ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಸೋಂಕಿತರಿಗೆ ಆಕ್ಸಿಜನ್ ಸಿಗದೆ ಸಾವುಗಳು ಮೇಲಿಂದ ಮೇಲೆ ಸಂಭವಿಸತೊಡಗಿದ್ದವು. ಜತೆಗೆ ರಾಜ್ಯದಲ್ಲಿ ಆಕ್ಸಿಜನ್ ಹಾಹಾಕಾರ ಉಂಟಾಗಿರುವುದು ಭಾರೀ ಸುದ್ದಿಯಾಗಿತ್ತು.
ಕರ್ನಾಟಕದಲ್ಲಿ ಆಕ್ಸಿಜನ್ ಕೊರತೆ ಸುದ್ದಿ ಹರಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ರಾಜ್ಯಕ್ಕೆ ಆಕ್ಸಿಜನ್ ಸರಬರಾಜಿಗೆ ಮುಂದಾಗಿ ಕಳೆದ ಬುಧವಾರ ಕಳುಹಿಸಲಾಗಿತ್ತು. ಇದೀಗ ಬೇಡಿಕೆಗನುಗುಣವಾಗಿ ಓಡಿಶಾ ರಾಜ್ಯದ ಕಾಳಿಂಗ ನಗರದಿಂದ ಗುರುವಾರ ಮಧ್ಯಾಹ್ನ3.10ಕ್ಕೆ 120 ಟನ್ ಆಕ್ಸಿಜನ್ ಹೊತ್ತು ಹೊರಟ ರೈಲು ಶುಕ್ರವಾರ ಮುಂಜಾನೆ ವೈಟ್‌ಫೀಲ್ಡ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದೆ. ಇನ್ನೊಂದು ರೈಲು ಜಾರ್ಖಂಡ್‌ನ ಟಾಟಾ ನಗರದಿಂದ 120 ಟನ್ ಆಕ್ಸಿಜನ್ ಹೊತ್ತ ರೈಲು ಗುರುವಾರ ಮಧ್ಯಾಹ್ನ12.40ಕ್ಕೆ ಹೊರಟಿದ್ದು. ಬೆಂಗಳೂರಿನ ವೈಟ್‌ಫೀಲ್ಡ್‌ಗೆ ಶನಿವಾರ ಸಂಜೆ 5ಗಂಟೆಗೆ ತಲುಪಲಿದೆ
ಈ ಎರಡೂ ರೈಲುಗಳು 6 ಆಕ್ಸಿಜನ್ ಕಂಟೈನರ್‌ಗಳನ್ನು ಒಳಗೊಂಡಿವೆ. ಎರಡೂ ರೈಲುಗಳಿಂದ ಒಟ್ಟು 240 ಟನ್ ಆಕ್ಸಿಜನ್ ಸಿಗಲಿದೆ ಎಂದು ಹೇಳಲಾಗಿದೆ.