ಮೈಸೂರು -ಮಾ. 14 ಸುವರ್ಣ ಬೆಳಕು ಫೌಂಡೇಷನ್ ಎ.ಎಸ್.ಜಿ. ಕಣ್ಣಿನ ಆಸ್ಪತ್ರೆ ಹಾಗೂ sಸುಯೋಗ್ ಆಸ್ಪತ್ರೆ ಸಹಯೋಗದೊಂದಿಗೆ ಮೈಸೂರಿನ ಗಂಗಾಮತಸ್ಥರ ಸಮುದಾಯ ಭವನ ಸುಣ್ಣದಕೇರಿ ೮ನೇ ಕ್ರಾಸ್‌ನಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಮಾಜ ಸೇವಕ ರಘುರಾಮ್ ವಾಜಪೇಯಿರವರು ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಕಡೆ ಗಮನ ಕೊಡದೆ ಎಲ್ಲಾರು ಹಣದ ಹಿಂದೆ ಹೋಗುತ್ತಿದ್ದು. ಆರೋಗ್ಯ ಹಾಳುಮಾಡುಕೊಳ್ಳುತಿದ್ದಾರೆ.ಅವರ ಗುರಿ ಹಣ ಸಂಪಾದನೆ ಮಾಡಿ ಕೊಡಿಟ್ಟು ಮುಂದೆ ವಯಸ್ಸಾದ ಮೇಲೆ ಹಣ ಆಸ್ಪತ್ರೆ ನೀಡುತ್ತಿದ್ದಾರೆ. ಅದರಿಂದ್ದ ಸಾರ್ವಜನಿಕರು ಸ್ವಲ್ಪ ಆರೋಗ್ಯದ ಕಡೆ ಗಮನ ನೀಡಿ ಹಾಗೂ ನಮ್ಮ ನಿಮ್ಮ ಅಚ್ಚು ಮೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಆರೋಗ್ಯ ತಪಾಸಣಾ ಶಿಬಿರ ಏರ್ಪಟ್ಟು ಮಾಡಿರುವುದರಿಂದ್ದ ಅರ್ಥಪೂರ್ಣ ಕಾರ್ಯಕ್ರಮ ಎಂದು ಹಿತನುಡಿದರು.
ಬಳಿಕ ಮಾತನಾಡಿದ ಮಾಜಿ ನಗರ ಪಾಲಿಕೆ ಸದಸ್ಯ ಕಾಂಗ್ರೇಸ್ ಮುಖಂಡಪ್ರದೀಪ್ ಕುಮಾರ್ ಸಂಘ ಸಂಸ್ಥೆಗಳು ಈ ರೀತಿ ಆರೋಗ್ಯ ತಪಾಸಣಾ ಕಾರ್ಯಕ್ರಮ ಮಾಡುತ್ತಾ ಮೊಹಲ್ಲಾಗಳಲ್ಲಿ ನಗರಗಳಲ್ಲಿ ಈ ರೀತಿಯ ಸಣ್ಣ ಸಣ್ಣ ಆರೋಗ್ಯ ತಪಸಾಣಾ ಕಾರ್ಯಕ್ರಮದಿಂದ ಎಲ್ಲಾರಿಗು ಆರೋಗ್ಯದ ಕಾಳಜಿ ಹಾಗೂ ಮಾಹಿತಿಯನ್ನು ನೀಡಿ ಆರೋಗ್ಯವಂತರಾಗಿಸಬೇಕು.ನಮ್ಮ ನಿಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು. ಮತ್ತು ದೇಶದಲ್ಲಿ ಸರ್ಕಾರದಿಂದ್ದ ಜನರಿಗೆ ಉತ್ತಮ ಶಿಕ್ಷಣ.ಹಾಗೂಆರೋಗ್ಯದ ಸರಿಯಾದ ಸವಲತ್ತು ಸಿಗಬೇಕು ಎಂದರು.
ಶಿಬಿರದಲ್ಲಿ ಕಂಪ್ಯೂಟರೈಸ್ಟ್ ಕಣ್ಣಿನ ತಪಾಸಣೆ ( ಎ.ಆರ್. ಯಂತ್ರ)ದೂರದೃಷ್ಟಿ ಮತ್ತು ಸಮೀಪದೃಷ್ಟಿ ಪರೀಕ್ಷೆಗಳುನುರಿತ ಕೌನ್ಸಿಲಿಂಗ್ ತಂಡದಿಂದ ಸಲಹೆಕುಟುಂದ ಸದಸ್ಯರಿಗೆ ರೂ. ೬೦೦ ಮೌಲ್ಯದ ತಪಾಸಣಾ ಕೂಪನ್ ರಿಪೋರ್ಟ್ | ರೇಎಕ್ಸ್ ರೇ ರಕ್ತ ಪರೀಕ್ಷೆ / ಬಯೋಪ್ಪಿ ರಿಪೋರ್ಟ್ ಗಳನ್ನು.ಶಿಬಿರದಲ್ಲಿ ಜಿಆರ್‌ಬಿಎಸ್, ಬಿಪಿ, ಇಸಿಜಿ ಉಚಿತ ತಜ್ಞವೈದ್ಯರೊಂದಿಗೆ ಸಮಲೋಚನೆ ನೆಡಸಲಾಯಿತು. ಕಾರ್ಯಕ್ರದಲ್ಲಿ ಸುವರ್ಣಬೆಳಕು ಫೌಂಡೇಷನ್ ಅಧ್ಯಕ್ಷ ಮಹೇಶ್,ಗೋಪಾಲ್,ಅಶ್ವಥ್,ಕಾರ್ತೀಕ್,ಮಂಜುನಾಥ್, ಲೋಕೇಶ್,ಗಿರೀಶ್,ಮುಂತಾದವರು ಹಾಜರಿದ್ದರು.