ಮೇಷ
ಈ ರಾಶಿಯವರಿಗೆ ಸ್ನೇಹಿತರು ಹಿತೈಷಿಗಳ ಭೇಟಿಯಿಂದಾಗಿ ಸಂತಸ. ಸ್ನೇಹಿತರಿಂದ ಉತ್ತಮ ಸಹಕಾರ. ಹಿರಿಯರಿಂದ ಉತ್ತಮ ಸಲಹೆ ಆಶೀರ್ವಾದ ದೊರೆಯುವುದು. ಇದರೊಂದಿಗೆ ಗೆಳೆಯರ ಹಣಕಾಸಿನ ಸುಧಾರಣೆಗಾಗಿ ನೂತನ ಯೋಜನೆಯನ್ನು ರೂಪಿಸುವ ಸಾಧ್ಯತೆಯಿದೆ.
ವೃಷಭ
ಈ ರಾಶಿಯವರಿಗೆ ಸ್ನೇಹ ಮತ್ತು ಸಂಬಂಧಗಳು ಮತ್ತಷ್ಟು ಗಟ್ಟಿಗೊಳ್ಳಲಿದೆ. ಸಂತಸದ ವಾತಾವರಣ ಉಂಟಾಗಲಿದೆ. ಆರ್ಥಿಕ ಸಬಲರಾಗುವಿರಿ. ಮಕ್ಕಳಿಂದ ಸಂತೋಷದ ಸುದ್ದಿಯನ್ನು ಕೇಳುವ ಸಮಯ ಬಂದಿದೆ. ಪತ್ನಿಯ ಆರೋಗ್ಯದ ಬಗ್ಗೆ ಎಚ್ಚರವಹಿಸಿ.
ಮಿಥುನ
ಈ ರಾಶಿಯವರು ಬಂಧು ಬಾಂಧವರ ಜತೆಗೆ ವಿಶೇಷ ಕಾಳಜಿ ವಹಿಸಬೇಕು. ಮಿತಿಮೀರಿದ ನಿರೀಕ್ಷೆಯಿಂದಾಗಿ ಗೊಂದಲ ಸಾಧ್ಯತೆ. ಆಯ್ದು ಮಾಡುವ ಕೆಲಸ ಕಾರ್ಯಗಳು ಸುಸೂತ್ರವಾಗಿ ನೆರವೇರಲಿದೆ.
ಕಟಕ
ಈ ರಾಶಿಯವರು ಹೊಸದಾದ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲು ಇಂದು ದಿನ ಉತ್ತಮವಾಗಿದೆ. ಬಂಧುಗಳಿಂದ ಉತ್ತಮ ಸಹಕಾರ ದೊರೆಯಲಿದೆ. ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಹೆಚ್ಚು ಕಾಳಜಿ ವಹಿಸಲಿದ್ದೀರಿ.
ಸಿಂಹ
ಈ ರಾಶಿಯವರು ಮನೆಯ ಸದಸ್ಯರೊಂದಿಗೆ ಪ್ರಯಾಣದ ಸಾಧ್ಯತೆ. ನಿಮ್ಮ ಭಾವನೆಗಳನ್ನು ಮನೆಯವರೊಂದಿಗೆ ಚರ್ಚಿಸುವುದರಿಂದ ಸಂಕಷ್ಟಗಳು ದೂರವಾಗಲಿದೆ. ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆಯಾಗಲಿದೆ. ಚಿನ್ನಾಭರಣದ ಬಗ್ಗೆ ಎಚ್ಚರಿಕೆ ವಹಿಸಿ.
ಕನ್ಯಾ
ಈ ರಾಶಿಯವರಿಗೆ ಮಾನಸಿಕ ಒತ್ತಡ ಹೆಚ್ಚಾಗುವ ಸಂಭವವಿದೆ. ವ್ಯಾಪಾರ ವಹಿವಾಟಿನಲ್ಲಿ ಪಾಲುದಾರಿಕೆ ಅಥವಾ ಒಪ್ಪಂದಗಳು ಏರ್ಪಡಲಿದೆ. ಇಂದು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದೀರಿ. ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಆರ್ಥಿಕ ಪ್ರಬಲರಾಗಬಹುದು.
ತುಲಾ
ಈ ರಾಶಿಯವರು ತಮ್ಮ ಸಾಧನೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಅವಕಾಶ. ಕೆಲಸ ಕಾರ್ಯ, ಯೋಜನೆಗಳಲ್ಲಿ ಉನ್ನತಿ ಸಾಧಿಸಲು ಜನರಿಂದ ಉತ್ತಮ ಸಹಾಯ ಸಹಕಾರಗಳು ದೊರಕಲಿವೆ. ಮಾತನಾಡುವಾಗ ಎಚ್ಚರಿಕೆ ವಹಿಸಿ, ವಾಗ್ವಾದ ಬೇಡ.
ವೃಶ್ಚಿಕ
ಈ ರಾಶಿಯವರಿಗೆ ಕೆಲಸದ ಒತ್ತಡದಿಂದಾಗಿ ಮಾನಸಿಕವಾಗಿ ದುಃಖ ಹೆಚ್ಚಾಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ. ಪತಿಯ ಮಾತುಗಳನ್ನು ಗೌರವಿಸಿ ಸಂತಸದಿಂದಿರಿ. ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಿಡುವಿಲ್ಲದಂತೆ ತೊಡಗಿಕೊಳ್ಳುವಿರಿ.
ಧನು
ಈ ರಾಶಿಯವರು ಮನೆಯ ಅಲಂಕಾರಿಕ ವಸ್ತುಗಳಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದಾರೆ. ವಾಸದ ಮನೆಯಲ್ಲಿ ಬದಲಾವಣೆ ಸಾಧ್ಯತೆಯಿದೆ. ಅನಿರೀಕ್ಷಿತ ವ್ಯಕ್ತಿಗಳ ಪರಿಚಯದಿಂದಾಗಿ ಸಂತೋಷ ಮೂಡುವ ಸಾಧ್ಯತೆಯಿದೆ. ಅಪರಿಚಿತರ ಬಗ್ಗೆ ಎಚ್ಚರಿಕೆಯಿಂದಿರುವುದು ಒಳಿತು.
ಮಕರ
ಈ ರಾಶಿಯವರಿಗೆ ಮನೆ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರಲಿದೆ. ಅನುಭವಿ ಕೆಲಸಗಾರರಿಗೆ ಎಲ್ಲಿಲ್ಲದ ಬೇಡಿಕೆ ಬರಲಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅವಕಾಶ ಕೂಡಾ ಒದಗಿ ಬರಲಿದೆ. ಸಂಶೋಧನೆ ಮತ್ತು ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿದವರಿಗೆ ಹೆಚ್ಚಿನ ಪ್ರಶಂಸೆ ಸಿಗುವ ಸಾಧ್ಯತೆಯಿದೆ.
ಕುಂಭ
ಈ ರಾಶಿಯವರಿಗೆ ವ್ಯಾಪಾರ – ವ್ಯವಹಾರಗಳ ಸುಧಾರಣಾ ಕಾರ್ಯಗಳಿಗೆ ಇದು ಉತ್ತಮ ಸಮಯ. ಕುಟುಂಬಕ್ಕೆ ಹಣಕಾಸಿನ ಭದ್ರತೆಯಿಂದಾಗಿ ಕೊಂಚ ಮಟ್ಟಿಗೆ ನೆಮ್ಮದಿಯಿದೆ. ಕೌಟುಂಬಿಕ ವಿಚಾರಗಳ ಬಗ್ಗೆ ಹೆಚ್ಚಿನ ಗಮನ ವಹಿಸುವುದು ಸೂಕ್ತವಾಗಿದೆ.
ಮೀನ
ಈ ರಾಶಿಯವರು ನಿಮ್ಮ ಬಂಧು ಬಾಂಧವರ ಸಲಹೆಗಳಿಗೆ ಮಾನ್ಯತೆ ನೀಡಿ, ಸಾಮಾಜಿಕ ಕಾರ್ಯಕರ್ತರಿಗೆ ರಾಜಕೀಯ ವ್ಯಕ್ತಿಗಳಿಂದ ಒತ್ತಡ ಹೆಚ್ಚುವ ಸಾಧ್ಯತೆಗಳಿವೆ. ಹಣಕಾಸಿನ ಸಮಸ್ಯೆ ದೂರವಾಗಲಿದೆ. ಕುಟುಂಬದ ಸದಸ್ಯರ ಬಗ್ಗೆ ಅಪವಾದ ಸರಿಯಲ್ಲ.