ಚಾಮರಾಜನಗರ: ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ರಾಜ ಋಷಿ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿಆಚರಿಸಲಾಯಿತು.
ಶ್ರೀ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ಬಿ ಎಸ್ ವಿ ಪ್ರತಿಷ್ಠಾನದ ಅಧ್ಯಕ್ಷರಾದ ವೆಂಕಪ್ಪ ನಾಗಪ್ಪಶೆಟ್ಟಿ ರವರು ಸಲ್ಲಿಸಿ ಶ್ರೀ ಭಗೀರಥ ಮಹರ್ಷಿ ಸಾಧನೆ ಅಪಾರವಾಗಿದ್ದು ಅವರ ಆದರ್ಶಗಳನ್ನು ಮತ್ತು ಅವರ ಇತಿಹಾಸವನ್ನು ತಿಳಿಸಿ ಅವರಂತೆ ಸಮಾಜಮುಖಿ ಕಾರ್ಯವನ್ನು ಮಾಡುವ ಸಂಕಲ್ಪವನ್ನು ಎಲ್ಲರೂ ನಿರ್ವಹಿಸಬೇಕು ಎಂದು ತಿಳಿಸಿದರು.
ಯುವ ಮುಖಂಡರಾದ ಆನಂದ್ ಭಗೀರಥ ಮಾತನಾಡಿ ಭಗೀರಥ ಮಹರ್ಷಿಗಳು ಎಷ್ಟೇ ಕಷ್ಟಪಟ್ಟರೂ ಅಸಾಧ್ಯವಾದುದನ್ನು ಸಾಧ್ಯವಾಗಿಸಿದವರು. ದೇವಗಂಗೆ ಯನ್ನು ಸ್ವರ್ಗ ಲೋಕದಿಂದ ಭೂ ಲೋಕಕ್ಕೆ ತರುವ ಮೂಲಕ ಮನುಷ್ಯನಿಗೆ ಬಹು ಉಪಕಾರಿಯಾದ ಕಾರ್ಯವನ್ನು ಮಾಡಿದ್ದಾರೆ ಎಂದರು.
ಜಿಲ್ಲಾ ಉಪ್ಪಾರ ಯುವಕ ಸಂಘದ ಅಧ್ಯಕ್ಷರಾದ ಜೈಕುಮಾರ್ ಮಾತನಾಡಿ ಚಾಮರಾಜನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಭಗೀರಥ ಜಯಂತಿಯನ್ನು ಆಚರಿಸಿ ರುವುದು ಬಹಳ ಸಂತೋಷವಾಗಿದೆ. ಭಗೀರಥ ಮಹರ್ಷಿಗಳ ಜೀವನ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಸಾಹಿತಿ ಸೋಮಶೇಖರ ಬಿಸಲ್ವಾಡಿ ಮಾತನಾಡಿ ಭಗೀರಥ ಮಹರ್ಷಿಗಳು ಉಪ್ಪು ಮತ್ತು ನೀರಿನ ಶ್ರೇಷ್ಠತೆಯ ದಿವ್ಯ ಶಕ್ತಿಯಾಗಿದ್ದಾರೆ. ಭೂಲೋಕಕ್ಕೆ ನೀರನ್ನು ತರುವ ಮೂಲಕ ಇಡೀ ಭಾರತವನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ ಕೋಟ್ಯಾಂತರ ಜನರಿಗೆ ಆರ್ಥಿಕ ಶಕ್ತಿಯನ್ನು ನೀಡಿದ್ದಾರೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಸೂರ್ಯವಂಶದ ಶ್ರೇಷ್ಠ ರಾಜರಾಗಿ ವಿವೇಕದಿಂದ ರಾಜ್ಯಭಾರವನ್ನು ಮಾಡುತ್ತಿದ್ದ ಭಗೀರಥರು ತಮ್ಮ ಪೂರ್ವಿಕರ ಆತ್ಮಗಳಿಗೆ ಹಾಗೂ ಬೂದಿಯಾದ ತಮ್ಮ ಪೂರ್ವಿಕರ ಸಾವಿರಾರು ಸಹೋದರರ ಪವಿತ್ರಗೊಳಿಸಲು ಬ್ರಹ್ಮ ಮತ್ತು ಈಶ್ವರನನ್ನು ಕುರಿತು ಉಗ್ರ ತಪಸ್ಸು ಮಾಡಿ ಸ್ವರ್ಗ ಲೋಕದಿಂದ, ಭೂಲೋಕಕ್ಕೆ ಮತ್ತು ಪಾತಾಳಲೋಕಕ್ಕೆ ಗಂಗೆಯನ್ನು ಹರಿಸಿದವರು. ಇಂದಿನ ಕೇಂದ್ರ ಸರ್ಕಾರ ಗಂಗಾನದಿಯ ಶುದ್ಧೀಕರಣದ ಮೂಲಕ ನೀರಿನ ಸ್ವಚ್ಛತೆ ಮತ್ತು ಶ್ರೇಷ್ಠತೆಯ ಮಹತ್ವವನ್ನು ಸಾರುತ್ತಿದೇ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಚಳುವಳಿಗಾರರ ಆದ ಚಾ ರಂ ಶ್ರೀನಿವಾಸಗೌಡ ಹಾಗೂ ಸಾಹಿತಿ ಶ್ರೀಧರ್ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ರಾಧಾಕೃಷ್ಣ, ರಾಜೇಂದ್ರ, ದ್ವಾರಕೀಶ್, ಉಪ್ಪಾರ ಸಂಘದ ಕಾರ್ಯದರ್ಶಿ ನಾಗರಾಜು, ಮೋಹನ್ ಗೌಡರು ಉಪಸ್ಥಿತರಿದ್ದರು.
