ಮೈಸೂರು ನಗರ ಪೊಲೀಸರು ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ, ದಿನಾಂಕ:31- 12-2020 ರಂದು ಮಾನವ ಕಳ್ಳ ಸಾಗಾಣಿಕೆ ನಿಷೇಧ ಘಟಕ, ಮಕ್ಕಳ ವಿಶೇಷ ಪೊಲೀಸ್ ಘಟಕ,
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ-1098 ವತಿಯಿಂದ ಆಲನಹಳ್ಳಿ ರಿಂಗ್‍ರೋಡ್ ಸಿಗ್ನಲ್ ಮತ್ತು ನಂಜನಗೂಡು ರಸ್ತೆ ರಿಂಗ್‍ರೋಡ್ ಸಿಗ್ನಲ್ ಬಳಿ ಭಿಕ್ಷೆ ಬೇಡುವ
ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದು, 07 ಮಹಿಳೆಯರು ಮತ್ತು 09 ಮಕ್ಕಳನ್ನು ರಕ್ಷಣೆ ಮಾಡಿ ಪುನರ್‍ವಸತಿಗಾಗಿ ಸ್ತ್ರೀ ಸೇವಾನಿಕೇತನ, ವಿಜಯನಗರ, 3ನೇ ಹಂತ,
ಮೈಸೂರು ಇಲ್ಲಿಗೆ ಕಳುಹಿಸಿಕೊಡಲಾಗಿದೆ.
ಈ ಕಾರ್ಯಚರಣೆಯನ್ನು ಡಿ.ಸಿ.ಪಿ.ರವರಾದ ಡಾ: ಎ.ಎನ್. ಪ್ರಕಾಶ್‍ಗೌಡ, ಗೀತ ಪ್ರಸನ್ನ, ಎ.ಸಿ.ಪಿ.ಗಳಾದ . ಶಶಿಧರ್, ವಿ.ಮರಿಯಪ್ಪರವರುಗಳ ಮಾರ್ಗದರ್ಶನದಲ್ಲಿ ಮಹಿಳಾ
ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಟಿ.ಎಸ್.ಲೋಲಾಕ್ಷಿ. ಮಕ್ಕಳ ವಿಶೇಷ ಪೊಲೀಸ್ ಘಟಕದ ಶೀಲಾ.ಎಸ್, ಜಿ.ಎಸ್.ಪ್ರಸನ್ನಕುಮಾರ್
ಸಿ.ಎಸ್.ರುಕ್ಮಿಣಮ್ಮ, ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಭಾಸ್ಕರ್, ಮಕ್ಕಳ ಸಹಾಯವಾಣಿ1098 ರ ಲಿಂಗರಾಜು ರವರುಗಳು ಮಾಡಿರುತ್ತಾರೆ.
ಈ ರಕ್ಷಣಾ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ:ಚಂದ್ರಗುಪ್ತ, ಐ.ಪಿ.ಎಸ್. ರವರು ಪ್ರಶಂಸಿಸಿರುತ್ತಾರೆ.