ಗುಂಡ್ಲುಪೇಟೆ: ವಕೀಲರಾದ ರವೀಂದ್ರ ಹತ್ಯೆ ಖಂಡಿಸಿ ತಾಲ್ಲೂಕು ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಮುಂದೆ ಕಾರ್ಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ರವಿಕಾಂತ್ ಮಾತನಾಡಿ, ವಕೀಲರ ರಕ್ಷಣೆಗಾಗಿ ಕಾನೂನು ರಚನೆ ಮಾಡಬೇಕೆಂದು ಹಲವು ದಿನಗಳಿಂದ ವಕೀಲರುಗಳು ಬೇಡಿಕೆ ಇಟ್ಟಿದ್ದರೂ ಕಾಯ್ದೆ ರಚನೆಯಾಗದಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮದ್ದೂರು ತಾಲ್ಲೂಕಿನ ನವಿಲೇ ಗ್ರಾಮದಲ್ಲಿ ವಕೀಲರಾದ ರವೀಂದ್ರ ಅವರನ್ನು ಹತ್ಯೆ ಮಾಡಿರುವುದು ಖಂಡಿನೀಯ. ಇದರ ಬಗ್ಗೆ ಸರ್ಕಾರ ಮತ್ತು ಅಲ್ಲಿನ ಪೆÇಲೀಸ್ ವ್ಯವಸ್ಥೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸಿಕ್ಕೆಯಾಗುವ ಮೂಲಕ ರವೀಂದ್ರ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು.

ವಕೀಲರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗುರುಪ್ರಸಾದ್, ವಕೀಲರಾದ ಶಿವಣ್ಣ, ಪ್ರಭುಸ್ವಾಮಿ, ಪುಟ್ಟಸ್ವಾಮಿ, ರಾಜೇಶ್, ಕಾಂತರಾಜ್, ನಾಗೇಂದ್ರ, ಹಂಗಳ ರಾಜೇಶ್, ಯೋಗೇಶ್ ಕುಮಾರ್, ದೇವರಹಳ್ಳಿ ಕೆಂಪರಾಜು, ಹೆಚ್.ಬಿ. ಮೂರ್ತಿ, ಪಾಳ್ಯ ದೇವರಾಜ್, ಕಿಲಗೆರೆ ಶ್ರೀನಿವಾಸ್, ನಂದೀಶ್, ಲಕ್ಷ್ಮೀ, ಸೌಮ್ಯ, ಅನಿಲ್ ಕುಮಾರ್, ಆಂಜನೇಯ ಸೇರಿದಂತೆ ಇತರರು ಇದ್ದರು.

ವರದಿ: ಬಸವರಾಜು ಎಸ್ ಹಂಗಳ

By admin