ಮಹಾಜನ ಶ್ರೀ ರಾಮ ಮಂದಿರದಲ್ಲಿ ಶ್ರೀರಾಮ ನವಮಿ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ ಮಾತನಾಡಿದರು
‘ದೈವಿ ಪುರುಷನಾದ ರಾಮನ ಬದುಕಿನ ಆದರ್ಶಗಳು ಎಲ್ಲ ಧರ್ಮದ ಯುವಜನರಿಗೆ ಸ್ಫೂರ್ತಿ’
ರಾಮನವಮಿ ಪ್ರಯುಕ್ತ ಇಲ್ಲಿಯ ಹನುಮಾನ ಮಂದಿರದಲ್ಲಿ ಜೈಶ್ರೀರಾಮ ಸೇನಾ ಸಂಘಟನೆಯ ಪದಾಧಿಕಾರಿಗಳು ಆಯೋಜಿಸಿದ್ದಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಮ ವನವಾಸಕ್ಕೆ ತೆರಳಿದಾಗ ಪತ್ನಿ ಸೀತೆಯೂ ಜೊತೆಯಾಗಿ ಹೋಗುವ ಸನ್ನಿವೇಶ ಎಲ್ಲ ದಂಪತಿಗೆ ಮಾರ್ಗದರ್ಶಿ ಆಗಿದೆ. ಜೀವನದಲ್ಲಿ ಎಷ್ಟೇ ಕಷ್ಟ ಬಂದಾಗಲೂ ಪತಿ- ಪತ್ನಿ ಕೈಜೋಡಿಸಿ ಸಂಸಾರದ ನೌಕೆ ಸಾಗಿಸಬೇಕು ಎಂಬ ಅಮೂಲ್ಯ ಸಂದೇಶ ಅದು ಸಾರುತ್ತದೆ ಎಂದರು.
ಜಯಂತಿಗಳು ಮೆರವಣಿಗೆ ಮಾಡುವುದರಿಂದ ಸಾರ್ಥಕ ಆಗುವುದಿಲ್ಲ. ಬದಲಿಗೆ ಮಹನೀಯರ ಆದರ್ಶಗಳನ್ನು ಬದುಕಿನಲ್ಲಿ ಆಚರಣೆಗೆ ತಂದಾಗ ಮಾತ್ರ ಅರ್ಥ ಬರುತ್ತದೆ ಎಂದು ಹೇಳಿದರು.
ಎಲ್ಲರೂ ರಾಮಾಯಣ ನಿತ್ಯ ಪಠಿಸಬೇಕು. ಅದರಲ್ಲಿನ ಮಾನವೀಯ ಮೌಲ್ಯಗಳನ್ನು ಎಲ್ಲರೂ ಪಾಲಿಸಬೇಕು’ ಎಂದರು.
ಶ್ರೀ ರಾಮ ಮಂದಿರ ಅಧ್ಯಕ್ಷರಾದ ಇಳೈ ಆಳ್ವಾರ್ ಸ್ವಾಮೀಜಿ ,ಉಪಾಧ್ಯಕ್ಷರಾದ ರಾಂಪ್ರಸಾದ್ ,ಕಾರ್ಯದರ್ಶಿ ಮಾಧುರಾವ್ ,ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ್ ಅಯ್ಯಂಗಾರ್ ,
ನಿರ್ದೇಶಕ ಮಂಡಳಿ ಅಶ್ವತ್ಥ್ ನಾರಾಯಣ್, ವಿ. ಎನ್. ಕೃಷ್ಣ , ಖಜಾಂಜಿ ಪಿ ಎಸ್ ಶೇಷಾದ್ರಿ ,ಸಿ ವಿ ವೆಂಕಟೇಶ್ ಮೂರ್ತಿ ,ಅರುಣ್ ,ಹಾಗೂ ಇನ್ನಿತರರು ಹಾಜರಿದ್ದರು