ಇಂದಿಗೆ ಪುಲ್ವಾಮಾ ಭಯೋತ್ಪಾದಕದಾಳಿಯ ಕರಾಳ ನೆನಪಿಗೆ ಮೂರು ವರ್ಷವಾಗಿದೆ.2019 ರ ಫೆಬ್ರವರಿ 14 ರಂದು ಈ ಉಗ್ರರದಾಳಿ ನಡೆದಿತ್ತು. ಪಾಕಿಸ್ತಾನದ ಹೇಡಿತನದ ಅಮಾನವೀಯ ದುಷ್ಕೃತ್ಯ ಜನರ ಸ್ಮೃತಿಪಟಲದಲ್ಲಿಶಾಶ್ವತವಾಗಿ ಉಳಿಯಲಿದೆ.ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಸಿಆರ್ಪಿಎಫ್ ಸಿಬ್ಬಂದಿಯನ್ನು ಹೊತ್ತ ಬಸ್ಗೆ ಸ್ಫೋಟಕ ತುಂಬಿದ್ದವಾಹನವನ್ನು ಡಿಕ್ಕಿ ಹೊಡೆಸಿದ ಪರಿಣಾಮ,ಭಾರತೀಯ ಯೋಧರು ವೀರ ಮರಣವನ್ನಪ್ಪಿದ್ದರು.ಪಾಕಿಸ್ತಾನಿ ಉಗ್ರರ ಅಟ್ಟಹಾಸಕ್ಕೆ ಸಿಲುಕಿ ೩೯ಕೂಹೆಚ್ಚು ಸೈನಿಕರು ಹುತಾತ್ಮರಾಗಿದ್ದರು. ಅಲ್ಲದೆ,ಅನೇಕರು ಗಂಭೀರವಾಗಿ ಗಾಯಗೊಂಡಿದ್ದರು.

ಜೈಷ್-ಎ-ಮೊಹಮ್ಮದ್ ಎಂಬ ಭಯೋತ್ಪಾದಕಸಂಘಟನೆಯು ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಈ ದಾಳಿಯ ಬಳಿಕ ಭಾರತವು ತಕ್ಕ ಪ್ರತ್ಯುತ್ತರನೀಡಿದೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ಯಬಾಲಕೋಟ್ನಲ್ಲಿ ಭಯೋತ್ಪಾದಕ ಶಿಬಿರಗಳಮೇಲೆ ವಾಯುದಾಳಿ ನಡೆಸಲಾಗಿತ್ತು. ಪುಲ್ವಾಮಾಘಟನೆಯಲ್ಲಿ ಹುತಾತ್ಮರಾದ ಯೋಧರಿಗೆ ಇಂದು ಇಡೀ ದೇಶಾದ್ಯಂತ ಗೌರವ ಸಲ್ಲಿಸಲಾಗುತ್ತಿದೆ.