ಕಳೆದೆರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ರಾಮನವಮಿ ಆಚರಣೆಯಾಗಿರಲಿಲ್ಲ. ಸಾರ್ವಜನಿಕವಾಗಿ ಪ್ರಸಾದ ವಿತರಣೆಯಾಗಿರಲಿಲ್ಲ. ಈ ಬಾರಿ ಕೋವಿಡ್ ನಿವಾರಣೆಯಾಗಿರುವುದರಿಂದ ಶ್ರದ್ಧಾಭಕ್ತಿಯಿಂದ ಅದ್ಧೂರಿಯಾಗಿ ಜನ ರಾಮನವಮಿಯನ್ನು ಆಚರಿಸಿದರು. ಸಾಂಸ್ಕ್ರತಿಕ ನಗರ ಮೈಸೂರಿನ ವಿವಿಧ ದೇವಾಲಯಗಳಲ್ಲಿ ರಾಮನವಮಿ ಆಚರಣೆ ವಿಜೃಂಭಣೆಯಿಂದ ನಡೆಯಿತು.
ಜಯನಗರದ ಶ್ರೀರಾಮ ಮಂದಿರ ದೇವಸ್ಥಾನ, ಕೃಷ್ಣಮೂರ್ತಿಪುರಂ ರಾಮ ಮಂದಿರ ಸುಣ್ಣದಕೇರಿ ಶ್ರೀರಾಮ ಮಂಂದಿgಗ ಳಲ್ಲಿ ವಿಶೇಷ ಪೂಜೆ, ಅಭಿಷೇಕ, ಹೂವಿನ ಅಲಂಕಾರ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇಂದು ಬೆಳಗ್ಗೆಯಿಂದಲೇ ಜರುಗಿದವು.
ರಾಮನ ಭಕ್ತರು ದೇವಾಲಯಗಳಿಗೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಆಂಜನೇಯ ಹಾಗೂ ರಾಮನ ದೇವಾಲಯಗಳನ್ನು ತಳಿರುತೋರಣಗಳಿಂದ ಸಿಂಗರಿಸಲಾಗಿತ್ತು. ಎಲ್ಲ ದೇವಾಲಯಗಳ ಮುಂದೆ ಪಾನಕ, ಕೋಸಂಬರಿ, ಮಜ್ಜಿಗೆ ವಿತರಿಸಲಾಯಿತು. ಸರದಿ ಸಾಲಿನಲ್ಲಿ ನಿಂತ ಭಕ್ತರು ಪ್ರಸಾದ ಸ್ವೀಕರಿಸುತ್ತಿದ್ದುದು ಕಂಡುಬಂತು.
ಇದಲ್ಲದೆ, ವಿವಿಧ ದೇವಾಲಯಗಳಲ್ಲಿ ಸಂಗೀತೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿತ್ತು. ರಾಮನವಮಿ ಅಂಗವಾಗಿ ಶ್ರೀರಾಮ ರಥೋತ್ಸವ ಕೂಡ ನಡೆಯಿತು. ವಿವಿಧೆಡೆ ಸಾಂಸ್ಕೃತಿಕ, ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜಯನಗರ ಶ್ರೀ ರಾಮ ಮಂದಿರ ೫೬ ನೇ ಶ್ರೀರಾಮ ಮಹೋತ್ಸವ ವಿಶೇಷವಾಗಿ ನೆರವೇರಿತು.
ಪ್ರತಿ ದಿನವು ಬೆಳಿಗ್ಗೆ 7 ರಿಂದ 11 ಗಂಟೆಯವರೆಗೆ ದೇವರಿಗೆ ಸುಪ್ರಬಾತ ಸೇವೆ, ಸಂಕಲ್ಪ, ಅಬಿಷೇಕ, ಅರ್ಚನೆಗಳು,ವೇದಪಾರಾಯಣ, ರಾಮಯಣ ಪಾರಯಣ ನೆಡಯುತ್ತವೆ. ಹಾಗೂ ಪ್ರತಿ ದಿನ ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮದ ನಂತರ ಮಹಾಮಂಗಳಾರತಿ ನೆಡಸಲಾಗುವುದು. ಎಂದು ಅಧ್ಯಕ್ಷರು ಅರುಣ್ ಶರ್ಮ ಹಾಗೂ ಶ್ರೀಧರ್ ಅರ್ಚಕರು,ಕಾರ್ಯಕ್ರಮ ನೆರವೇರಿಸಲಾಗುವುದು ಎಂದು ತಿಳಿಸಿದರು.