ಚಾಮರಾಜನಗರ: ರೋಹಿತ್ ಚಕ್ರವರ್ತಿ ಸಮಿತಿ ನೇತೃತ್ವದ ಸಮಿತಿ ಪರಿಷ್ಕರಣೆ ಮಾಡಿರುವ ಪಠ್ಯಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ದಲಿತಸಂಘರ್ಷ ಸಮಿತಿ(ಡಿ.ಜಿ.ಸಾಗರ್‌ಬಣ) ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು
ನಗರದ ಜಿಲ್ಲಾಡಳಿತಭವನದ ಆವರಣದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು, ಮುಖಂಡರು ಸರಕಾರದ ವಿರುದ್ದ ಘೋಷಣೆಗಳನ್ನು
ಕೂಗಿದರು. ಇದೇವೇಳೆ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್ ಅನೂಷ್ ಅವರ ಮೂಲಕ ರಾಜ್ಯಸರಕಾರಕ್ಕೆ ಮನವಿಸಲ್ಲಿಸಿದರು.
ದಸಂಸ(ಡಿ.ಜಿ.ಸಾಗರ್ ಬಣ) ಜಿಲ್ಲಾಸಂಚಾಲಕ ಸಿ.ಎಂ.ಶಿವಣ್ಣ ಮಾತನಾಡಿ, ರೋಹಿತ್‌ಚಕ್ರವರ್ತಿ ನೇತೃತ್ವದ ಪಠ್ಯಪುಸ್ತಕರಚನಾ ಸಮಿತಿ ಬಸವಣ್ಣ, ಕುವೆಂಪು, ಗೌತಮಬುದ್ದ, ಸಮಾಜಸುಧಾರಕರು ಒಳಗೊಂಡ ಪಠ್ಯಗಳನ್ನು ತನಗೆ ಬೇಕಾದ ಹಾಗೇ ತಿದ್ದುಪಡಿ ಮಾಡಿ, ಪರಿಷ್ಕರಣೆ ಮಾಡಿ, ಅವಮಾನ ಮಾಡಲಾಗಿದೆ, ಹಿಂದಿನ ಪಠ್ಯಪುಸ್ತಕಗಳನ್ನೇ ಮುಂದುವರೆಸಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಸಂಘಸಂಸ್ಥೆಗಳು ದೊಡ್ಡಮಟ್ಟದಲ್ಲಿ ಹೋರಾಟ ಮಾಡಿದ್ದರೂ, ಆಡಳಿತಾರೂಢ ಬಿಜೆಪಿಸರಕಾರ ವಿವಾದಿತ ರೋಹಿತ್ ಚಕ್ರವರ್ತಿ ನೇತೃತ್ವದ ಪಠ್ಯಪುಸ್ತಕ ರಚನಾಸಮಿತಿ ಪರಿಷ್ಕರಿಸಿದ ಪಠ್ಯಪುಸ್ತಕವನ್ನು ಶಾಲಾಮಕ್ಕಳಿಗೆ ವಿತರಿಸಿದೆ ಎಂದು ಆರೋಪಿಸಿದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಬುದ್ದ, ನಾರಾಯಣಗುರು ಅವರಂತಹ ಮಹಾತ್ಮರಿಗೆ ಅಪಮಾನ ಮಾಡಿರುವ ಪಠ್ಯಪುಸ್ತಕ ನಮಗೆಬೇಡ, ಕೂಡಲೇ ರಾಜ್ಯಸರಕಾರ ರೋಹಿತ್ ಚಕ್ರವರ್ತಿ ನೇತೃತ್ವದ ಪಠ್ಯಪುಸ್ತಕರಚನಾ ಸಮಿತಿ ಪರಿಷ್ಕರಿಸಿರುವ ಪಠ್ಯಗಳನ್ನು ರದ್ದುಪಡಿಸಬೇಕು, ಲೋಪವೆಸಗಿರುವ ರೋಹಿತ್ ಚಕ್ರವರ್ತಿ ವಿರುದ್ದ ಕ್ರಮಕೈಗೊಳ್ಳಬೇಕು, ಹಿಂದೆ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿದ್ದ ಬರಗೂರುರಾಮಚಂದ್ರಪ್ಪ ನೇತೃತ್ವದ ಸಮಿತಿ ಪರಿಷ್ಕರಣೆ ಮಾಡಿರುವ ಪುಸ್ತಕಗಳನ್ನೇ ಮುಂದುವರೆಸಬೇಕು, ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಿರುದ್ದ ಕ್ರಮಕೈಗೊಳ್ಳದಿರುವ ಶಿಕ್ಷಣಸಚಿವರು ಸಚಿವಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ದಸಂಸ ಮೈಸೂರುವಿಭಾಗೀಯ ಸಂಚಾಲಕ ದೊಡ್ಡಿಂದುವಾಡಿಸಿದ್ದರಾಜು, ಸಂಘಸಂಸ್ಥೆಗಳ ಮುಖಂಡರಾದ, ಜಿ,ಎಂ.ಗಾಡ್ಕರ್ ಕೆ,ಎಂನಾಗರಾಜು ನಿಜಧ್ವನಿಗೋವಿಂದರಾಜು,. ಸಿ.ಎಂ ಕೃಷ್ಣಮೂರ್ತಿ ಬಸವಣ್ಣ ಚಾ.ಗು.ನಾಗರಾಜು ಉಮೇಶ್, ನಾರಾಯಣ್, ಆಟೋ ಉಮೇಶ್ ಮಲ್ಲಿಕ್ ಮಂಜೇಶ್, ಮಹದೇವಯ್ಯ, ಶೇಖರ್ ಗೌತಮ್, ಸಿದ್ದು ಸೇರಿದಂತೆ ಇತರರು ಭಾಗವಹಿಸಿದ್ದರು.
