ಮೈಸೂರು, 10, ಮಾರ್ಚ್ 2022 :- ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆಅಂಧ ಹೆಣ್ಣು ಮಕ್ಕಳ ಉಚಿತ ವಸತಿಶಾಲೆ ಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಶಾಲೆಯ ಆವರಣದಲ್ಲಿ ಆಚರಿಸಲಾಗಿತ್ತು. ಸಮಾರಂಭದಲ್ಲಿ AGEE’S ಇಂಗ್ಲಿಷ್ ಲರ್ನಿಂಗ್ ವಿಕಲಚೇತನರ ಶಾಲೆ ಅಕಾಡೆಮಿಯ ತರಬೇತಿ ಸಲಹೆಗಾರರಾದ ಶ್ರೀಮತಿ ಗೀತಾ ಲತಾ, ಡ್ರಮ್ಮರ್ ಮತ್ತು ರಿದಮ್ ವಾದಕರಾದ ಕು|| ರಚನಾ ವರ್ಷ ಅವರು ಹಾಗೂ ಸೈಕಲ್ ಪ್ಯೂರ್ ಅಗರಬತ್ತಿಯ ಹಿರಿಯ ಸಿಬ್ಬಂದಿ ಶ್ರೀಮತಿ ರಾಧಾ ಕೆ. ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

AGEE’Sನಲ್ಲಿ ಇಂಗ್ಲಿಷ್ ಲರ್ನಿಂಗ್ ಅಕಾಡೆಮಿಯ ತರಬೇತಿ ಸಲಹೆಗಾರರಾದ ಶ್ರೀಮತಿ ಗೀತಾ ಲತಾ ಅವರು ಮಾತನಾಡುತ್ತ ನಾವು ಎಲ್ಲಾನೋಡಿ ಅರ್ಥೈಸಿಕೊಳ್ಳುತ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ ನೀವು ನಿಮ್ಮ ಅಂತರ್‍ಶಕ್ತಿ ಮತ್ತು ದೃಷ್ಠಿಯಿಂದ ಅರ್ಥಮಾಡಿಕೊಂಡು ನೆನಪಿನಲ್ಲಿ ಇಟ್ಟುಕೊಂಡು ಬೆಳೆಯುತ್ತಿರಿ ಈ ನಿಮ್ಮ ಶಕ್ತಿಗೆ ನಮ್ಮ ಪ್ರಣಾಮಗಳು ಅವಕಾಶಗಳು ಅಗಾಧವಾಗಿದೆ ನಮ್ಮ ಕೌಶಲ್ಯ ಹಾಗು ಸಾಮಥ್ರ್ಯಗಳನ್ನು ವೃದ್ಧಿಸಿಕೊಳಬೇಕಾಗಿದೆ ಎಂದು ಅವಕಾಶಗಳು ಮತ್ತು ಅದರ ಅಗತ್ಯತೆಗಳನ್ನು ವಿವರಿಸಿದರು. ನಂತರ ಡ್ರಮ್ಮರ್ ಮತ್ತು ರಿದಮ್ ವಾದಕರಾದ ರಚನಾವರ್ಷ ಅವರು ಡ್ರಮ್ಮಿಂಗ್ನಲ್ಲಿ 8 ಗ್ರೇಡ್ಗಳನ್ನು ಪೂರ್ಣಗೊಳಿಸಿದ್ದು, ಟ್ರಿನಿಟಿ ಕಾಲೇಜ್ ಆಫ್ ಲಂಡನ್ನಿಂದ ಡಿಸ್ಟಿಕ್ಷನ್ ಮತ್ತು ಮೆರಿಟ್ಗಳ ಜೊತೆಗೆ ಮೈಸೂರಿನ ಪ್ರಥಮ ಬಾಲಕಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಅಲ್ಲದೆ, ಈಕೆ `ಯುವಶ್ರೀ ಪ್ರಶಸ್ತಿ’, `ವರ್ಷದ ಯುವ ಸಾಧಕಿ-2018’ ಮತ್ತು `ಡಾಟರ್ ಆಫ್ ದಿ ಇಯರ್-2019’ನಂತಹ ಪ್ರತಿಷ್ಟಿತ ಪ್ರಶಸ್ತಿಗಳನ್ನು ಸ್ವೀಕರಿಸಿರುತ್ತಾರೆ. ಇವರು ಡ್ರಮ್ಮರ್‍ನ್ನು ನುಡಿಸಿ ನೆರೆದಿದ್ದವರನ್ನು ಮನರಂಜಿಸಿದರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಡ್ರಮ್ಮರ್‍ನ್ನು ನುಡಿಸಿ ಅಂಧರು ಸಹಃ ಡ್ರಮ್ಮರ್‍ನ್ನು ಕಲಿಯಬಹುದು ಎಂದು ತೊರಿಸಿಕೊಟ್ಟರು, ನಂತರ ಹೆಣ್ಣುಮಕ್ಕಳು ಅಸಕ್ತಿಯಿಂದ ಡ್ರಮ್ಮರ್ ಸ್ಪರ್ಶಿಸಿ ಅದರ ಪರಿಚವನ್ನು ಮಾಡಿಕೊಂಡರು

ಮಹಿಳೆಯರ ವಿವಿಧ ಅಂಶಗಳಲ್ಲಿನ ಶಕ್ತಿಗಳನ್ನು ಪ್ರತಿನಿಧಿಸಲು ಮತ್ತು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿ,  ಅವಕಾಶ ಎಂಬುದು ಎಲ್ಲರಿಗೂ ತೆರೆದಿರುತ್ತದೆ ಎಂಬುದನ್ನು ಅವರಿಗೆ ಅರ್ಥ ಮಾಡಿಕೊಡುವುದಕ್ಕಾಗಿ ಸಂಸ್ಥೆಯು ಕು|| ರಚನಾವರ್ಷ ಮತ್ತು ಶ್ರೀಮತಿ ಗೀತಾ ಲತಾ ಅವರನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.

ಈ ಸಂಭ್ರಮಾಚರಣೆ ಕುರಿತು ಸೈಕಲ್ ಪ್ಯೂರ್ ಅಗರಬತ್ತಿಯ ಹಿರಿಯ ಸಿಬ್ಬಂದಿಯಾದ ಶ್ರೀಮತಿ ರಾಧಾ ಕೆ. ಅವರು ಮಾತನಾಡಿ, “ಆರ್ಎಂಎಸ್ಡಿಯಲ್ಲಿ ವಿದ್ಯಾರ್ಥಿಗಳಿಗೆ ಈ ಅದ್ಭುತ ದಿನವನ್ನು ಆಚರಿಸಲು ನಾವು ಬದ್ಧರಾಗಿದ್ದೇವೆ. ನಾವು ಯಾರು ಎಂದು ಅರ್ಥಮಾಡಿಕೊಂಡು ಮತ್ತು ಪರಸ್ಪರ ಬೆಂಬಲಿಸಿದ್ದಲ್ಲಿ ನಾವು ಸಾಧಿಸಬಹುದಾದ ಅಚ್ಚರಿಯ ವಿಷಯಗಳನ್ನು ಸಂಭ್ರಮಿಸುವುದನ್ನು ಈ ದಿನ ನಮಗೆ ನೆನಪಿಸುತ್ತದೆ’’ ಎಂದರು.