ವಿದ್ಯುತ್ ಸಮಸ್ಯೆ ಸಂಬಂಧ ಜನಸಂಪರ್ಕ ಸಭೆ
ಮೈಸೂರು,ಡಿಸೆಂಬರ್.:- ರಾಮಕೃಷ್ಣ ನಗರ ಉಪ-ವಿಭಾಗ ವ್ಯಾಪ್ತಿಯಲ್ಲಿನ ವಿದ್ಯುತ್ ಸಮಸ್ಯೆಗಳ ಸಂಬಂಧ ಗ್ರಾಹಕರ ಕುಂದು ಕೊರತೆಗಳ ಕುರಿತು ಡಿಸೆಂಬರ್ 16ರಂದು ಬೆಳಗ್ಗೆ 11 ಗಂಟೆಗೆ ಜನ ಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಸಭೆಯನ್ನು ವಿ.ವಿ.ಮೊಹಲ್ಲಾ ವಿಭಾಗದ ಅಧೀಕ್ಷಕ ಇಂಜಿನಿಯರ್ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ ಅಧ್ಯಕ್ಷತೆಯಲ್ಲಿ ವಿ.ವಿ ಮೊಹಲ್ಲಾದ ಚಾಮುಂಡೇಶ್ವರಿ ವಿದ್ಯುತ್ ವಿತರಣ ನಿಗಮ ನಿಯಮಿತಯ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಕಚೇರಿಯಲ್ಲಿ ಏರ್ಪಡಿಸಲಾಗಿದೆ.
ಆದ್ದರಿಂದ ಈ ವ್ಯಾಪ್ತಿಯ ವಿದ್ಯುತ್ ಗ್ರಾಹಕರು ಭಾಗವಹಿಸಿ ವಿದ್ಯುತ್ ಸಮಸ್ಯೆ ಬಗ್ಗೆ ಏನಾದರೂ ದೂರುಗಳಿದ್ದಲ್ಲಿ, ಅರ್ಜಿ ನೀಡುವುದರ ಮುಖಾಂತರ ಬಗೆಹರಿಸಿಕೊಳ್ಳುವಂತೆ ವಿ.ವಿ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.