ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಚೆಸ್ಕಾಂ ಉಪ ವಿಭಾಗದ ವ್ಯಾಪ್ತಿಯಲ್ಲಿ ದಿನಾಂಕ ನವಂಬರ್ 20ರಂದು ಬೆಟ್ಟದಪುರ ಮತ್ತು ಕಣ್ಣಗಾಲ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣೆ ಇರುವುದರಿಂದ ಬೆಳಗ್ಗೆ 10 ಗಂಟೆಯಿಂದ ಸಂಜೆ 6:00 ವರೆಗೆ ವಿದ್ಯುತ್ ನಿಲುಗಡೆಗೊಳಿಸುವುದರಿಂದ ಬೆಟ್ಟದಪುರ, , ಚಿಕ್ಕ ನೇರಳೆ ಹರದೂರು, ಬೆಟ್ಟದತುಂಗ, ಭುವನ ಹಳ್ಳಿ, ಕೋಮಲಪುರ, ಹಿಟ್ನೆ ಹೆಬ್ಬಾಗಿಲು,, ಕಣಗಾಲ್, ಹಲಗನಹಳ್ಳಿ, ಚಪ್ಪರದಹಳ್ಳಿ, ದೊಡ್ಡ ಕಮರಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೂ ವಿದ್ಯುತ್ ಸಂಪರ್ಕ ಇರುವುದಿಲ್ಲ ದಿನಾಂಕ ನವಂಬರ್ 20, 22, 24,ಮತ್ತು 26ರಂದು ರಾವಂದೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹೊಸ ಪೀಡರ್ ಕಾಮಗಾರಿಯನ್ನು ಯನ್ನು ಕೈಗೊಂಡಿರುವುದರಿಂದ ರಾವಂದೂರು, ಹಂಡಿತವಳ್ಳಿ, ಮಾಕೋಡು,ಎನ್. ಶಟ್ಟಹಳ್ಳಿ, ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 6:00 ವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ ಗ್ರಾಹಕರು ಸಹಕರಿಸಬೇಕಾಗಿ ಬೆಟ್ಟದಪುರ ಚೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಪಿ.ಆರ್ ಆಕಾಶ್ ತಿಳಿಸಿದ್ದಾರೆ.