ನವದೆಹಲಿ:  ಜ.೨೬ ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದ ವೇಳೆ ನಡೆಯುವ ಪರೇಡ್ನಲ್ಲಿ ಸಾಂಸ್ಕ್ರತಿಕ ನಗರಿ ಮೈಸೂರಿನ ವಿದ್ಯಾರ್ಥಿನಿ ಪ್ರಮೀಳಾ ಕುನ್ವರ್ NCC ನೇತೃತ್ವ ವಹಿಸಲಿದ್ದಾರೆ.

ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಟೀ ಅಂಗಡಿ ನಡೆಸುತ್ತಿರುವ ಪ್ರತಾಪ್ ಸಿಂಗ್ ಪುತ್ರಿಯಾಗಿರುವ ಪ್ರಮೀಳಾ ಕುನ್ವರ್), ಮಹಾರಾಣಿ ಕಾಲೇಜಿನಲ್ಲಿ  ಬಿಎಸ್‌ಸಿ ವಿದ್ಯಾರ್ಥಿನಿಯಾಗಿದ್ದಾರೆ. ಮನೆಯಲ್ಲಿ ಕುಟಂಬದಲ್ಲಿ ಸಂಭ್ರಮದ ವಾತವರಣವಾಗಿದೆ.

ವಿವಿ ಮೊಹಲ್ಲಾ ನಿವಾಸಿಯಾಗಿರುವ ಪ್ರಮೀಳಾ ೨೦೧೮ರ ದಸರಾ ಮೆರವಣಿಗೆಯಲ್ಲೂ ಎನ್ ಸಿ ಸಿ ನೇತೃತ್ವ ವಹಿಸಿದ್ದರು. ಈಗಾಗಲೇ ದೆಹಲಿಯಲ್ಲಿ ರಿಹರ್ಸಲ್ಗಳು ನಡೆಯುತ್ತಿವೆ. ವಿಜಯ್ ಚೌಕ್ನಿಂದ ಇಂಡಿಯಾ ಗೇಟ್ ವರೆಗಿನ ರಾಜ್ಪಥ್ ಮಾರ್ಗದಲ್ಲಿ ಪಥಸಂಚಲನ ರಿಹರ್ಸಲ್ ನಡೆಸಲಾಗುತ್ತಿದೆ.

ಲಸಿಕೆ ಪಡೆಯದ ಜನರಿಗೆ ಈವೆಂಟ್ಗೆ ಹಾಜರಾಗಲು ಅನುಮತಿಯಿಲ್ಲ:

ಗಣರಾಜ್ಯೋತ್ಸವ ಪರೇಡ್ ೨೦೨೨ಗಾಗಿ ದೆಹಲಿ ಪೊಲೀಸರು ಹೊರಡಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ, ‘ಇನ್ನೂ ಲಸಿಕೆ ಪಡೆಯದ ಜನರು ಹಾಗೂ ೧೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಈವೆಂಟ್ಗೆ ಹಾಜರಾಗಲು ಅನುಮತಿಸಲಾಗುವುದಿಲ್ಲ’.