ಚಾಮರಾಜನಗರ: ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳ ವಿಶ್ವಾಸ ಸಹಕಾರ ಪಡೆದು ಮಹತ್ವಾಕಾಂಕ್ಷಿಯ ಜಲ ಜೀವನ್ ಮಿಷನ್ ಯೋಜನೆಯನ್ನು ಸಂಪೂರ್ಣ ಯಶಸ್ವಿಗೆ ಅನು?ನಕ್ಕೆ ಮುಂದಾಗುವಂತೆ ಶಾಸಕರಾದ ಎನ್. ಮಹೇಶ್ ಅವರು ತಿಳಿಸಿದರು. 

ಕೊಳ್ಳೇಗಾಲದ ತಾಲೂಕು ಪಂಚಾಯತಿ ಸಭಾಂಗಣದಲ್ಲಿಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಜಲ ಜೀವನ್ ಮಿಷನ್ ಯೋಜನೆ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಈ ಹಿಂದೆ ಬಾವಿಗಳು ಇನ್ನಿತರ ನೀರಿನ ಸಂಗ್ರಹದ ಸುಸ್ಥಿರ ಮೂಲಗಳಿಂದ ನೀರಿನ ಹಾಹಾಕಾರ ಉಲ್ಬಣಿಸದಂತೆ ಗ್ರಾಮಸ್ಥರು ನೋಡಿಕೊಳ್ಳುತ್ತಿದ್ದರು. ಇಂದು ಜಲ ಜೀವನ್ ಮಿಷನ್ ಯೋಜನೆಯು ನೀರಿನ ಬವಣೆ ನೀಗಿಸಲು ಅನುಕೂಲವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಶೇ. ೮೫ರಷ್ಟು ಹಾಗೂ ೧೫ ನೇ ಹಣಕಾಸು ಯೋಜನೆಯಿಂದ ಶೇ. ೫ರಷ್ಟು ಯೋಜನೆಯ ಒಟ್ಟು ಶೇ. ೯೦ ರಷ್ಟು ಅನುಧಾನವನ್ನು ಸರ್ಕಾರವೇ ಭರಿಸಲಿದೆ ಎಂದರು. 

ಯೋಜನೆಯ ಅನು?ನದಲ್ಲಿ ಕನಿ? ಮೂರು ಅಡಿ ಆಳದಲ್ಲಿ ಪೈಪ್‌ಲೈನ್ ಅಳವಡಿಸಬೇಕು. ಜಲ ಜೀವನ್ ಮಿ?ನ್ ಯೋಜನೆಯು ಸಮುದಾಯ ಆಧಾರಿತವಾಗಿದ್ದು, ಯೋಜನೆಯನ್ನು ತಾಂತ್ರಿಕ ಸಲಹೆಗಾರರ ಸಮಕ್ಷಮದಲ್ಲಿ ಸುಧೀರ್ಘವಾಗಿ ಚರ್ಚಿಸಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಶಾಸಕರಾದ ಎನ್. ಮಹೇಶ್ ಅವರು ತಿಳಿಸಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಂ. ಗಾಯತ್ರಿ ರವರು ಮಾತನಾಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರ ಸಮ್ಮುಖದಲ್ಲಿ ಯೋಜನೆಯ ಕಾಮಗಾರಿಯ ಗುಣಮಟ್ಟವನ್ನು ಖುದ್ದು ತಪಾಸಣೆ ಮಾಡಬೇಕು. ಯೋಜನೆಗೆ ಸಮುದಾಯದ ಸಹಭಾಗಿತ್ವ ಅಗತ್ಯ ಎಂದರು.

ಜಲ ಜೀವನ್ ಮಿ?ನ್ ಯೋಜನೆಯ ತಾಂತ್ರಿಕ ವಿ?ಯದ ಕುರಿತು ನಿವೃತ್ತ ಕಾರ್ಯಪಾಲಕ ಅಭಿಯಂತರರಾದ ಶಿವಶಂಕರಯ್ಯ ಅವರು ಮಾತನಾಡಿದರು. ಸರ್ಕಾರೇತರ ಸಂಸ್ಥೆಗಳ ಸಲಹೆಗಾರರು ಹಾಗೂ ಸಂಪನ್ಮೂಲ ಅಧಿಕಾರಿಗಳಾದ ಡಾ. ಶೀಲಾಖರೆ ಹಾಗೂ ಡಾ. ಅಚ್ಯುತರಾವ್ ಅವರು ಉಪನ್ಯಾಸ ನೀಡಿದರು. 

ತಾಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಗಂಗಾಧರಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಆನಂದಮೂರ್ತಿ,  ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಇತರರು ಉಪಸ್ಥಿತರಿದ್ದರು.