ಚಾಮರಾಜನಗರ: ಕಾರ್ಮಿಕರು ತಮ್ಮ ಮಕ್ಕಳ ಉಜ್ವಲ ಭವಿ?ಕ್ಕೆ ಶಿಕ್ಷಣಕೊಡಿಸುವ ಕಾರ್ಯ ಮಾಡಬೇಕು ಎಂದು ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು. ನಾಗರಾಜು ಸಲಹೆ ನೀಡಿದರು.
ನಗರಸಭೆ ೧೫ ನೇ ವಾರ್ಡಿನಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟದ ವತಿಯಿಂದ ಅಧಿಕೃತ ಕಾರ್ಮಿಕರ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳಿಗಾಗಿ ತೆರೆದಿರುವ ಶಿಶುಪಾಲನಾ ಕೇಂದ್ರದಲ್ಲಿ ಒಂದು ವ? ಪೂರೈಸಿದ ಮಕ್ಕಳಿಗೆ ಪ್ರಗತಿ ಕಾರ್ಡ್ ವಿತರಿಸಿ ಮಾತನಾಡಿದರು.
ಕಾರ್ಮಿಕರ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ವನ್ನು ಪಡೆದು ಕೊಂಡು ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತರುವಂತೆ ಬೆಳೆಯಬೇಕು. ಶಿಶುಪಾಲನ ಕೇಂದ್ರ ದಲ್ಲಿ ಗುಣಮಟ್ಟದ ಪೌಷ್ಟಿಕ ಆಹಾರ ವಸ್ತುಗಳನ್ನು ನೀಡಲಾಗುತ್ತಿದ್ದು, ಅದನ್ನು ಸದುಪಯೋಗ ಪಡಿಸಿಕೊಂಡು, ದೇಶದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದರು.
ರಾಜ್ಯಕಟ್ಟಡ ಕಾರ್ಮಿಕರ ಒಕ್ಕೂಟದಜಿಲ್ಲಾಧ್ಯಕ್ಷ ನಿರ್ಮಲ್ ಶೆಟ್ಟಿ ಮಾತನಾಡಿ, ಕಾರ್ಮಿಕರ ಕಾರ್ಡ್ ಹೊಂದಿರುವ ಮಕ್ಕಳು ಸರಕಾರದ ಸವಲತ್ತು ಗಳನ್ನು ಸದ್ಬಳಕೆ ಮಾಡಿಕೊಂಡು ಭಾರತಕ್ಕೆ ಕೀರ್ತಿ ತರುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಶುಪಾಲನಾ ಕೇಂದ್ರದ ಶಿಕ್ಷಕಿ ರಂಜಿತಾ, ಸಹಾಯಕಿ ಸುಜಾತ, ಪೋ?ಕರು, ಮಕ್ಕಳು ಹಾಜರಿದ್ದರು.
