ಮೈಸೂರು: ಬುದ್ದಿಮಾಂದ್ಯ ಮಹಿಳೆ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ನಗರದ ಕೆ.ಆರ್. ಆಸ್ಪತ್ರೆಯಲ್ಲಿ ನಡೆದಿದೆ
ಮಧ್ಯರಾತ್ರಿ ಮೂವತ್ತು ವರ್ಷದ ಬುದ್ದಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ನಡೆದಿದ್ದು, ಕಾಮುಕ ಪರಾರಿಯಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ಕಾಮುಕ ನಡುರಾತ್ರಿ ವಾರ್ಡ್ ನ ಕಿಟಿಕಿಯ ಗ್ರಿಲ್ ಮುರಿದು ಒಳ ನುಗ್ಗಿದ್ದು ಒಳಗೆ ನಿದ್ದೆ ಮಾಡುತ್ತಿದ್ದ ಬುದ್ದಿ ಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಬಗ್ಗೆ ಅದೇ ವಾರ್ಡ್ ನ ವೃದ್ದೆ ಯೊಬ್ಬರು ಈ ಬಗ್ಗೆ ಗೊತ್ತಾಗಿದ್ದು, ಈ ಸಂಬಂಧ ಅವರು ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ವಾರದ ಹಿಂದೆ ಈ ಪೈಶಾಚಿಕ ಘಟನೆ ನಡೆದು ಅದು ಗೊತ್ತಾಗಿದ್ದರೂ ತಾವೇಕೆ ಪೊಲೀಸ್, ಕೋರ್ಟ್ ಅಂತ ತೊಂದರೆ ತೆಗೆದುಕೊಳ್ಳುವುದೇಕೆಂದು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗಿದೆ ಎಂಬ ಆರೋಪವು ಕೇಳಿ ಬಂದಿದೆ.
ಇದೀಗ ಈ ಪ್ರಕರಣನ್ನು ಮಾನವ ಹಕ್ಕುಗಳ ಸೇವಾ ಸಮಿತಿ ಬಹಿರಂಗ ಮಾಡಿದೆ. ಯಾವಾಗ ಈ ಪ್ರಕರಣ ಬಯಲಾಯಿತೋ ಭದ್ರತಾ ಆಸ್ಪತ್ರೆ ಸಿಬ್ಬಂದಿ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿರುವ ದೇವರಾಜ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.