಮುಂತಾದ ಕನ್ನಡ ಮಂತ್ರಗಳನ್ನು
ಹೇಳಿಕೊಟ್ಟ ಕನ್ನಡಕುಲಪುರೋಹಿತರು!

ಕುಮಾರಕವಿ ನಟರಾಜ್ (೯೦೩೬೯೭೬೪೭೧)
ಬೆಂಗಳೂರು-೫೬೦೦೭೨

By admin