ಮೈಸೂರು.3: ಕನ್ನಡದ ಮೊದಲ ಪತ್ರಿಕೆ “ಮಂಗಳೂರು ಸಮಾಚಾರ’ ಆರಂಭವಾದ ೧೮೪೧ ಜುಲೈ ಒಂದನೇ ತಾರೀಕಿನಂದಿನಿಂದ ಕರ್ನಾಟಕದಲ್ಲಿ ಪತ್ರಿಕಾ ಮಾಧ್ಯಮದ ಕಾರ್ಯವೈಖರಿ ಆರಂಭವಾಗುತ್ತದೆ.ಹಾಗೂ ಪತ್ರಿಕಾ ಮಾಧ್ಯಮದ ಪಾತ್ರವು ಜಾಗತಿಕ ಮಟ್ಟದಲ್ಲಿ ಪ್ರಮುಖ ಸ್ಥಾನವನ್ನು ಪಡೆಯುತ್ತದೆ ಇದರ ನೆನಪಿನಾರ್ಥವಾಗಿ.

 

ಮೇ ೩ರಂದು ವಿಶ್ವ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳ ಮೂಲಕ ಪತ್ರಕರ್ತರು ನಿರೂಪಿಸುವ ಸಾಮಾಜಿಕ ಅಭಿಪ್ರಾಯಗಳಿಗೆ ತುಂಬಾ ಮಹತ್ವವಿದೆ. ಪ್ರಜೆಗಳು ಮತ್ತು ಪ್ರಭುತ್ವದ ನಡುವಿನ ಕೊಂಡಿಯಂತೆ ಕೆಲಸ ಮಾಡುವ ಪತ್ರಿಕಾರಂಗವು, ಪ್ರಜಾಪ್ರಭುತ್ವವನ್ನು ಬಲಗೊಳಿಸುವ ವಿಚಾರಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿದೆ.ಕೋವಿಡ್ ವೈರಸ್‌ ಭೀತಿಯಲ್ಲೂ ಜೀವದ ಹಂಗು ತೊರೆದು ಹಗಲಿರುಳು ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರನ್ನು ಆಳುವ ಸರ್ಕಾರಗಳೇ ಕಡೆಗಣಿಸುತ್ತಿರುವುದು ದುರದೃಷ್ಟಕರ.ಆದರೂ ಈ ಸಂಧರ್ಭದಲ್ಲಿ ಪತ್ರಕರ್ತರು ನಿತ್ಯ ಜನಸಾಮಾನ್ಯರ ಜೊತೆ ಸಂಪರ್ಕದಲ್ಲಿದ್ದು ವಾಸ್ತವದ ಸಂಗತಿಗಳು ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತಿದ್ದೇವೆ.

 

ಪತ್ರಿಕಾ ದಿನಾಚರಣೆಯ ಅಂಗವಾಗಿ  ಇಂದು ಸುಣ್ಣದಕೇರಿ ನಿವಾಸಿಗಳ ಮನೆ ಮನೆಗೆ ಹೋಗಿ. ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ಪತ್ರಿಕೆಯನ್ನು  ಅಂತರ ಕಾಯ್ದುಕೊಂಡು ಹಂಚುವುದರ ಮೂಲಕ ಜಾಗತಿಕ ಮಟ್ಟದ ಕರೋನಾ ವೈರಸ್ ಸಮಸ್ಯೆಯ ವಿರುದ್ಧ ಯಾವ ರೀತಿಯಾಗಿ ಸ್ವತಃ ಎಚ್ಚರವಹಿಸಬೇಕೆಂದು ಜಾಗೃತಿ ಮೂಡಿಸಲಾಯಿತು.

ಚಿತ್ರದಲ್ಲಿ ಸುವರ್ಣ ಬೆಳಕು ಫೌಂಡೇಷನ್ ಸಂಸ್ಥೆ  ಮಹೇಶ್ ನಾಯಕ್ ಎಸ್ ,ಕಾರ್ಯದರ್ಶಿ ಮಂಜುನಾಥ ಬಿ. ಹಾಜರಿದ್ದರು.

By admin