ಮೈಸೂರು: ಪ್ರತಿ ದಿನ ಎದ್ದಕೂಡಲೇ ಒಂದು ಲೋಟ ಕಾಫಿ ಅಥವಾ ಟೀ ಇರಲೇಬೇಕಲ್ಲವೇ? ನಮ್ಮಲ್ಲಿ ಹಲವರ ದೈನಂದಿನ ಅಬ್ಯಾಸವಿದು. ಅದಿಲ್ಲದೇ, ಜಗತ್ತಿನಲ್ಲಿ ಒಂದು ಹುಲ್ಲುಕಡ್ಡಿಯೂ ಚಲಿಸಲಾರದು ಎಂದು ನಂಬಿರುವವರ ಬಳಗ ನಮ್ಮದು ಎನ್ನುತ್ತಾರೆ ಕಾಫಿ/ ಟೀ ಪ್ರಿಯರು.
ಇತಂಹದ್ದೇ ಒಂದು ಜನಪ್ರಿಯ ಚಹಾ ಅಂಗಡಿ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಮೋರ್‍ಗೆ ಹೋಗುವ ನಡುವೆ ಇರುವ ಪುಣೇರಿ ಶ್ರೀಮಾನ್ ಅಮೃತತುಲ್ಯ ಚಹಾ ಅಂಗಡಿ ಇದೆ. ಈ ಚಹಾ ಅಂಗಡಿಗೆ ಬರುವವರು ಹೆಚ್ಚು ಹೆಚ್ಚು ಜನ ಇಲ್ಲಿನ ಚಹಾ ಸವಿಯಲು.ಬರುತ್ತಾರೆ
ಏಕೆಂದರೆ ಇವರು ಮಾಡುವ ಟೀ ಸಾಮಾನ್ಯ ಅಲ್ಲ ಬಹಳ ರುಚಿ ಮತ್ತು ಆರೋಗ್ಯಕರ ಚಹಾ ಎಂದು ಹೇಳಬಹುದು.ಪುಣೇರಿ ಶ್ರೀಮಾನ್ ಅಮೃತತುಲ್ಯ ಚಹಾ ಅಂಗಡಿ ಮಾಲೀಕರು ಹೇಳುವುದೆನೆಂದರೆ “ನಾವು ಕಳೆದ ಇತ್ತಿಚೀನ ದಿನಗಳಲ್ಲಿ ಪ್ರಾರಂಭ ಮಾಡಿದ್ದು. ನಾವು ಇಲ್ಲಿ ಚಹಾ ಮಾಡುತ್ತಿದ್ದು ಮೊದಮೊದಲು ಜನಪ್ರಿಯತೆಗಾಗಿ ಕೇವಲ ರೂ.1 ರೂಪಾಯಿಗೆ ಮಾರುತ್ತಿದ್ದರು. ಕ್ರಮೇಣ ಹಂತ ಹಂತವಾಗಿ ಚಹಾ ಬೆಲೆಯನ್ನು ಏರಿಸಲಾಯಿತು ಎನ್ನುತ್ತಾರೆ. ಇಷ್ಟೇ ಅಲ್ಲ, ಇವರು ಮಾಡುವ ಆರೋಗ್ಯಕರವಾದ ಚಹಾದಲ್ಲಿ ಶುಂಠಿ, ಪುದಿನಾ, ಏಲಕ್ಕಿ, ಇನ್ನಿತರೇ ಸ್ವದೇಶಿ ಮಸಾಲೆ ಪದಾರ್ಥಗಳನ್ನು ನಿಯಮ ಬದ್ಧ ರೂಪದಲ್ಲಿ ಸೇರಿಸಿ ಚಹಾ ತಯಾರಿಸುತ್ತಾರೆ. ಇದನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಯಾವುದೇ ತರಹ ಅಡ್ಡ ಪರಿಣಾಮವಿರದು ಎನ್ನುತ್ತಾರೆ ಅಂಗಡಿ ಮಾಲೀಕರು.
ಜೊತೆಗೆ ಮಾಮೂಲಿ ಚಹಾ ಪುಡಿಯನ್ನು ಬಳಸುವುದಿಲ್ಲ ಇದಕ್ಕೆಂದೇ ವಿಷೇಶ ರೀತಿಯಲ್ಲಿ ತಯಾರಿಸಲಾದ ಚಹಾ ಪುಡಿಯನ್ನು ಬಳಸುತ್ತೇವೆ ಎನ್ನುತ್ತಾರೆ ಜೊತೆಗೆ ಪೂನಾದಲ್ಲಿ ಚಹಾ ಮಾಡುವ ತರಬೇತಿಯನ್ನು ಪಡೆದಿರುವುದಾಗಿ ತಿಳಿಸುವ ಇವರು, ಮಸಾಲೆ ಪದಾರ್ಥಗಳನ್ನು ಸಮಯದ ನಿಯಮಾನುಸಾರವಾಗಿ ಮತ್ತು ನಿಯಮಬದ್ಧವಾಗಿ ಬಳಸಿ ಅಸಲಿ ಹಿತ್ತಾಳೆ ಪಾತ್ರೆಯಲ್ಲಿ ಎಲ್ಲಾ ಮಿಶ್ರಣವನ್ನು ಹಾಕಿ ಅದೇ ಪಾತ್ರೆಯಲ್ಲಿ ಚಹಾ ತಯಾರಿಸುವುದರಿಂದ ಇವರ ಚಹಾಕ್ಕೆ ಸೈಂಟಿಫಿಕ್ ಮೆಜರ್;ಮೆಂಟ್ ಇದೆ ಎನ್ನುತ್ತಾರೆ ಪುನೇರಿ ಮಾಲೀಕರು. ಈ ಚಹಾವನ್ನು ಗ್ರಾಹಕರಿಗೆ ನೀಡುವುದರಿಂದ ಅವರ ಆರೋಗ್ಯ ಮತ್ತು ಚೈತನ್ಯ ಎರಡು ಬರುತ್ತದೆ ಎಂದು ತಿಳಿಸಿದ ಸಿಬ್ಬಂದಿ ವರ್ಗದ ಶಶಿಕಾಂತ್ಅವರು ಇದರಿಂದಾಗಿ ತಮ್ಮ ಗ್ರಾಹಕರಿಂದ ತಮಗೆ ಶಬ್ಹಾಸ್ ಗಿರಿ ಒಳ್ಳೆಯ ಹೆಸರು, ಒಳ್ಳೆಯ ಅಭಿಪ್ರಾಯ ಮತ್ತು ಬೇಡಿಕೆಯೂ ಬಂದಿದೆ ಎನ್ನುತ್ತಾರೆ. ಮಾಮೂಲಿ ಚಹಾ ಸೇವಿಸುವುದರಿಂದ ಅಸಿಡಿಟಿಯಾಗುತ್ತದೆ, ಅದರೆ ಇವರು ತಯಾರಿಸಿ ಕೊಡುವ ಚಹಾದಲ್ಲಿ ಯಾವುದೇ ಅಡ್ಡಪರಿಣಾವು ಇರುವುದಿಲ್ಲ ಎನ್ನುತ್ತಾರೆ ಇವರ ಖಾಯಂ ಗಿರಾಕಿಗಳು.ಇಲ್ಲಿ ಸುತ್ತಮುತ್ತಲಿನ 10-12 ಕೀಲೋ ಮೀಟರ್ಗಳ ನಿವಾಸಿಗಳು ತಪ್ಪದೇ ಪ್ರತಿನಿತ್ಯ ಇವರ ಅಂಗಡಿಗೆ ಬೇಟಿ ನೀಡಿ ಚಹಾ ಸೇವಿಸುತ್ತಾರೆ. ಪುನೇರಿ ಶ್ರೀಮಾನ್ ಅಮೃತ ಚಹಾ ಅಂಗಡಿ ಎಂದರೆ ಪದೇ ಪದೇ ಭೇಟಿ ನೀಡುವ ಎಂದು ಅರ್ಥ, ಅದಕ್ಕೆ ಹಾಗೆ ಹೆಸರಿಟ್ಟಿರುವುದಾಗಿ ತಿಳಿಸಿದ ಮಾಲೀಕರು ಈ ಅಂಗಡಿಗೆ ಬೆಳಿಗ್ಗೆ ತಿಂಡಿಯ ನಂತರ ಮಧ್ಯಾಹ್ನ ಊಟದ ನಂತರ ಹೀಗೆ ಬೆಳಿಗ್ಗೆ ಒಮ್ಮೆ ಬಂದರೆ ಮತ್ತೆ ಮತ್ತೆ ಇವರ ಚಹಾ ಮತ್ತಿಗೆ ಗಮ್ಮತ್ತಿಗೆ, ಮತ್ತೆ ಮತ್ತೆ ಗ್ರಾಹಕರು ಬರುತ್ತಲೇ ಇರುತ್ತಾರೆ. ಒಮ್ಮೊಮ್ಮೆ ತಮ್ಮ ಪ್ರಿಯ ಗಿರಾಕಿಗಳು ದಿನಕ್ಕೆ 7-8 ಬಾರಿ ಇವರ ಚಹಾವನ್ನು ಸೇವಿಸುವವರು ಇದ್ದಾರೆ ಎಂದು ತಿಳಿಸಿದರು.
ಈಗ ತಾನೆ ಚಹಾ ಅಂಗಡಿ ತೆರಿದದ್ದು ಈ ಥರ ಚಹಾ ನಾನು ಕುಡಿದೆ ಇಲ್ಲ. ನಾನು ಇಲ್ಲಿನ ಚಹಾ ಕುಡಿಯಲು ಸುಮಾರು.10 ಕೀ,ಮಿ ಬಂದಿದದ್ದು. ನನಗೆ ಬಹಳ ಇಷ್ಟವಾಗಿದೆ.ಹಾಗೂ ಇಲ್ಲಿನ ಶುಚಿತ್ವ ಅಂತು ತುಂಬಾ ಚೆನ್ನಾಗಿದೆ ಗ್ರಾಹಕ ಹರೀಶ.
ಇನ್ನೊಂದು ಅತಿ ಮುಖ್ಯ ವಿಷಯವೆಂದರೆ ಚಹಾ ಸೇವಿಸಿದ ನಂತರ ಇಲ್ಲಿ ಸಿಗರೇಟು ಮತ್ತು ಗುಡ್ಕಾ ಗಳಿಗೆ ಅವಕಾಶವಿಲ್ಲ ನಾವು ಯಾವುದೇ ಕಾರಣಕ್ಕೆ ಇದಕ್ಕೆ ಅವಕಾಶವನ್ನು ಕಲ್ಪಿಸುವುದಿಲ್ಲವೆನ್ನುವ ಮಾಲೀಕರು ರುಚಿ, ಶುಚಿ ಮತ್ತು ಆರೋಗ್ಯಕ್ಕೆಷ್ಟೇ ನಮ್ಮ ಪ್ರಾಮುಖ್ಯತೆ ಎನ್ನುವ ಅವರು ನಮ್ಮ ಚಹಾದಲ್ಲಿ ಮಾತ್ರ ಹಿತ ಮಿತ ಮಸಾಲೆಯ ಗುಟ್ಟು ಇದೆ ಎನ್ನುತ್ತಾರೆ ಪುಣೇರಿ ಶ್ರೀಮಾನ್ ಅಮೃತತುಲ್ಯ ಚಹಾ ಅಂಗಡಿ ಮಾಲೀಕರಾದ ಸತೀಶ್ ಭಟ್ ಮಂದಹಾಸ ಬೀರುತ್ತಾ.. ನಗುತ್ತಾ..ವಿಷಯ ಹಂಚಿಕೊಂಡುರು.
ಶಶಿಕಾಂತ್ : ಮೊ.9916822748