ಮೈಸೂರು: ಲಾಕ್ ಡೌನ್ ಹಿನ್ನಲೆಯಲ್ಲಿ ನಗರದಲ್ಲಿ ಆಹಾರವಿಲ್ಲದೆ ಹಸಿವಿನಿಂದ ಬಳಲುತ್ತಿರುವ ಮೂಕ ಪ್ರಾಣಿಗಳನ್ನು ಹುಡುಕಿ ಆಹಾರ ನೀಡುವ ಕಾರ್ಯವನ್ನು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಕಳೆದ ಹದಿಮೂರು ದಿನಗಳಿಂದ ಮಾಡುತ್ತಾ ಬಂದಿದೆ.


ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ಅವರು ಕೊರೋನಾ ಸೋಂಕು ತಡೆಗಟ್ಟಲು ಇಡೀ ರಾಷ್ಟ್ರವೇ ಲಾಕ್ ಡೌನ್ ಆಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಹೀಗಿರುವಾಗ ಮೂಕ ಪ್ರಾಣಿಪಕ್ಷಿಗಳನ್ನು ರಕ್ಷಿಸುವುದು ಸಹ ನಮ್ಮ ಕರ್ತವ್ಯ ವಾಗಿದೆ. ಮೂಕಪ್ರಾಣಿಗಳನ್ನು ರಕ್ಷಿಸುವಲ್ಲಿ ನಿರಂತರವಾಗಿ ಕಳೆದ 13 ದಿನಗಳಿಂದ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಹಾರಾಜ ಮೈದಾನ, ಚಾಮುಂಡಿಬೆಟ್ಟ ತಪ್ಪಲು ಹಾಗೂ ಮೈಸೂರಿನ ಸುತ್ತಮುತ್ತ ಪ್ರದೇಶಗಳಲ್ಲಿ ತೆರಳಿ ಪ್ರಾಣಿಗಳಿಗೆ ಹಾಲು ,ಅನ್ನ , ಮೊಟ್ಟೆ , ಬಿಸ್ಕೆಟ್, ಬ್ರೆಡ್ ಹಾಗೂ ಇನ್ನಿತರ ವಸ್ತುಗಳನ್ನು ನೀಡುತ್ತಿದೆ.

ಲಾಕ್ ಡೌನ್ ಮುಗಿಯುವವರೆಗೂ ಈ ಕಾರ್ಯ ಮುಂದುವರೆಯಲಿದೆ ಎಂದ ಅವರು ಲಾಕ್ ಡೌನ್ ಸಂದರ್ಭದಲ್ಲಿ ಕೊರೋನಾ ಸೊಂಕು ತಡೆಗಟ್ಟಲು ನಾವು ಮನೆಯಲ್ಲೆ ಸುರಕ್ಷಿತವಾಗಿದ್ದೇವೆ. ಆದರೆ ನಾಗರಿಕತೆಯೊಂದಿಗೆ ಜೀವಿಸುವ ಬೀದಿನಾಯಿಗಳಿಗೆ ಹಾಲು ಅನ್ನ, ಹಾಗೂ ಬನ್, ಮತ್ತು ಕೋತಿಗಳಿಗೆ ಬಾಳೆ ಹಣ್ಣು ನೀಡಲಾಗುತ್ತಿದೆ. ಪ್ರತಿಯೊಬ್ಬರೂ ನಮ್ಮಮನೆಗಳ ಸುತ್ತಮುತ್ತಲೂ ವಾಸಿಸುವ ಬೀದಿಪ್ರಾಣಿಗಳಿಗೆ ಒಂದು ಹೊತ್ತಾದರೂ ಊಟ ಕೊಡೋಣ, ಹಾಗೂ ಮನೆಯ ಮೇಲೆ ಬಟ್ಟಲಿನಲ್ಲಿ ಕುಡಿಯಲು ನೀರು ಇಟ್ಟರೇ ಸಣ್ಣಪುಟ್ಟ ಪಕ್ಷಿಗಳಿಗೆ ಉಪಯೋಗವಾಗುತ್ತದೆ, ಪರಿಸರ ಕಾಳಜಿಯೊಂದಿಗೆ ಮೂಕಪ್ರಾಣಿ ಪಕ್ಷಿಗಳ ಸಂರಕ್ಷಣೆ ಮನುಷ್ಯರ ಕರ್ತವ್ಯವಾಗಿರುತ್ತದೆ ಎಂದರು.


ದೇಶ ಲಾಕ್ ಡೌನ್ ಆಗಿರುವುದರಿಂದ ಬೀದಿ ಬದಿ ಪ್ರಾಣಿಗಳಿಗೆ ಏನಾದರೂ ತೊಂದರೆ ಅಥವಾ ಆಹಾರವಿಲ್ಲದೆ ಪರದಾಡುವ ಪರಿಸ್ಥಿತಿ ಕಂಡು ಬಂದರೆ ತಕ್ಷಣ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್ 9880752727 ಅವರ ನಂಬರ್ ಗೆ ಕರೆ ಮಾಡಬಹುದು ಅವರು ಹೇಳಿದರು.
ಈ ಸಂದರ್ಭ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ನವೀನ್ ಕುಮಾರ್, ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ಜೋಗಿ ಮಂಜು , ವಿಕ್ರಮ ಅಯ್ಯಂಗಾರ್, ಹರೀಶ್ ನಾಯ್ಡು, ಚೇತನ್ ಕಾಂತರಾಜು ಇನ್ನಿತರರು ಹಾಜರಿದ್ದರು.

 

By admin