ಮೈಸೂರು, ಫೆ.21: ನಗರದ ೧೦೧ ಗಣಪತಿ ದೇವಸ್ಥಾನದ ಬಳಿ ಬಿಜೆಪಿ ಎಸ್.ಟಿ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿ ರಾಜನಹಳ್ಳಿ ಶ್ರೀ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳ ಆರೋಗ್ಯ ಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಅನಾರೋಗ್ಯ ಹಿನ್ನೆಲೆ ಸ್ವಾಮೀಜಿಗಳು ಆಸ್ಪತ್ರೆಗೆ ದಾಖಲಾಗಿರುವುದರಿಂದ ಅವರ ಶೀಘ್ರ ಗುಣಮುಖತೆಯನ್ನು ಕೋರಿ ದೇವಸ್ಥಾನದ ಮುಂಭಾಗದಲ್ಲಿ ಪೂಜೆ ಹಾಗೂ ಸಮೂಹ ಪ್ರಾರ್ಥನೆ ನಡೆಯಿತು.
ಈ ಸಂದರ್ಭದಲ್ಲಿ ಸ್ವಾಮೀಜಿಗಳ ಅಭಿಮಾನಿಗಳು ಹಾಗೂ ಬಿಜೆಪಿ ಎಸ್.ಟಿ ಮೋರ್ಚಾ ಪದಾಧಿಕಾರಿಗಳು ಭಾಗವಹಿಸಿದ್ದರು. ಕಾರ್ಪೊರೇಟರ್ ರವೀಂದ್ರ, ಪಡವಾರಳ್ಳಿ ರಾಮಕೃಷ್ಣ, ದಯಾನಂದ, ಜೋಗಪ್ಪ,,ನಂದೀಶ್ ನಾಯಕ್, ಗಂಗಣ್ಣ, ಪಾಳೆಗಾರ್ ದೀಪಕ್, ರಮನಹಳ್ಳಿ ರವಿ, ಪ್ರಹ್ಲಾದ್, ಮಾಲ್ತೇಶ್ ಹಾಗೂ ತ್ರಿವಿಕ್ರಮ್ ಸೇರಿದಂತೆ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.
