ಸುವರ್ಣ ಬೆಳಕು ಫೌಂಡೇಶನ್ ವತಿಯಿಂದ ದಿನಾಂಕ 20-3-2022 ರ ಭಾನುವಾರ ಸಂಜೆ 5 ಗಂಟೆಗೆ ಕೃಷ್ಣಮೂರ್ತಿಪುರಂ ನ ನಮನ ಕಲಾಮಂಟಪ ದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನಾಚರಣೆ ಪ್ರಯುಕ್ತ ಯುವ ಸಾಧಕರಿಗೆ ಯುವ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಖ್ಯಾತ ಸಂಸ್ಕೃತ ವಿದುಷಿ ಡಾ.ಕೆ. ಲೀಲಾಪ್ರಕಾಶ್ ಅವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕಾಂಗ್ರೆಸ್ ಮುಖಂಡ ಎಂ.ಎನ್. ನವೀನ್ ಕುಮಾರ್ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಖ್ಯಾತ ಕವಿಗಳಾದ ಪ್ರಕಾಶ್ ಜಿ.ಎಸ್ .ಹಳ್ಳಿ ಹಾಗೂ ವೈದ್ಯ ತರಂಗಿಣಿ ಮಾಸ ಪತ್ರಿಕೆ ಸಂಪಾದಕ ಅನಂತ ಎನ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ವಿವಿಧ ಕ್ಷೇತ್ರಗಳ ಯುವ ಸಾಧಕರಾದ ಶ್ರೀ ಎನ್. ಶ್ರೀಧರ ದೀಕ್ಷಿತ್, ಶ್ರೀ ಚಂದನ್ ಗೌಡ, ಶ್ರೀ ಕೆ.ಪಿ. ಯೋಗೇಶ್, ಶ್ರೀ ಬಸವರಾಜೇಂದ್ರ ಸ್ವಾಮಿ, ಶ್ರೀ ಡಿ.ಕೆ. ವಿಜಯಕುಮಾರ್, ಶ್ರೀ ಬಿ. ಆರ್. ಮಂಜುನಾಥ್, ಅನ್ನದಾತ ಎಂಎಲ್ ಕಲ್ಯಾಣ್ ಕುಮಾರ್ ಇವರುಗಳಿಗೆ ಯುವರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಸಂಸ್ಥೆ ಅಧ್ಯಕ್ಷ ಮಹೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.