ನವದೆಹಲಿ: ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡ ಟೆಸ್ಟ್ ವಿಶ್ವಚಾಂಪಿಯನ್‍ ಶಿಪ್ ಗೆದ್ದರೆ ಬೆತ್ತಲೆಯಾಗುವುದಾಗಿ ನಟಿ ಹಾಗೂ ರೂಪದರ್ಶಿ ಪೂನಂ ಪಾಂಡೆ ಮತ್ತೊಮ್ಮೆ ಹೇಳಿರುವುದು ಪಡ್ಡೆ ಹುಡುಗರ ಎದೆಯಲ್ಲಿ ಅವಲಕ್ಕಿ ಕುಟ್ಟುವಂತೆ ಮಾಡಿದೆ.

ಹಾಗೆನೋಡಿದರೆ ಇಂತಹ ಹೇಳಿಕೆಗಳನ್ನು ನೀಡುವುದು ಪೂನಂ ಪಾಂಡೆಗೇನು ಹೊಸತಲ್ಲ. 2011ರಲ್ಲಿ ಇದೇ ರೀತಿಯ ಹೇಳಿಕೆ ನೀಡಿದ್ದರಲ್ಲದೆ ತನ್ನ ಕೆಲವು ಸೆಕ್ಸಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆ ಕೆಡಿಸುವುದರೊಂದಿಗೆ ಹಲವರ ಆಕ್ರೋಶಕ್ಕೆ ಕಾರಣವಾಗಿದ್ದರು.

ಇದೀಗ ಮತ್ತೊಮ್ಮೆ ಖಾಸಗಿ ವಾಹಿನಿವೊಂದಕ್ಕೆ ಸಂದರ್ಶನ  ನೀಡುತ್ತಾ ಕೊಹ್ಲಿ ಪಡೆ ವಿಶ್ವಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಕೀವಿಸ್ ವಿರುದ್ಧ ಸೆಣಸಾಡುತ್ತಿರುವ ಬಗ್ಗೆ ಮಾತನಾಡಿ ಕ್ರಿಕೆಟ್ ಚಾಲು ಹೈ, ಲೋಗ್ ಕ್ರಿಕೆಟ್ ಖೇಲ್ ರಹೇ ಹೈ. ಈ ಬಾರಿ ಮತ್ತೆ ಹೇಳುತ್ತಿದ್ದೇನೆ ಭಾರತ ತಂಡ ಟೆಸ್ಟ್ ವಿಶ್ವಚಾಂಪಿಯನ್‍ಶಿಪ್ ಗೆದ್ದರೆ ಮತ್ತೆ ಬೆತ್ತಲಾಗಿ ವಿವಾದ ಎದುರಿಸಲು ಸಿದ್ಧ ಎಂದಿದ್ದಾರೆ. ಇದು ಕ್ರಿಕೆಟ್ ತಂಡಕ್ಕೆ ಉತ್ಸಾಹ ತುಂಬಲು ಹೇಳಿದರೋ? ಅಥವಾ ಪ್ರಚಾರಕ್ಕೋ ಗೊತ್ತಿಲ್ಲ. ಒಟ್ಟಾರೆಯಾಗಿ ಪ್ರಚಾರ ಸಿಗುತ್ತಿರುವುದಂತು ಸತ್ಯ.

By admin