ಬೆಂಗಳೂರು : ಕಲ್ಯಾಣ ಕರ್ನಾಟಕ ಪ್ರದೇಶವೂ ಒಳಗೊಂಡಂತೆ ರಾಜ್ಯದಲ್ಲಿ ಖಾಲಿ ಇರುವ 3533 ಪೊಲೀಸ್ (ನಾಗರೀಕ ) ಕಾನ್ಸ್ಟೇಬಲ್ ಹುದ್ದೆಗಳಲ್ಲಿ 76 ರೇಲ್ವೆ ಘಟಕದ ಹುದ್ದೆಗಳ ನೇಮಕಾತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಈ ನೇಮಕಾತಿ ಕುರಿತಂತೆ ಮೇ 21 ರ ಕರ್ನಾಟಕ ರಾಜ್ಯ ಪತ್ರದಲ್ಲಿ ಈಗಾಗಲೇ ವಿವರಗಳನ್ನು ಪ್ರಕಟಿಸಲಾಗಿದೆ. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲು ಜೂನ್ 25 ಕೊನೆಯ ದಿನಾಂಕವಾಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವಯೋಮಿತಿ, ವಿದ್ಯಾರ್ಹತೆ ಹಾಗೂ ಇನ್ನಿತರ ವಿವರಗಳಿಗಾಗಿ ಇಲಾಖಾ ವೆಬ್ಸೈಟ್ : http://recruitment.ksp.gov.in ವೀಕ್ಷಿಸಬಹುದಾಗಿದೆ. ಅಲ್ಲದೆ, ಪೊಲೀಸ್ ನೇಮಕಾತಿ ಪ್ರಾಧಿಕಾರದ ಸ್ಥಿರ ದೂರವಾಣಿ ಸಂಖ್ಯೆ : 080 – 2294 3396 ಸಂಪರ್ಕಿಸಬಹುದಾಗಿದೆ ಎಂದು ರೇಲ್ವೆ ಪೊಲೀಸ್ ಅಧೀಕ್ಷಕರಾದ ಡಿ ಆರ್ ಸಿರಿಗೌರಿ ಅವರು ತಿಳಿಸಿದ್ದಾರೆ.