ಮೈಸೂರು ನಗರದ ಗಾಂಧಿಚೌಕದಲ್ಲಿರುವ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಬ್ಯಾಂಕಿನ ಷೇರುದಾರರ ಮಕ್ಕಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರತಿಭಾನ್ವಿತ
ವಿದ್ಯಾರ್ಥಿಗಳಿಗೆ ವಾರ್ಷಿಕ ಮಹಾಸಭೆಯ ಅಂಗವಾಗಿ ಇಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಅದ್ಯಕ್ಷತೆ ವಹಿಸಿದ್ದಬ್ಯಾಂಕಿನ ಅದ್ಯಕ್ಷರಾದ ಕೆ ಉಮಾಶಂಕರ್ ಅವರು ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಶಾಲು ಹಾರ ಹಣ್ಣಿನ ಬುಟ್ಟಿ ಪ್ರಮಾಣಪತ್ರ ನೀಡುವ ಮೂಲಕ


ಮಾತನಾಡಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ಷೇರುದಾರರಿಗೆ ಶೇ 15% ಡಿವಿಡೆಂಟ್ ನೀಡುತ್ತಿದ್ದು ಬ್ಯಾಂಕ್ 1.5 ಕೋಟಿಯಷ್ಟು ಲಾಭದಲ್ಲಿದ್ದು ಇದಕ್ಕೆ ಕಾರಣರಾದ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ನೌಕರರಿಗೆ ಹಾಗೂ ಗ್ರಾಹಕರಿಗೆ ಅಭಿನಂದಿಸಿದರು

ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪಡುವಾರಹಳ್ಳಿ ಎಂ ರಾಮಕೃಷ್ಣ , ನಿರ್ದೇಶಕರಾದ ರಾಜಕೀಯ ರವಿಕುಮಾರ್, ಎಸ್.ಬಿ.ಎಂ. ಮಂಜು,ಜೆ.ಯೋಗೇಶ್,ಹೆಚ್ ಹರೀಶ್ ಕುಮಾರ್, ಎಸ್.ಸೋಮಣ್ಣ,ಎಸ್.ಅರವಿಂದ, ಸಿ.ರೇವಣ್ಣ,ಆರ್.ರವಿಕುಮಾರ್, ಪಿ.ರಾಜೇಶ್ವರಿ, ಪಿ.ಸವಿತಾ,ವೃತ್ತಿಪರ ನಿರ್ದೇಶಕರಾದ ಸಿ.ಎಸ್.ರಾಮಕೃಷ್ಣಯ್ಯ, ಕಾರ್ಯದರ್ಶಿ ಕೆ.ಹರ್ಷಿತ್ ಗೌಡ, ಹಾಗೂ ಸಿಬ್ಬಂದಿ ವರ್ಗದವರಿದ್ದರು