ಚಾಮರಾಜನಗರ, ನವೆಂಬರ್ – ಜಿಲ್ಲೆಯಲ್ಲಿರುವ ಐತಿಹಾಸಿಕ, ಪಾರಂಪರಿಕ ಸ್ಮಾರಕಗಳು, ತಾಣಗಳು, ಕಟ್ಟಡ, ಜಲ ತಾಣಗಳನ್ನು ಗುರುತಿಸಿ ಪಟ್ಟಿ ಮಾಡಿ ಅವುಗಳಿಗೆ ಶ್ರೇಣಿ ನೀಡುವ ಪ್ರಕ್ರಿಯೆಗೆ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಪಾರಂಪರಿಕ ಸಂರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಅಧಿಸೂಚನೆ ಅನುಸಾರ ಐತಿಹಾಸಿಕ, ಸಾಂಸ್ಕøತಿಕ, ಪಾರಂಪರಿಕ ಕಟ್ಟಡ, ಸ್ಮಾರಕ, ಮಂಟಪಗಳ ವಾಸ್ತು, ವಿನ್ಯಾಸ, ಕಲ್ಯಾಣಿ, ಕೊಳ, ಕೆರೆ, ದೇವಸ್ಥಾನ, ಶಾಲೆ, ಅಣೆಕಟ್ಟು, ಅರಣ್ಯ ಪ್ರದೇಶದೊಳಗಿರುವ ಪರಂಪರೆಯ ಸ್ಥಳಗಳನ್ನು ಮೊದಲು ಗುರುತಿಸಬೇಕು. ನಂತರ ಮುಂದಿನ ಹಂತದಲ್ಲಿ ಅವುಗಳನ್ನು ವರ್ಗೀಕರಿಸಿ ಶ್ರೇಣಿ ನೀಡಿ ಸಂರಕ್ಷಿಸುವ ಕೆಲಸ ಜಿಲ್ಲೆಯಲ್ಲಿ ಆಗಬೇಕಿದೆ. ಇದಕ್ಕಾಗಿಯೇ ಪಾರಂಪಾರಿಕ ಸಂರಕ್ಷಣಾ ಸಮಿತಿ ಸಲಹೆ ನೀಡಿ ಮುಂದಿನ ಕಾರ್ಯಗಳಿಗೆ ಸಹಕರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಜಿಲ್ಲೆಯು ಸಾಂಸ್ಕøತಿಕ ಹಾಗೂ ಐತಿಹಾಸಿಕವಾಗಿ ಶ್ರೀಮಂತವಾಗಿದ್ದು. ಕಳೆದ 23 ವರ್ಷಗಳ ಹಿಂದೆ ಪ್ರತ್ಯೇಕ ಜಿಲ್ಲೆಯಾಗಿರುವ ಚಾಮರಾಜನಗರ ತನ್ನದೇ ಆದ ಪರಂಪರೆಯನ್ನು ಹೊಂದಿದೆ. ಜಿಲ್ಲೆಯಲ್ಲಿ ಈಗಾಗಲೇ ಕಂಡುಬಂದಿರುವ ಐತಿಹಾಸಿಕ ಸ್ಥಳಗಳÀನ್ನು ಹೊರತುಪಡಿಸಿ ಇನ್ನೂ ಬೆಳಕಿಗೆ ಬರದ ಅನೇಕ ಪಾರಂಪಾರಿಕ ತಾಣಗಳಿದ್ದು ಅವುಗಳನ್ನು ಗುರುತಿಸುವಂತಹ ಮಹತ್ತರ ಕಾರ್ಯ ಆಗÀಬೇಕಿದೆ ಎಂದರು.
ಪಾರಂಪಾರಿಕ ಮಹತ್ವ ಸ್ಥಳಗಳನ್ನು ಇತಿಹಾಸ ತಜ್ಞರು ವಾಸ್ತುಶಿಲ್ಪಿಗಳು, ನೈಸರ್ಗಿಕ ತಜ್ಞರು, ಸ್ಟ್ರಕ್ಚರಲ್ ಇಂಜಿನಿಯರ್ ಗಳು, ಲಲಿತ ಕಲೆ ಕ್ಷೇತ್ರ, ಪರಂಪರೆ ವಿಷಯದಲ್ಲಿ ಅನುಭವ ಪರಿಣತಿ ಹೊಂದಿರುವವರು, ಪ್ರಾಚ್ಯ ವಸ್ತು ಪರಂಪರೆ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಪಾರಂಪಾರಿಕ ಸಮಿತಿಯು ಸ್ಥಳೀಯ ಪರಂಪರೆಯ ಮಹತ್ವ ಸ್ಥಳಗಳನ್ನು ಗುರುತಿಸಿ ಅಭಿವೃದ್ದಿ ಪಡಿಸುವ ಕಾರ್ಯದಲ್ಲಿ ಸೂಕ್ತ ಸಲಹೆ ನೀಡುವ ಮೂಲಕ ನೆರವಾಗಬೇಕು. ಇದಕ್ಕೂ ಮೊದಲು ಇಂಡಿಯನ್ ಹೆರಿಟೇಜ್ ಸಿಟೀಸ್ ನೆಟ್‍ವರ್ಕ್ ಗುರುತಿಸುವ ಕಾರ್ಯವನ್ನು ಆರಂಭಿಸಲು ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ತಿಳಿಸಿದರು.
ಚಾಮರಾಜನಗರ-ರಾಮಸಮುದ್ರ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆಯನ್ನು ಅನುಮೋದಿಸಲ್ಪಟ್ಟಿದ್ದು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ ಅನ್ವಯ ನಿಯಮಗಳನ್ನು ರೂಪಿಸಲು ಸಮಿತಿ ರಚಿಸಲಾಗಿದೆ. ಅದರಂತೆ ನಗರದ ಪಾರಂಪಾರಿಕ ಕಟ್ಟಡಗಳು, ತಾಣಗಳು, ಇನ್ನಿತರ ಐತಿಹಾಸಿಕ ಪರಂಪರೆಯ ಸ್ಥಳಗಳ ಪಟ್ಟಿ ಮಾಡಲು ಹಾಗೂ ಪಾರಂಪಾರಿಕ ಕಟ್ಟಡಗಳ ಪರಿಸರದಲ್ಲಿ ಅಭಿವೃದ್ದಿಗೆ ಅನುಮತಿ ನಿಡುವ ಸಂಬಂಧ ನಿಯಮಗಳನ್ನು ರೂಪಿಸಲು ರಚಿಸಲಾಗಿರುವ ಪಾರಂಪಾರಿಕ ಸಮಿತಿಯು ಕಾರ್ಯೋನ್ಮುಖವಾಗಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಸ್ಮಾರಕಗಳ, ವಾಸ್ತುಶಿಲ್ಪ, ಕಲೆ, ಸಂಸ್ಕøತಿ, ಪರಂಪರೆ ಮಹತ್ವವನ್ನು ಗುರುತಿಸುವ ಪ್ರಕ್ರಿಯೆ ಆರಂಭವಾಗಬೇಕು. ನಗರ ಪ್ರದೇಶದಿಂದಲೇ ಪ್ರಕ್ರಿಯೆ ಪ್ರಾರಂಭಿಸಬೇಕು. ಪಾರಂಪಾರಿಕ ಸಂರಕ್ಷಣಾ ಸಮಿತಿಯ ಸದಸ್ಯರನ್ನು ಸ್ಥಳಕ್ಕೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ರೂಪುರೇಷೆ ತಯಾರಿಸಬೇಕು ಎಂದರು.
ಶಾಲೆ ಕಾಲೇಜುಗಳಲ್ಲಿ ಎನ್.ಎಸ್.ಎಸ್ ಹಾಗೂ ನೆಹರು ಯುವ ಕೇಂದ್ರಗಳ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಜಿಲ್ಲೆಯ ಪಾರಂಪರಿಕ ಸ್ಥಳ, ಕಟ್ಟಡಗಳ ಬಗ್ಗೆ ಅರಿವು ಮೂಡಿಸಬೇಕು. ವಿದ್ಯಾರ್ಥಿಗಳಿಗೆ ಇತಿಹಾಸ ಪ್ರಾಚ್ಯ ಪ್ರಜ್ಞೆ ಬಗ್ಗೆ ತಿಳಿಸಿಕೊಡುವ ಕಾರ್ಯಕ್ರಮಗಳನ್ನು ಪ್ರಾಚ್ಯ ವಸ್ತು ಸಂಗ್ರಹಾಲಯ ಪರಂಪರೆ ಇಲಾಖೆ ಆಯೋಜನೆ ಮಾಡಬೇಕು. ಹೇರಿಟೇಜ್ ಕ್ಲಬ್ ಗಳ ಮೂಲಕ ಸಾರ್ವಜನಿಕರಿಗೆ ಐತಿಹಾಸಿಕ ಪರಂಪರೆ ಬಗ್ಗೆ ಜನಾಂದೋಲನ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದರು.
ಪಾರಂಪಾರಿಕ ಸಂರಕ್ಷಣಾ ಸಮಿತಿಯ ಸದಸ್ಯರಾದ ಸ್ಟ್ರಕ್ಚರಲ್ ಅಭಿಯಂತರರಾದ ಡಾ. ಶಕೀಬ್ ಉರ್ ರೆಹಮಾನ್, ವಾಸ್ತು ಶಿಲ್ಪಿ ಸುನೀಲ್ ನಾಯಕ್, ಪರಿಸರ ತಜ್ಞರಾದ ಡಾ.ಬಿ. ಮನೋಜ್ ಕುಮಾರ್, ಲಲಿತಾ ಕಲಾಕ್ಷೇತ್ರದ ಬಗ್ಗೆ ಪರಿಣತಿ ಉಳ್ಳ ರಂಗಕರ್ಮಿ ಕೆ. ವೆಂಕಟರಾಜು, ಪರಂಪರೆ ವಿಷಯ ಪರಿಣಿತರಾದ ಸಿ.ಪಿ. ಹುಚ್ಚೇಗೌಡ, ನಗರದ ಜೆ.ಎಸ್.ಎಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಎನ್. ಗಾಯತ್ರಿ ದೇವಿ, ಇತಿಹಾಸ ಸಹಾಯಕ ಪ್ರಾಧ್ಯಾಪಕರಾದ ಕೆ.ಎಸ್. ಮರಿಸ್ವಾಮಿ, ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ನಿರ್ಮಲ ಮಠಪತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕೆ. ಸುರೇಶ್, ನಗರಸಭೆ ಪೌರಯುಕ್ತರಾದ ರಾಜಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಪಂಕಜ, ಭಾರತೀಯ ಪುರಾÀತತ್ವ ಸರ್ವೇಕ್ಷಣ ಇಲಾಖೆಯ ಜೆ. ರಂಗಯ್ಯ, ಹಾಗೂ ಇತರರು ಸಭೆಯಲ್ಲಿ ಹಾಜರಿದ್ದರು.