ಬೆಂಗಳೂರು: ದೊಡ್ಮನೆ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದ ಜೇಮ್ಸ್ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದ್ದು. ಈಗಾಗಲೇ ಫಸ್ಟ್ ಲುಕ್ ಮೂಲಕ ಧೂಳೆಬ್ಬಿಸಿದ್ದ ಚಂದನವನದ ಅಪ್ಪು, ಸ್ಯಾಂಡಲ್ ವುಡ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾದ ಟೀಸರ್ ಕಂಡು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

ಕನ್ನಡಿಗರು ಮಾತ್ರವಲ್ಲ ಇಡೀ ದೇಶವೇ ಬಹಳ ಕಾತುರದಿಂದ್ದ ಕಾಯುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಅಪ್ಪು ಹಿಂದೆಂದೂ ಕಂಡಿರದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಕಂಡು ಸಂತಸ ವ್ಯಕ್ತಪಡಿಸುತ್ತಿರುವ ಅಭಿಮಾನಿಗಳು ಅಪ್ಪು ಇಂದು ನಮ್ಮೊಂದಿಗೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕಂಬನಿ ಮಿಡಿದಿದ್ದಾರೆ.

ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದಂದು ಅಂದರೆ ಮಾರ್ಚ್ ೧೭ಕ್ಕೆ ಜೇಮ್ಸ್ ರಿಲೀಸ್ ಆಗಲಿದೆ. ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ..ರಾಜ್ ಕುಮಾರ್ ಪುತ್ರರಾದ ಪುನೀತ್ ರಾಜ್ ಕುಮಾರ್ ಶಿವರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್ ಮೂರು ಪುತ್ರರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಎಲ್ಲರನ್ನೂ ಒಟ್ಟಿಗೆ ನೋಡುವ ಅಭಿಮಾನಿಗಳ ಆಸೆ ಅಪ್ಪು ಕೊನೆಯ ಚಿತ್ರದಲ್ಲಿ ಈಡೇರಲಿದೆ.

ಮಾರ್ಚ್ ೧೭ರವರೆಗೆ ಜೇಮ್ಸ್ ಚಿತ್ರ ಬಿಡುಗಡೆಯಾಗಲಿದೆ. ‘ಜೇಮ್ಸ್’ ಚಿತ್ರವನ್ನು ಕನ್ನಡ ಭಾಷೆಯ ಜೊತೆಗೆ ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲೂ ರಿಲೀಸ್ ಮಾಡಲು ಸಿದ್ಧತೆ ನಡೆದಿದೆ.