ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಮೈಸೂರು ಲಿಟರರಿ ಫೋರಂ ಚಾರಿಟೆಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ ನಿಂದ ಆಯೋಜಿಸಿಲಾಗಿದ್ದ ಮೈಸೂರು ಸಾಹಿತ್ಯ ಸಂಭ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್, ಸಾಹಿತಿ ಡಾ.ಚಂದ್ರಶೇಖರ ಕಂಬಾರ, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಮೈಸೂರು ಸಾಹಿತ್ಯ ಸಂಭ್ರಮದ ಶುಭ ಸಂಜಯ್ ಅರಸ್ ಭಾಗವಹಿಸಿದ್ದರು.

ಮೈಸೂರು: ದೇಶದ ಇತಿಹಾಸ ಪುರಾಣಗಳನ್ನು ಬಹುಶಿಸ್ತೀಯ ದೃಷ್ಟಿಕೋನದಲ್ಲಿ ನೋಡಿದರೆ ಅನೇಕಾರು ವೈಜ್ಞಾನಿಕ ವಿಷಯಗಳು ಅದರಲ್ಲಿ ಅಡಗಿರುವುದು ತಿಳಿಯುತ್ತದೆ. ಇತಿಹಾಸವನ್ನು ನೋಡುವಾಗ ಏಕಮುಖ ದಿಂದ ನೋಡದೆ ಸಮಚಿತ್ತದಿಂದ ಎಲ್ಲ ದೃಷ್ಟಿಕೋನ ದಿಂದಲೂ ಗಮನಿಸಬೇಕು ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ಡಾ.ಬಿಬೇಕ್ ಡೆಬಾಯ್ ತಿಳಿಸಿದರು.

ಮೈಸೂರು ಲಿಟರರಿ ಫೋರಂ ಚಾರಿಟೆಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ ವತಿಯಿಂದ ಆಯೋಜಿಸಿರುವ ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ’ಇತಿಹಾಸ ಮತ್ತು ಪುರಾಣದಿಂದ ಆಡಳಿತ ಪಾಠಗಳು ವಿಷಯ ಕುರಿತು ಅವರು ಮಾತನಾಡಿದರು.ಇತಿಹಾಸ ಎಂದರೆ ನಾವು ಗಮನಿಸುವುದು ಯುದ್ಧ, ದಾಳಿ ಮುಂತಾದವು ಮಾತ್ರ. ಅದಷ್ಟೇ ಅಲ್ಲ. ವೇದ ವ್ಯಾಸರು ಬರೆದದ್ದು ಮಾತ್ರ ಪುರಾಣ ಎನಿಸಿಕೊಂಡಿವೆ. ಮಹಾಪುರಾಣ, ಉಪ ಪುರಾಣ ಎಂಬಂತೆ ಅನೇಕಾರು ಪುರಾಣಗಳು ನಮ್ಮಲ್ಲಿ ಇವೆ ಎಂಬುದನ್ನು ಗಮನಿಸಬೇಕು ಎಂದು ಹೇಳಿದರು.

ನಾವು ಪುರಾಣಗಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಏಕೆಂದರೆ ಭೀಷ್ಮ ತಪ್ಪು ಮಾಡಿದರೂ ಆತ ಹಿರಿಯವನು, ಶ್ರೀಮಂತ ಎಂಬ ಕಾರಣಕ್ಕೆ ಮನ್ನಿಸ ಲಾಗುತ್ತದೆ. ಇಂತಹ ಹಲವಾರು ಸೂಕ್ಷ್ಮ ವಿಷಯಗಳು ಅವಲೋಕನದಿಂದ ನಮಗೆ ತಿಳಿಯುತ್ತದೆ ಎಂದರು.ದೇಶಾದ್ಯಂತ ಮಹಾ ಪುರಾಣಗಳು, ಅಷ್ಟಾದಶ ಮಹಾಪುರಾಣಗಳು ಚಾಲ್ತಿಯಲ್ಲಿವೆ. ನಮಗೆ ತಿಳಿದಿರುವುದು ವಾಲ್ಮೀಕಿ ರಾಮಾಯಣ, ವ್ಯಾಸರ ಮಹಾಭಾರತ ಮಾತ್ರ. ವ್ಯಾಸರು ವೇದಗಳನ್ನು ವರ್ಗೀಕರಿಸಿದ ನಂತರ ಮಹಾಭಾರತ ರಚಿಸಿದರು. ಅವರು ೧೮ ಮಹಾ ಪುರಾಣಗಳನ್ನು ರಚಿಸಿದ್ದಾರೆ. ಎಂಬುದು ನಮ್ಮಲ್ಲಿರುವ ಸಾಮಾನ್ಯ ಗ್ರಹಿಕೆ ಎಂದರು.

ರಾಜರುಗಳು ಹುಟ್ಟಿದ್ದು ತ್ರೇತಾಯುಗದಲ್ಲಿ, ಒಂದು ಯುಗದಿಂದ ಮತ್ತೊಂದು ಯುಗಕ್ಕೆ ಧರ್ಮ ಕ್ಷೀಣಿಸುತ್ತ ಹೋಗುತ್ತಿದೆ. ಇದನ್ನು ಅನೇಕ ಶ್ಲೋಕಗಳಲ್ಲಿ ಉಲ್ಲೇಖಿಸಲಾಗಿದೆ. ಈಗ ದೊರಕಿರುವ ತಾಳೆಗರಿಗಳ ಪೈಕಿ ಶೇ.೯೫ರಷ್ಟನ್ನು ಭಾಷಾಂತರಿಸಿಲ್ಲ. ಈಗ ಭಾಷಾಂತರಿಸಿ ರುವ ಪುರಾಣಗಳಲ್ಲಿಯೇ ಸಾಕಷ್ಟು ಜ್ಞಾನ ಅಡಗಿರುವಾಗ, ಉಳಿದವುಗಳಲ್ಲಿ ಮತ್ತೆಷ್ಟು ಜ್ಞಾನ ಇರಬೇಡ ಎಂದರು.ಕೃತಮಾಲ ಎಂಬ ನದಿಯ ಉಲ್ಲೇಕ ಪಾರಣಗಳಲ್ಲಿ ಇದೆ. ಮತ್ಯಾವತಾರದಲ್ಲಿ ಇದು ಬರುತ್ತದೆ. ಈ ಕೃತಮಾಲ ನದಿ ಹರಿಯುತ್ತಿದ್ದ ಜಾಗವನ್ನು ಹುಡುಕಿದಾಗ ಈಗ ಅಲ್ಲಿ ನಾನಮಿಯಾ ರೈಲ್ವೆ ನಿಲ್ದಾಣವಿದೆ ಎಂದು ತಿಳಿದು ಬಂದಿದೆ.
ಕಾರ್ಯಕ್ರಮಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಚಾಲನೆ ನೀಡಿದರು. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಮೈಸೂರು ಸಾಹಿತ್ಯ ಸಂಭ್ರಮದ ಶುಭ ಸಂಜಯ್ ಕಾರ್ಯಕ್ರಮದಲ್ಲಿ ಹಾಜರಿದ್ದರು.