• ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ
• ಬೆಂಗಳೂರಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಚಾಲನೆ
• ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿ ರೈತರಿಗೆ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮ
• ರಾಜ್ಯದ 30 ಜಿಲ್ಲೆಗಳಿಗೂ ಪ್ರವಾಸ, ರೈತರಲ್ಲಿ ಜಾಗೃತಿ; ಸಚಿವರಾದ ಸೋಮಶೇಖರ್
• ಎಪಿಎಂಸಿ ಮುಚ್ಚುವ ಪ್ರಶ್ನೆಯೇ ಇಲ್ಲವೆಂದ ಸಹಕಾರ ಸಚಿವರು
ಬೆಂಗಳೂರು: ಭಾರತ ರತ್ನ, ಮಾಜಿ ಪ್ರಧಾನಿಗಳಾದ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಕಿಸಾನ್ ಸಮ್ಮಾನ್ ದಿನಾಚರಣೆಯನ್ನು ದೇಶಾದ್ಯಂತ ಹಮ್ಮಿಕೊಳ್ಳಲಿದ್ದು, ದೆಹಲಿಯಲ್ಲಿ ಪ್ರಧಾನಮಂತ್ರಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ರಾಜ್ಯದಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಅವರು ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಮುಖ್ಯಮಂತ್ರಿಗಳು ಎಪಿಎಂಸಿ ಇಲ್ಲವೇ ಸಹಕಾರ ಇಲಾಖೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಲ್ಲದೆ, ಪ್ರಧಾನ ಮಂತ್ರಿಗಳ ಭಾಷಣವನ್ನು ಎಲ್ಲ ರೈತರು ವೀಕ್ಷಿಸಲು ಅನುಕೂಲವಾಗಲು ರಾಜ್ಯದ ಎಪಿಎಂಸಿಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಕಾಯ್ದೆ ಅರಿವಿಗಾಗಿ 30 ಜಿಲ್ಲೆಗಳಿಗೂ ಪ್ರವಾಸ
ಜನವರಿ ಮೊದಲ ವಾರದಲ್ಲಿ ಎಪಿಎಂಸಿಯಿಂದ ಆಗುವ ಅನುಕೂಲಗಳ ಬಗ್ಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಚಾಲನೆ ನೀಡಲಾಗುವುದು. ಬಳಿಕ 30 ಜಿಲ್ಲೆಗಳಲ್ಲೂ ಸಹ ಕಾರ್ಯಕ್ರಮ ಮಾಡಿ ರೈತರಿಗೆ ಎಪಿಎಂಸಿ ಕಾಯ್ದೆಯ ತಿದ್ದುಪಡಿಯಿಂದಾಗುವ ಅನುಕೂಲ ಹಾಗೂ ಎಂಎಸ್ ಪಿ ಅಂದರೇನು ಎಂಬಿತ್ಯಾದಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ರಾಜ್ಯದ 162 ಎಪಿಎಂಸಿಗಳಿಗೂ ಭೇಟಿ ನೀಡಿ ಕಾಯ್ದೆಯ ತಿದ್ದುಪಡಿ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಸಚಿವರು ಹೇಳಿದರು.
ಖುದ್ದು ಭೇಟಿ, ಉಸ್ತುವಾರಿ ಸಚಿವರ ಸಾಥ್
ಹುಬ್ಬಳ್ಳಿ-ಧಾರವಾಡ, ರಾಯಚೂರು, ಕೊಪ್ಪಳ ಸೇರಿದಂತೆ ಎಲ್ಲೆಲ್ಲಿ ಎಪಿಎಂಸಿ ದೊಡ್ಡ ಪ್ರಮಾಣದಲ್ಲಿದೆಯೋ ಅಲ್ಲಿಗೆ ಮೊದಲು ಭೇಟಿ ಕೊಟ್ಟು ನಂತರ ಉಳಿದ ಜಿಲ್ಲೆಗಳಿಗೂ ನಾನು ಭೇಟಿ ಕೊಟ್ಟು ತಿಳಿವಳಿಕೆ ಮೂಡಿಸುತ್ತೇವೆ. ಅಲ್ಲದೆ, ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.
ಎಪಿಎಂಸಿ ಮುಚ್ಚುವ ಪ್ರಶ್ನೆಯೇ ಇಲ್ಲ
ಬ್ಯಾಡಗಿ ಮೆಣಸಿನಕಾಯಿ ಇಡೀ ವಿಶ್ವಕ್ಕೆ ಹೋಗುತ್ತಿದೆ. ಇದೇ ರೀತಿ ಹಲವು ಎಪಿಎಂಸಿಗಳಿಂದ ಉತ್ಪನ್ನಗಳು ರಫ್ತಾಗುತ್ತಿದೆ. ಹೀಗಾಗಿ ಎಪಿಎಂಸಿ ಮುಚ್ಚುವ ಪ್ರಶ್ನೆ ಇಲ್ಲ. ಕೆಲವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಹಾಗಂತ ಈಗಿರುವ ವ್ಯವಸ್ಥೆಯನ್ನು ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ ಎಂದು ಸಚಿವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
52.50 ಲಕ್ಷ ರೈತರಿಗೆ 6 ಕಂತಿನಲ್ಲಿ 10 ಸಾವಿರ ರೂ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ತಲಾ 2 ಸಾವಿರದಂತೆ ಮೂರು ಕಂತುಗಳಲ್ಲಿ ಒಟ್ಟು 6 ಸಾವಿರ ರೂಪಾಯಿಗಳನ್ನು ವಿತರಣೆ ಮಾಡಲಾಗಿದ್ದರೆ, ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು 4 ಸಾವಿರ ರೂ.ಗಳಂತೆ ರೈತರಿಗೆ ಒಟ್ಟಾರೆಯಾಗಿ 10 ಸಾವಿರ ರೂಪಾಯಿಯನ್ನು ಜಮೆ ಮಾಡಲಾಗುವುದು. ಇದರಿಂದ 52 ಲಕ್ಷದ 50 ಸಾವಿರ ರೈತರ ಖಾತೆಗೆ ಜಮೆಯಾದಂತಾಗಿದೆ ಎಂದು ಸಚಿವರು ತಿಳಿಸಿದರು.
25ರಂದು ರೈತರ ಖಾತೆಗೆ 18 ಸಾವಿರ ಕೋಟಿ ರೂ. ಜಮೆ
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು ಅವರು ಮಾತನಾಡಿ, ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಅಂಗವಾಗಿ ಅಟಲ್ ಜೀ ಸ್ಮರಣೆ ಮತ್ತು ಕಿಸಾನ್ ಸಮ್ಮಾನ್ ದಿನಾಚರಣೆಯನ್ನು ಡಿ. 25ರಂದು ನಾವು ದೇಶಾದ್ಯಂತ ಹಮ್ಮಿಕೊಳ್ಳುತ್ತಿದ್ದೇವೆ. ಅಂದು ಮಧ್ಯಾಹ್ನ 12 ಗಂಟೆಗೆ ಜನತೆಯನ್ನುದ್ದೇಶಿಸಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ. ಅಂದು ರೈತರ ಖಾತೆಗೆ ನೇರವಾಗಿ 18 ಸಾವಿರ ಕೋಟಿ ರೂಪಾಯಿಯನ್ನು ಜಮೆ ಮಾಡಿ ಪ್ರಧಾನಿಗಳು ಕಾರ್ಯಕ್ರಮಕ್ಕೆ ಚಾಲನೆ ಕೊಡಲಿದ್ದಾರೆ ಎಂದು ತಿಳಿಸಿದರು.
ಇದರ ಜೊತೆಗೆ ಅಂದು ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಲ್ಲದೆ, ಎಲ್ಲ ಜಿಲ್ಲೆ/ಮಂಡಲ ಹಾಗೂ ಶಕ್ತಿಕೇಂದ್ರಗಳಲ್ಲಿ ಬಿಜೆಪಿಯ ಎಲ್ಲ ಪದಾಧಿಕಾರಿಗಳು ಸ್ಥಳೀಯ ರೈತರನ್ನು ಆಹ್ವಾನಿಸಿ ಪ್ರಧಾನ ಮಂತ್ರಿಗಳ ಭಾಷಣದ ನೇರಪ್ರಸಾರವನ್ನು ವೀಕ್ಷಿಸಲು ಅನುಕೂಲ ಮಾಡಿಕೊಡಲಿದ್ದಾರೆ ಎಂದು ತಿಳಿಸಿದರು.
ಇನ್ನಿತರ ಪ್ರಮುಖ ಅಂಶಗಳು :
ಅಟಲ್ಜೀ ಸ್ಮರಣೆ ಮತ್ತು ಕಿಸಾನ್ ಸಮ್ಮಾನ್ ದಿನಾಚರಣೆ ಬಗ್ಗೆ
ದಿನಾಂಕ: 25.12.2020 ರಂದು ಭಾರತ ರತ್ನ ಸನ್ಮಾನ್ಯ ಮಾಜಿ ಪ್ರಧಾನ ಮಂತ್ರಿಗಳಾದ ದಿ:ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ರಾಜ್ಯಾದ್ಯಂತ ಅಟಲ್ ಜೀ ಸ್ಮರಣೆ
ಮತ್ತು ಕಿಸಾನ್ ಸಮ್ಮಾನ್ ದಿನಾಚರಣೆ ಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ವಿಶ್ವದ ಜನಪ್ರಿಯ ನಾಯಕರು, ರೈತರ ಮತ್ತು ಬಡವರ ಕಲ್ಯಾಣಕ್ಕಾಗಿ ತಮ್ಮನ್ನು
ಮುಡಿಪಾಗಿಸಿಕೊಂಡಿರುವ ನಮ್ಮ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ದೇಶದ 9 ಕೋಟಿ ರೈತ ಬಂಧು-ಭಗಿನಿಯರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ
ಯೋಜನೆ ಅಡಿಯಲ್ಲಿ ರೂ.18,000 ಕೋಟಿಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ಮಧ್ಯಾಹ್ನ 12-00 ಗಂಟೆಗೆ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ
ಕಾರ್ಯಕ್ರಮ ಎಲ್ಲಾ ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರವಾಗಲಿದ್ದು, ಕೆಳಕಂಡ ಕಾರ್ಯಕ್ರಮಗಳನ್ನು ಭಾರತೀಯ ಜನತಾ ಪಾರ್ಟಿ
ಹಮ್ಮಿಕೊಂಡಿದೆ.
1.ಅಟಲ್ ಜೀ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ, ನುಡಿ-ನಮನ ಸಲ್ಲಿಕೆ.
2. ಎಲ್ಲಾ ಜಿಲ್ಲೆ/ಮಂಡಲ ಹಾಗೂ ಶಕ್ತಿ ಕೇಂದ್ರಗಳಲ್ಲಿ ಬಿಜೆಪಿಯ ಎಲ್ಲಾ
ಪದಾಧಿಕಾರಿಗಳು ಸ್ಥಳೀಯ ರೈತರನ್ನು ಆಹ್ವಾನಿಸಿ ಪ್ರಧಾನ ಮಂತ್ರಿಗಳ ಭಾಷಣದ ನೇರ
ಪ್ರಸಾರವನ್ನು ಅವರೊಂದಿಗೆ ವೀಕ್ಷಣೆ.
3. ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮ.
4. ಎಪಿಎಂಸಿ ಮತ್ತು ಸಹಕಾರಿ ಸಂಘ- ಸಂಸ್ಥೆಗಳಲ್ಲಿಯೂ ಕಾರ್ಯಕ್ರಮ ಆಯೋಜನೆ.
5. ಪ್ರಧಾನ ಮಂತ್ರಿಗಳ ಭಾಷಣದ ಒಂದು ಗಂಟೆ ಮುಂಚಿತವಾಗಿ ಚುನಾಯಿತ ಪ್ರತಿನಿಧಿಗಳು
ಹಾಗೂ ಪದಾಧಿಕಾರಿಗಳು ರೈತ ಸಭೆಗಳನ್ನು ಆಯೋಜಿಸಿ ಕೇಂದ್ರ ಸರ್ಕಾರ ಕೃಷಿ
ಕಲ್ಯಾಣಕ್ಕಾಗಿ ಹಾಗೂ ರೈತರ ಆರ್ಥಿಕ ಸಬಲೀಕರಣಕ್ಕಾಗಿ ತೆಗೆದುಕೊಂಡಿರುವ ಕೆಳಕಂಡ ಅನೇಕ
ಕೃಷಿ ಸುಧಾರಣಾ ನೀತಿಗಳು ಹಾಗೂ ರೈತಪರ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.
ಬೇವು ಲೇಪಿತ ಯೂರಿಯಾ – ಇದರಿಂದಾಗಿ ಯೂರಿಯಾ ಗೊಬ್ಬರದ ಕೊರತೆ ನೀಗಿದ್ದು ಗೊಬ್ಬರದ
ದುರುಪಯೋಗ ಸಂಪೂರ್ಣವಾಗಿ ನಿಂತಿದೆ.
ಬೀಜ್-ಸೆ-ಬಜಾರ್ ತಕ್- ಬಿತ್ತನೆ ಬೀಜದಿಂದ ಮಾರುಕಟ್ಟೆವರೆಗೆ ಎನ್ನುವ ಕೃಷಿ ಸುಧಾರಣೆಯ
ಘೋಷಣೆಯ ಜೊತೆಗೆ ರೈತರ ಇಳುವರಿಗೆ ಉತ್ತಮ ದರ ನಿಗಧಿಪಡಿಸಿ 2022ರ ವೇಳೆಗೆ ರೈತರ ಆದಾಯ
ದ್ವಿಗುಣಗೊಳಿಸುವ ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದೆ.
ಕಿಸಾನ್ ಕಾರ್ಡ್ಗಳ ವಿತರಣೆ ಮೂಲಕ ರೈತರಿಗೆ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ವಿಸ್ತರಣೆ.
ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ- ಈಗಾಗಲೇ 6 ಬೃಹತ್ ರಸಗೊಬ್ಬರ ಉತ್ಪಾದನಾ
ಘಟಕಗಳಿಗೆ ರೂ.48,000 ಕೋಟಿ ಬಂಡವಾಳ ಹೂಡಲಾಗಿದೆ.
ಮಣ್ಣಿನ ಫಲವತ್ತತೆ ಕಾರ್ಡ್ ವಿತರಣೆ- ಮಣ್ಣಿನ ಫಲವತ್ತತೆ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ.
ಅಟಲ್ ಪೆನ್ಷನ್ ಯೋಜನೆ
ಪ್ರಧಾನಮಂತ್ರಿ ಫಸಲ್ಭೀಮಾ ಯೋಜನೆ
ನೀರಿನ ಲಭ್ಯತೆಗೆ ಅನುಗುಣವಾಗಿ ಪ್ರತಿಬಿಂದು ನೀರಿನಿಂದ ಹೆಚ್ಚು ಬೆಳೆ ತೆಗೆಯುವ ಯೋಜನೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ರೈತರ ಖಾತೆಗೆ ತಲಾ ರೂ.2000 ದಂತೆ 3 ಬಾರಿ ಒಟ್ಟು ಪ್ರತಿ ವರ್ಷ ರೂ.6000 ಗಳನ್ನು ರೈತರ ಖಾತೆಗೆ ನೇರ ಜಮೆ.
ಇದರೊಂದಿಗೆ ನಮ್ಮ ಹೆಮ್ಮೆಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಇದಕ್ಕೆ ರೂ.4000 ಗಳನ್ನು ಸೇರಿಸಿ ಡಿಬಿಟಿ ಮೂಲಕ ರೈತರ ಖಾತೆಗೆ ನೇರವಾಗಿ
ನೀಡಲಾಗಿದೆ.
ಇ-ಮಾರುಕಟ್ಟೆ ಸ್ಥಾಪನೆಯ ಮೂಲಕ ದೇಶಾದ್ಯಂತ ರೈತರನ್ನು ಮಾರುಕಟ್ಟೆಗೆ ಜೋಡಿಸಲಾಗಿದೆ.
ರೈತರ ಪಂಪ್ ಸೆಟ್ಗಳಿಗೆ ಸೋಲಾರ್ ವಿದ್ಯುತ್ ಜೋಡಣೆ. 18 ಸಾವಿರ ಹಳ್ಳಿಗಳು ಸ್ವತಂತ್ರ್ಯ ಬಂದ ನಂತರವೂ ವಿದ್ಯುತ್ ಸಂಪರ್ಕವನ್ನು
ಪಡೆದಿರಲಿಲ್ಲ. ಈ ಸಮಸ್ಯೆ ಪರಿಹರಿಸಲಾಗಿದೆ.
ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ರೂ.1.00ಲಕ್ಷ ಕೋಟಿ ಮೊತ್ತವನ್ನು ಕೃಷಿ ಕ್ಷೇತ್ರದ ಮೂಲಭೂತ ಸೌಕರ್ಯದ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ.
ರೂ.30 ಸಾವಿರ ಕೋಟಿಗಳ ಹೆಚ್ಚುವರಿ ಕಾರ್ಯಸಾಧ್ಯತಾ ಬಂಡವಾಳದಲ್ಲಿ ರೈತರಿಗೆ ಅನುದಾನ ದಿನಾಂಕ:04.12.2020ರ ವರೆಗೆ ನಬಾರ್ಡ್ ನಿಂದ ರೂ.25 ಸಾವಿರ ಕೋಟಿಗಳನ್ನು
ವಿತರಿಸಲಾಗಿದೆ.
ಇತ್ತೀಚಿಗೆ ಕಬ್ಬು ಬೆಳೆಯುವ ರೈತರ ಹಿತಕ್ಕಾಗಿ ರೂ.3.500 ಕೋಟಿ ಮೊತ್ತ ಸಬ್ಸಿಡಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ 5 ಕೋಟಿ ಕಬ್ಬು ಬೆಳೆಗಾರರಿಗೆ
ಲಾಭವಾಗಲಿದ್ದು ಸಬ್ಸಿಡಿ ಹಣ ನೇರವಾಗಿ ಅವರ ಖಾತೆಗೆ ಜಮೆ ಆಗಲಿದೆ.
ಪಶುಸಂಗೋಪನಾ ಮೂಲ ಸೌಕರ್ಯ ನಿಧಿ ಯೋಜನೆಯಡಿಯಲ್ಲಿ ರೂ.15,000 ಕೋಟಿ ಅನುದಾನ ನೀಡಲಾಗಿದೆ.
ಈ ಎಲ್ಲಾ ಪ್ರಯತ್ನಗಳಿಂದಾಗಿ 2014 ರಲ್ಲಿ 250 ಮಿಲಿಯನ್ ಟನ್ನಷ್ಟಿದ್ದ ಆಹಾರ ಧಾನ್ಯಗಳ ಉತ್ಪಾದನೆ 2020ರ ವೇಳೆಗೆ ದಾಖಲೆ ಮಟ್ಟದ 291ಮಿಲಿಯನ್ ಟನ್ಗೆ
ಏರಿಕೆಯಾಗಿದೆ. ಇಳುವರಿ ಹೆಚ್ಚಳದಿಂದ ಸುಮಾರು ಶೇಕಡಾ 20 ರಿಂದ 30ರಷ್ಟು ಆದಾಯ ಹೆಚ್ಚಲು ಸಾಧ್ಯವಾಗಿದೆ.
2014ರ ತನಕ ಮತ್ತು ನಂತರದಲ್ಲಿ ಕೃಷಿ ಕೇತ್ರದಲ್ಲಿ ಆದ ಪ್ರಮುಖ ಬದಲಾವಣೆಗಳು :
ಎಣ್ಣೆಕಾಳುಗಳ ಎಂಎಸ್ಪಿಯಲ್ಲಿ 59% ಹೆಚ್ಚಳ
ಧಾನ್ಯಗಳ ಎಂಎಸ್ಪಿಯಲ್ಲಿ 54% ಹೆಚ್ಚಳ
ಒರಟು ಧಾನ್ಯಗಳ ಎಂಎಸ್ಪಿಯಲ್ಲಿ 73% ಹೆಚ್ಚಳ
ಕೊಬ್ಬರಿ ಎಂಎಸ್ಪಿಯಲ್ಲಿ 89% ಹೆಚ್ಚಳ
ಹತ್ತಿಯ ಎಂಎಸ್ಪಿಯಲ್ಲಿ 47% ಹೆಚ್ಚಳ
ಭತ್ತ ಮತ್ತು ಗೋಧಿ ಎಂಎಸ್ಪಿಯಲ್ಲಿ ಹೆಚ್ಚಳ
2014ರ ಹಿಂದಿನ ಸರ್ಕಾರದ ಅವಧಿಯಲ್ಲಿ ಸುಮಾರು 4.25ಲಕ್ಷ ಮೆಟ್ರಿಕ್ ಟನ್ ಎಣ್ಣೆ
ಕಾಳುಗಳನ್ನು ಖರೀದಿಸಿತ್ತು, ಮೋದಿಜೀ ಸರ್ಕಾರ 56 ಲಕ್ಷ ಮೆಟ್ರಿಕ್ ಟನ್ ಎಣ್ಣೆ
ಕಾಳುಗಳನ್ನು ಎಂಎಸ್ಪಿಯಲ್ಲಿ ಖರೀದಿಸಿದೆ.
2014ರ ಹಿಂದಿನ ಸರ್ಕಾರದ ಅವಧಿಯಲ್ಲಿ 1700 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು
ರೈತರಿಂದ ಖರೀದಿಸಿತ್ತು, ಮೋದಿಜೀ ಸರ್ಕಾರ 3000 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು
ಎಂಎಸ್ಪಿಯಲ್ಲಿ ಖರೀದಿಸಿದೆ.
2014ರ ಹಿಂದಿನ ಸರ್ಕಾರದ ಅವಧಿಯಲ್ಲಿ ರೈತರ ಭತ್ತ ಮತ್ತು ಗೋಧಿಯ ಎಂಎಸ್ಪಿ ಖರೀದಿಗೆ ಕೇವಲ ರೂ.3,74,000 ಕೋಟಿಯನ್ನು ನೀಡಿದ್ದರು. ಮೋದಿಜೀ ಸರ್ಕಾರ ಒಂದೇ ವರ್ಷದಲ್ಲಿ
ಗೋಧಿ ಮತ್ತು ಭತ್ತವನ್ನು ಖರೀದಿಸುವ ಮೂಲಕ ರೂ.8,00,000 ಕೋಟಿಗಳನ್ನು ರೈತರಿಗೆ ನೀಡಿದೆ.
2014ರ ಹಿಂದಿನ ಸರ್ಕಾರದ ಅವಧಿಯಲ್ಲಿ ಕೇವಲ 1.5 ಲಕ್ಷ ಮೆಟ್ರಿಕ್ ಟನ್ ದ್ವಿದಳ ಧಾನ್ಯಗಳನ್ನು ರೈತರಿಂದ ಖರೀದಿಸಿದೆ. ಮೋದಿಜೀ ಸರ್ಕಾರ 112 ಲಕ್ಷ ಮೆಟ್ರಿಕ್ ಟನ್
ದ್ವಿದಳ ಧಾನ್ಯಗಳನ್ನು ರೈತರಿಂದ ಖರೀದಿಸಿದೆ.
2014ರ ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರತಿ ಕ್ವಿಂಟಾಲ್ ಗೋಧಿಯ ಎಂಎಸ್ಪಿ ರೂ.1400
ಆಗಿದ್ದು ಮೋದಿಜೀ ಸರ್ಕಾರ ಪ್ರತಿ ಕ್ವಿಂಟಾಲ್ ಗೋಧಿಗೆ ರೂ.1975 ಎಂಎಸ್ಪಿ
ನೀಡುತ್ತಿದೆ.
2014ರ ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರತಿ ಕ್ವಿಂಟಾಲ್ ಜೋಳದ ಎಂಎಸ್ಪಿ ರೂ.1520
ಆಗಿದ್ದು, ಮೋದಿಜೀ ಸರ್ಕಾರ ಪ್ರತಿ ಕ್ವಿಂಟಾಲ್ ಜೋಳಕ್ಕೆ ರೂ.2640 ಎಂಎಸ್ಪಿ
ನೀಡುತ್ತಿದೆ
2014ರ ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರತಿ ಕ್ವಿಂಟಾಲ್ ಹೆಸರುಕಾಳಿನ ಮೇಲೆ
ಎಂಎಸ್ಪಿ ರೂ.4,500 ಆಗಿದ್ದು, ಮೋದಿಜೀ ಸರ್ಕಾರ ಪ್ರತಿ ಕ್ವಿಂಟಾಲ್ ಹೆಸರುಕಾಳಿಗೆ
ರೂ.7,200 ಎಂಎಸ್ಪಿ ನೀಡುತ್ತಿದೆ.
2014ರ ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರತಿ ಕ್ವಿಂಟಾಲ್ ಭತ್ತದ ಎಂಎಸ್ಪಿ ರೂ.1310
ಆಗಿದ್ದು, ಮೋದಿಜೀ ಸರ್ಕಾರ ಪ್ರತಿ ಕ್ವಿಂಟಾಲ್ ಭತ್ತಕ್ಕೆ ರೂ.1870 ಎಂಎಸ್ಪಿ
ನೀಡುತ್ತಿದೆ.
2014ರ ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರತಿ ಕ್ವಿಂಟಾಲ್ ತೊಗರಿ ಎಂಎಸ್ಪಿ ರೂ.4300
ಆಗಿದ್ದು, ಮೋದಿಜೀ ಸರ್ಕಾರ ಪ್ರತಿ ಕ್ವಿಂಟಾಲ್ ತೊಗರಿಗೆ ರೂ.6,000 ಎಂಎಸ್ಪಿ
ನೀಡುತ್ತಿದೆ.
2014ರ ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರತಿ ಕ್ವಿಂಟಾಲ್ ಕಡಲೆಕಾಳಿನ ಮೇಲೆ ಎಂಎಸ್ಪಿ
ರೂ.3100 ಆಗಿದ್ದು, ಮೋದಿಜೀ ಸರ್ಕಾರ ಪ್ರತಿ ಕ್ವಿಂಟಾಲ್ ಕಡಲೆಕಾಳಿಗೆ ರೂ.5100
ಎಂಎಸ್ಪಿ ನೀಡುತ್ತಿದೆ.