ಕೋವಿಡ್-೧೯ ಹಾಗೂ ಓಮಿಕ್ರಾನ್ ವೈರಸ್ ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದರ ನಿಯಂತ್ರಣಕ್ಕಾಗಿ ದಿನಾಂಕ:೦೪.೦೧.೨೦೨೨ ರಂದು ಕರ್ನಾಟಕ ಸರ್ಕಾರವು ಮಾರ್ಗಸೂಚಿಯನ್ನು ಹೊರಡಿಸಿದ್ದು, ಈ ಮಾರ್ಗಸೂಚಿಯು ದಿನಾಂಕ: ೦೭/೦೧/೨೦೨೨ ರಂದು ರಾತ್ರಿ ೧೦-೦೦ ಗಂಟೆಯಿಂದ ದಿನಾಂಕ: ೧೦/೦೧/೨೦೨೨ ರ ಬೆಳಿಗ್ಗೆ ೫-೦೦ ಗಂಟೆಯವರೆಗೆ ವಿಕೇಂಡ್ ಕರ್ಫ್ಯೂ ಜಾರಿಯಲ್ಲಿದ್ದು,  ಸರ್ಕಾರದ ಕೋವಿಡ್-೧೯/ಓಮಿಕ್ರಾನ್ ವೈರಸ್‌ನ ನಿಯಂತ್ರಣದ ಮಾರ್ಗಸೂಚಿಗಳ ಜಾರಿ ಸಂಬಂಧ ಮೈಸೂರು ನಗರ ಪೊಲೀಸರು ಇಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.


ಮೈಸೂರು ನಗರ ವ್ಯಾಪ್ತಿಯ ಎಲ್ಲಾ ಸ್ಥಳಗಳಲ್ಲಿ ಓಡಾಡುವ ಸಾರ್ವಜನಿಕರನ್ನು ಪೊಲೀಸರು ಪರಿಶೀಲಿಸಿದ್ದು, ಈ ಸಮಯದಲ್ಲಿ ಸರ್ಕಾರದ ವಿಕೇಂಡ್ ಕರ್ಫ್ಯೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿ,ಅನಾವಶ್ಯಕವಾಗಿ ಓಡಾಡುತ್ತಿದ್ದ ಸಾರ್ವಜನಿಕರ ೦೨ ದ್ವಿಚಕ್ರ ವಾಹನಗಳನ್ನು ಪೊಲೀಸರು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡಿದ್ದಾರೆ.  
ಕೋವಿಡ್-೧೯/ಓಮಿಕ್ರಾನ್ ವೈರಸ್‌ನ ನಿಯಂತ್ರಣದ  ಪ್ರಮುಖ ನಿಯಮಗಳಾದ ಮಾಸ್ಕ್ ಧರಿಸುವಿಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಉಲ್ಲಂಘನೆ ಸಂಬಂಧ ಮೈಸೂರು ನಗರದಲ್ಲಿ ಒಟ್ಟು ೪೬೧ ಪ್ರಕರಣಗಳನ್ನು ದಾಖಲಿಸಿ, ರೂ. ೮೦,೭೫೦ /- ಸ್ಥಳ ದಂಡ ವಿಧಿಸಿ ದ್ದಾರೆ.   

ಲ್ಲದೇ ಕೋವಿಡ್-೧೯/ ಓಮಿಕ್ರಾನ್ ವೈರಸ್ ನಿಯಂತ್ರಣದ ಪ್ರಮುಖ ನಿಯಮಗಳಾದ ಮಾಸ್ಕ್ ಧರಿಸುವಿಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಉಲ್ಲಂಘನೆ ಮತ್ತು ವಿಕೇಂಡ್ ಕರ್ಪ್ಯೂ ನಿಯಮಗಳನ್ನು ಉಲ್ಲಂಘನೆ ಮಾಡಿ ಸಾರ್ವಜನಿಕರು/ಗ್ರಾಹಕರೊಂದಿಗೆ ವ್ಯಾಪಾರ/ವ್ಯವಹಾರ ನಡೆಸಿರುವ ಅಂಗಡಿಗಳು/ ಸಂಸ್ಥೆಗಳ/ಸಾರ್ವಜನಿಕರ ವಿರುದ್ದ ಭಾರತೀಯ ದಂಡ ಸಂಹಿತೆ (ಐ.ಪಿ.ಸಿ) / The Disaster Management act-2005 / The Karnataka Epidemic Diseases act. ೨೦೨೦ ಗಳ ಅಡಿಯಲ್ಲಿ ಈ ಕೆಳಕಂಡಂತೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗಿದೆ.


ಲಷ್ಕರ್ ಠಾಣಾ ವ್ಯಾಪ್ತಿಯ ವೀರನಗೆರೆಯ ಬಿ.ಎನ್ ರಸ್ತೆಯಲ್ಲಿರುವ ಪಲ್ಲವಿ ಫ್ಲವರ್ ಡೆಕೊರೇಷನ್‌ನ ಮಾಲೀಕರು ಕೋವಿಡ್ -೧೯/ಓಮಿಕ್ರಾನ್ ವೈರಸ್ ನಿಯಂತ್ರಣದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿ ಅಂ ಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.


ಉದಯಗಿರಿ ಠಾಣಾ ವ್ಯಾಪ್ತಿಯ ಸೈಯದ್ ಅಬ್ದುಲ್ ರೆಹಮಾನ್ ರಸ್ತೆ, ಖೂಬಾ ಮಸೀದಿ ಬಳಿ, ಪಠಾಣ್ ಹಾರ್ಡ್‌ವೇರ್‌ನ ಮಾಲೀಕರು ಕೋವಿಡ್ -೧೯/ಓಮಿಕ್ರಾನ್ ವೈರಸ್ ನಿಯಂತ್ರಣದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.


ಆಲನಹಳ್ಳಿ ಠಾಣಾ ವ್ಯಾಪ್ತಿಯ ದೇವೆಗೌಡ ಸರ್ಕಲ್ ಬಳಿ ಇರುವ ಕೇರಳ ಹೋಟೆಲ್ ಮಾಲೀಕ ಅಸ್ಕರ್ ಎಂಬುವರು ಕೋವಿಡ್ -೧೯/ಓಮಿಕ್ರಾನ್ ವೈರಸ್ ನಿಯಂತ್ರಣದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿ ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ, ಮಾಸ್ಕ್ ಧರರಿಸದೇ ಬರುವ ಗ್ರಾಹಕರಿಗೆ ತಮ್ಮ ಹೋಟಲ್‌ನಲ್ಲಿ ವ್ಯಾಪಾರ ಮಾಡುತ್ತಿದ್ದ ಅಸ್ಕರ್ ಎಂಬುವರ ವಿರುದ್ದ ಕ್ರಮಕೈಗೊಳ್ಳಲು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.


ಮೇಟಗಳ್ಳಿ ಠಾಣಾ ವ್ಯಾಪ್ತಿಯ ಜೆ.ಕೆ ಟೈರ್ ಫ್ಯಾಕ್ಟರಿ ಸರ್ಕಲ್ ಬಳಿ ಇರುವ ನಾಗಣ್ಣ ಸ್ಟಾಲ್ ಎಂಬ ಚಿಲ್ಲರೆ ಅಂಗಡಿಯನ್ನು ತೆರೆದು ಕೋವಿಡ್-೧೯/ಓಮಿಕ್ರಾನ್ ವೈರಸ್ ನಿಯಂತ್ರಣದ ಮಾರ್ಗಸೂಚಿ ಉಲ್ಲಂಘನೆ ಮಾಡಿ ವ್ಯಾಪಾರ ಮಾಡುತ್ತಿದ್ದ ನಾಗಣ್ಣ ಎಂಬುವವರ ವಿರುದ್ದ ಕ್ರಮ ಕೈಗೊಳ್ಳಲು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.


ಮೇಟಗಳ್ಳಿ ಠಾಣಾ ವ್ಯಾಪ್ತಿಯ ಕುಂಬಾರಕೊಪ್ಪಲುನ ಬಳಿ ಇರುವ ಶ್ರೀರಾಮಮಂದಿರ ಹೋಟಲ್‌ನ ಮಾಲೀಕರ ಭರತ್ ಎಂಬುವರು ಹೋಟಲ್‌ನ್ನು ತೆರೆದು ಕೋವಿಡ್ -೧೯/ಓಮಿಕ್ರಾನ್ ವೈರಸ್ ನಿಯಂತ್ರಣದ ಮಾರ್ಗಸೂಚಿ ಉಲ್ಲಂಘನೆ ಮಾಡಿ, ಗ್ರಾಹಕರನ್ನು ಗುಂಪು ಕಟ್ಟಿಕೊಂಡು ಹೋಟಲ್ ಒಳಗೆ ಸರ್ವೀಸ್ ಮಾಡಿ ವ್ಯಾಪಾರ ಮಾಡುತ್ತಿದ್ದ ನಾಗಣ್ಣ ಎಂಬುವವರ ವಿರುದ್ದ ಕ್ರಮ ಕೈಗೊಳ್ಳಲು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.


ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಎಸ್ ನಗರದ ಬಳಿ ಇರುವ ಕೇರಳ ಕೇಫೆ ಹೋಟಲ್‌ನ ಮಾಲೀಕರಾದ ಸತೀಶ್ ಎಂಬುವರು ಹೋಟಲ್‌ನ್ನು ತೆರೆದು ಕೋವಿಡ್ -೧೯/ಓಮಿಕ್ರಾನ್ ವೈರಸ್ ನಿಯಂತ್ರಣದ ಮಾರ್ಗಸೂಚಿ ಉಲ್ಲಂಘನೆ ಮಾಡಿ, ಗ್ರಾಹಕರನ್ನು ಗುಂಪು ಕಟ್ಟಿಕೊಂಡು ಹೋಟಲ್ ಒಳಗೆ ಸರ್ವೀಸ್ ಮಾಡಿ ವ್ಯಾಪಾರ ಮಾಡುತ್ತಿದ್ದ ಸತೀಶ್ ಎಂಬುವವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.


ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಆರ್. ಮಿಲ್ ಕಾಲೋನಿ ಬಳಿ ಇರುವ ಗುಜರಿ ಅಂಗಡಿಯ ಮಾಲೀಕರಾದ ಸುನೀಲ್ ಕುಮಾರ್ ಎಂಬುವರು ಗುಜುರಿ ಅಂಗಡಿಯನ್ನು ತೆರೆದು ಕೋವಿಡ್ -೧೯/ಓಮಿಕ್ರಾನ್ ವೈರಸ್ ನಿಯಂತ್ರಣದ ಮಾರ್ಗಸೂಚಿ ಉಲ್ಲಂಘನೆ ಮಾಡಿ ಮಾಸ್ಕ್ ಧರಿಸದೆ ವ್ಯಾಪಾರ ಮಾಡುತ್ತಿದ್ದ ಸತೀಶ್ ಎಂಬುವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.


ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಕೆಸರೆಯಲ್ಲಿರುವ ಕಬ್ಬಿಣ ಮತ್ತು ಹಾರ್ಡ್‌ವೇರ್ ಅಂಗಡಿಯ ಮಾಲೀಕರಾದ ಕುಶಾಲ್‌ಗೌಡ ಎಂಬುವರು ತಮ್ಮ ಹಾರ್ಡ್‌ವೇರ್ ಅಂಗಡಿಯನ್ನು ತೆರೆದು ಕೋವಿಡ್ -೧೯/ಓಮಿಕ್ರಾನ್ ವೈರಸ್ ನಿಯಂತ್ರಣದ ಮಾರ್ಗಸೂಚಿ ಉಲ್ಲಂಘನೆ ಮಾಡಿ ಮಾಸ್ಕ್ ಧರಿಸದೆ ವ್ಯಾಪಾರ ಮಾಡುತ್ತಿದ್ದ ಕುಶಾಲ್‌ಗೌಡ ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ