ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಎನ್ ಶಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದ  ಗೌಡಯ್ಯ ರವರು   ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ  ಇಂದು   ಚುನಾವಣೆ ನಡೆಯಿತು.ಅಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ  ನಿಲಂಗಾಲ  ಗ್ರಾಮದ  ಸದಸ್ಯ  ಎನ್ ಎಂ ಮಂಜುನಾಥ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಪ್ರಭುರವರು ಅಧ್ಯಕ್ಷರಾಗಿ

ಎನ್ ಎಂ  ಮಂಜುನಾಥ್ ರವರನ್ನು ಆಯ್ಕೆ ಮಾಡಿದರು.

ಅಧ್ಯಕ್ಷ ಸ್ಥಾನ ಅಲಂಕರಿಸಿದ  ಅಧ್ಯಕ್ಷ ಎನ್ ಎಂ  ಮಂಜುನಾಥ್  ಮಾಧ್ಯಮದೊಂದಿಗೆ ಮಾತನಾಡಿ ಗ್ರಾಮ ಪಂಚಾಯಿತಿಗೆ ಸರಕಾರದಿಂದ ಬರುವಂತಹ ಎಲ್ಲಾ ಯೋಜನೆಗಳ  ಸೌಲಭ್ಯಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಸಮಾನ ಹಂಚಿಕೆ ಮಾಡಿ ಪಾರದರ್ಶಕತೆಯಿಂದ ಅಧಿಕಾರ  ಅಧಿಕಾರ ನಡೆಸಲಾಗುವುದು ಎಂದರು.


ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಜಶೇಖರ್ ಮಾತನಾಡಿ ನೂತನ ಅಧ್ಯಕ್ಷ ಎನ್ ಎಂ ಮಂಜುನಾಥ್ ಗೆ  ಅಭಿನಂದನೆ ಸಲ್ಲಿಸಿ ಮಾತನಾಡಿ ಈ ಹಿಂದೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ಪಿರಿಯಾಪಟ್ಟಣ ಗ್ರಾಮ ಪಂಚಾಯಿತಿಗಳಿಗೆ ಸಾವಿರಾರು ಮನೆಗಳನ್ನು  ನೀಡಿದ್ದರು. ಆದರೆ ಈಗಿನ  ಬಿಜೆಪಿ ಸರ್ಕಾರ ಕಡುಬಡವರಿಗೆ ಮನೆಗಳನ್ನು ವಿತರಣೆ ಮಾಡದೆ ನೀಡುವ ಹತ್ತು ಇಪ್ಪತ್ತು ಮನೆಗಳನ್ನು ಹಾಲಿ ಶಾಸಕರು ಆಯ್ಕೆ ಮಾಡುತ್ತಿದ್ದು ಗ್ರಾಮ ಪಂಚಾಯಿತಿ ಸದಸ್ಯರು ಸ್ಥಳಿಯ   ಬಡವರನ್ನು ಗುರ್ತಿಸಿ ಮನೆಗಳನ್ನು ನೀಡಲು ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜ್ಯೋತಿ , ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ ,ಜವರಮ್ಮ, ಕಲ್ಪನಾ, ಮಲ್ಲೇಗೌಡ, ಬಸವರಾಜು, ಸಾವಿತ್ರಮ್ಮ,  ಶಿಲ್ಪ ,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ , ಕರವಸೂಲಿಗಾರ ದೊಡ್ಡೇಗೌಡ , ,ಎಪಿಎಂಸಿ ಮಾಜಿ ನಿರ್ದೇಶಕ ಚಂದ್ರೇಗೌಡ ,  ವಿಜಯಕುಮಾರ್,ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರಾದ ಎನ್ ಆರ್ ಸ್ವಾಮಿ ,ಎಸ್ ಎನ್ ವಿ ಜಿ , ಸಣ್ಣಮೊಗೆ ಗೌಡ, ಚಂದ್ರಪ್ಪ, ಶಿವಕುಮಾರ್, ಜಗದೀಶ್, ಅಪ್ಪಾಜಿಗೌಡ ,ಮಂಜುನಾಥ್, ಉಮೇಶ್, ಸಿದ್ದೇಗೌಡ,  ನಂದೀಶ್, ಹಾಜರಿದ್ದರು.