
ಚಾಮರಾಜನಗರ: ಸಮುದಾಯದ ವಿದ್ಯಾರ್ಥಿಗಳು ಈಚಿನ ದಿನಗಳಲ್ಲಿ ಶಿಕ್ಷಣಪಡೆಯಲು ಆಸಕ್ತಿ ತೋರುತ್ತಿರುವುದು ಪ್ರಶಂಸನೀಯ ಎಂದು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ, ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ಜಿಲ್ಲಾ ಉಪ್ಪಾರ ಸಂಘ, ಜಿಲ್ಲೆಯ ಗಡಿಮನೆ, ಕಟ್ಟೆಮನೆ, ಉಪ್ಪಾರಸಂಘಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆದ ಈ ಬಾರಿಯ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ೮೫ ಕ್ಕಿಂತ ಹೆಚ್ಚಿನ ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮುದಾಯದ ಪೋಷಕರು ಓದುವ ವಯಸ್ಸಿನಲ್ಲೇ ವಿವಾಹ ಮಾಡಲು ಮುಂದಾಗಬಾರದು, ಸಮುದಾಯದಲ್ಲಿ ನ್ಯಾಯತೀರ್ಮಾನ ಮಾಡುವಾಗ ಎಚ್ಚರಿಕೆಯಿಂದ ಇರಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಸಮುದಾಯದವರು ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.
ಉಪ್ಪಾರಸಮುದಾಯ ಪ್ರಸ್ತುತ ಪ್ರವರ್ಗ-೧ ರಲ್ಲಿದ್ದು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಉಪ್ಪಾರಸಮುದಾಯವನ್ನು ಪರಿಶಿಷ್ಟವರ್ಗಕ್ಕೆ ಸೇರ್ಪಡೆ ಮಾಡುವ ಸಂಬಂಧ ಕುಲಶಾಸ್ತ್ರಿಯ ಅಧ್ಯಯನಕ್ಕೆ ಅನುದಾನಮಂಜೂರು ಮಾಡಿದ್ದರು. ಈಗಾಗಲೇ ಕುಲಶಾಸ್ತ್ರಿಯ ಅಧ್ಯಯನ ನಡೆಯುತ್ತಿದ್ದು, ಸಮೀಕ್ಷೆ ನಡೆಸಿ ವರದಿನೀಡಲು ಪ್ರಜ್ಞಾವಂತರನ್ನು ನೇಮಕ ಮಾಡಬೇಕಿದೆ ಎಂದರು.
ಸರಕಾರಗಂಗಾಕಲ್ಯಾಣಕ್ಕೆ ಅನುದಾನ ಕಡಿತಮಾಡಲಾಗಿದ್ದು, ನಿಗಮಮಂಡಳಿಗಳಲ್ಲಿ ಸಮುದಾಯದವರು ನಾನಾಆರ್ಥಿಕ ಚಟುವಟಿಕೆ ಕೈಗೊಳ್ಳಲು ನಿಗಧಿತ ಅನುದಾನ ಒದಗಿಸುತ್ತಿಲ್ಲ. ಮೀಸಲಾತಿಯಲ್ಲಿ ನಮ್ಮ ಸಮುದಾಯಕ್ಕೆ ಹೆಚ್ಚಿನ ಅನ್ಯಾಯವಾಗುತ್ತಿದೆ. ಇದು ಸಮುದಾಯಕ್ಕೆ ದೊರಕಬೇಕಾದರೆ ದೊಡ್ಡಮಟ್ಟದ ಹೋರಾಟ ರೂಪಿಸಬೇಕಿದೆ ಎಂದರು.
ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಪ್ರಿಯಾಶಂಕರ್ ಮಾತನಾಡಿ, ಎಲ್ಲವೂ ಇಲ್ಲದಿದ್ದಾಗ ವ್ಯಕ್ತಿ ತಾಳ್ಮೆಯಿಂದ ಇರಬೇಕು, ನಾವು ಬಯಸಿದ್ದು ಎಲ್ಲವೂ ಸಿಕ್ಕಾಗ ಅಹಂಕಾರಪಡದೇ ವಿನಯ, ವಿಧೇಯತೆಯಿಂದ ವರ್ತಿಸಬೇಕು. ಪ್ರಸ್ತುತ ಉನ್ನತ ಶಿಕ್ಷಣಪಡೆದವರು ಸ್ಪರ್ಧಾತ್ಮಕಪರೀಕ್ಷೆ ಎದುರಿಸಲು ಅನೇಕ ಸಂಘಸಂಸ್ಥೆಗಳು ತರಬೇತಿ ನೀಡುತ್ತಿವೆ. ಅವುಗಳ ಸದ್ಭಳಕೆ ನಿಮ್ಮದಾಗಬೇಕು ಎಂದರು.
ನಡೆದ ಈ ಬಾರಿಯ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ೮೫ ಕ್ಕಿಂತ ಹೆಚ್ಚಿನ ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ೩೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು.
ಕಲಾ, ವಾಣಿಜ್ಯ, ವಿಜ್ಞಾನವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯಸ್ಥಾನ ಪಡೆದ ೧೫ ವಿದ್ಯಾರ್ಥಿಗಳಿಗೆ ಪ್ರಥಮಬಹುಮಾನ-ತಲಾ, ೧೦ ಸಾವಿರ, ದ್ವಿತೀಯ-೭೫೦೦, ತೃತೀಯ-೫ ಸಾವಿರ ರೂ.ನೀಡಿ, ಪುರಸ್ಕರಿಸಲಾಯಿತು.
ಜಿಲ್ಲಾ ಉಪ್ಪಾರಸಂಘದ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ,ಜಿಪಂ ಉಪ್ಪಾರ ನಿಗಮದ ಮಾಜಿಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಜಿಪಂ ಮಾಜಿಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ,ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಉಪ್ಪಾರ ಸಹಕಾರ sಸಂಘದ ರವಿ, ಚಾಮರಾಜನಗರ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಚಿಕ್ಕರಾಜಶೆಟ್ಟಿ. ಚಾಮರಾಜನಗರ ಬಾಲಕರ ಸರಕಾರಿಪದವಿಪೂರ್ವ ಬಾಲಕರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಣ್ಣ, ಐ,ಟಿ,ಐ ಕಾಲೇಜಿನ ಪ್ರಾಂಶು ಪಾಲ ರಂಗಸ್ವಾಮಿ ಪತ್ರಕರ್ತ ಗೌಡಹಳ್ಳಿ ಮಹೇಶ್ ಮಾಜಿಸದಸ್ಯ ಕಿನಕಳ್ಳಿ ಸಿದ್ದರಾಜು, ಉಪನ್ಯಾಸಕ ಗೋವಿಂದರಾಜು, ಜಿಲ್ಲೆಯಗಡಿಮನೆ, ಕಟ್ಟೆಮನೆ ಯಜಮಾನರು, ಗ್ರಾಮಗಳ ಮುಖಂಡರು, ತಾಲೂಕು ಉಪ್ಪಾರ ನೌಕರರ ಸಂಘದ ಸೋಮಣ್ಣ, ಯಳಂದೂರುಸಂಘದ ರೇಚಣ್ಣ, ಉಪ್ಪಾರ ನೌಕರರ ಜಿಲ್ಲಾ ಹಾಗೂ ತಾಲೂಕು ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು. ಪೋಷಕರು ಹಾಜರಿದ್ದರು.
