ಕೇಂದ್ರ ಸರ್ಕಾರ ಈ ಸಾಲಿನ ಬಜೆಟ್ ನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ವಿಪರೀತವಾಗಿ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಹಾಗು ಕರ್ನಾಟಕದ ಅಭಿವೃದ್ಧಿಗೆ ಯಾವುದೇ ರೀತಿಯ ಹೆಚ್ಚಿನ ಅನುದಾನವನ್ನು ನೀಡದೆ ಇರುವುದನ್ನು ವಿರೋಧಿಸಿ
” ಬೈಕ್ ಗಳಿಗೆ ಶ್ರದ್ಧಾಂಜಲಿ – ಮತ್ತೆ ಮರಳಿ ಬೈಸಿಕಲ್ ” ಎಂದು ಕರ್ನಾಟಕ ಸೇನಾ ಪಡೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಣುಕು ಪ್ರತಿಭಟನೆ ನಡೆಸಲಾಯಿತು .
ಈ ಕೊರೊನಾದಿಂದ ದೇಶದ ಜನರ ಆದಾಯ ಕುಸಿದು, ಜನ ಜೀವನ ನಡೆಸುವುದೇ ಕಷ್ಟಕರವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ, ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆಯನ್ನು ವಿಪರೀತ ಏರಿಕೆ ಮಾಡಿ ಜನಸಾಮಾನ್ಯರಿಗೆ ಶಾಕ್ ನೀಡಿದೆ. ದೇಶದ ಜನರು ಮೋದಿಯವರ ಮೇಲಿಟ್ಟಿದ್ದ ಅಪಾರವಾದ ನಂಬಿಕೆಯನ್ನು ಮೋದಿ ಹುಸಿಯಾಗಿಸಿ, ಸಾಮಾನ್ಯ ಜನರಿಗೆ ಪೆಟ್ಟಿನ ಮೇಲೆ ಪೆಟ್ಟು ಕೊಡುತ್ತಿದ್ದಾರೆ. ಈ ಸಾಲಿನ ಬಜೆಟ್ ನಲ್ಲಿ ದೇಶದ ಆರ್ಥಿಕತೆಯನ್ನು ಸರಿದೂಗಿಸಲು ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವುದು ನಿಜಕ್ಕೂ ಖಂಡನೀಯ. ಈ ಬಜೆಟ್ ನಲ್ಲಿ ಕರ್ನಾಟಕಕ್ಕೆ ಯಾವುದೇ ವಿಶೇಷ ಒತ್ತು ನೀಡಿಲ್ಲ. ರಾಜ್ಯದ ಅಭಿವೃದ್ಧಿಗೆ ಪೂರಕವಾದ ಯಾವುದೇ ಘೋಷಣೆಯೂ ಇಲ್ಲ.
ಈ ರೀತಿ ಕೇಂದ್ರ ಸರ್ಕಾರ ಪದೇ ಪದೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮುಂದುವರಿಸಿದರೆ ರೈತರು & ಸಾಮಾನ್ಯ ಜನರು ತಮ್ಮ ಬೈಕ್ ಗಳನ್ನು ಸುಟ್ಟು ಹಾಕಿ- ಶ್ರದ್ಧಾಂಜಲಿ ಮಾಡಿ, ಮತ್ತೆ ಸೈಕಲ್ ಗಳನ್ನು ಬಳಸಬೇಕಾಗುತ್ತದೆ.
ಒಂದೇ ದೇಶ – ಒಂದೇ ತೆರಿಗೆ ಎಂದು ಹೇಳುತ್ತಿರುವ ಮಾನ್ಯ ಪ್ರಧಾನ ಮಂತ್ರಿಗಳು ಸರ್ಕಾರ ಕ್ಕೆ ಆದಾಯ ಬರುವ ಎಲ್ಲಾ ವಸ್ತುಗಳನ್ನು ಜಿ. ಎಸ್. ಟಿ ವ್ಯಾಪ್ತಿ ಗೆ ತಂದು, ದೇಶದ ಜನರಿಗೆ ಅನುಕೂಲವಾಗುವ ಪೆಟ್ರೋಲ್, ಡೀಸೆಲ್ ಅನ್ನು ಜಿ. ಎಸ್. ಟಿ ವ್ಯಾಪ್ತಿ ಗೆ ತರದಿರುವುದು ಯಾವ ನ್ಯಾಯ?.
ಕೇಂದ್ರದ ಬಿ ಜೆ ಪಿ ಸರ್ಕಾರ ( ಮಾತೆತ್ತಿದರೆ ಅಚ್ಚೇ ದಿನಗಳು ಬರುತ್ತವೆ ಎಂದು ಹೇಳಿ ) ಅಧಿಕಾರಕ್ಕೆ ಬಂದಾಗಿನಿಂದಲೂ ಅತಿ ಅಗತ್ಯ ವಸ್ತುಗಳ ಬೆಲೆಗಳ ಏರಿಕೆ, ನೋಟ್ ಬ್ಯಾನ್, ರೇರಾ ಕಾಯ್ದೆ ಇನ್ನಿತರ ಜನ ವಿರೋಧಿ ನೀತಿಗಳನ್ನು ಜಾರಿಗೆ ತಂದು, ಯಾವೊಬ್ಬ ಸಾಮಾನ್ಯರಿಗೂ, ಇದುವರೆಗೆ ಅಚ್ಚೇ ದಿನಗಳು ಬಂದಿಲ್ಲ. ಈಗ ದೇಶದ ನಾಗರೀಕರು, ವಿರೋಧ ಪಕ್ಷದವರು, ಎಲ್ಲಾ ಜನಪ್ರತಿನಿಧಿಗಳು ಒಂದಾಗಿ ಕೇಂದ್ರ ಸರ್ಕಾರ ವನ್ನು ಪ್ರಶ್ನಿಸಬೇಕು, ಕಡ್ಡಾಯವಾಗಿ ಪೆಟ್ರೋಲ್ ಡೀಸೆಲ್ ನ್ನು ಜಿ. ಎಸ್. ಟಿ ವ್ಯಾಪ್ತಿ ಗೆ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು. ಕೇಂದ್ರ ಪೆಟ್ರೋಲ್ ಡೀಸೆಲ್ ನ್ನು ಜಿ ಎಸ್ ಟಿ ವ್ಯಾಪ್ತಿ ಗೆ ತಂದರೆ ನಿಜವಾದ ಅಚ್ಚೇ ದಿನಗಳು ಜನಸಾಮಾನ್ಯರಿಗೆ ಬರುತ್ತದೆ, ಎಂದು ಮಾನ್ಯ ಪ್ರಧಾನ ಮಂತ್ರಿಗಳಿಗೆ ಪೆಟ್ರೋಲ್ ಡೀಸೆಲ್ ನ್ನು ಈ ಕೂಡಲೇ ಜಿ. ಎಸ್. ಟಿ ವ್ಯಾಪ್ತಿ ಗೆ ತರಬೇಕೆಂದು ಒತ್ತಾಯಿಸಿ ಮನವಿಯನ್ನು ಸಲ್ಲಿಸುತ್ತಿದ್ದೇವೆ.
ಪ್ರತಿಭಟನೆ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿ, ಪ್ರಜೀಶ್ ಪಿ, ಪಡುವಾರಳ್ಳಿ ರಾಮಕೃಷ್ಣ, ಎಳನೀರು ರಾಮಣ್ಣ, ಸುಬ್ಬೇಗೌಡ, ರಾಜು-ಜನಪರವೇದಿಕೆ ಅಧ್ಯಕ್ಷ, ಡಾ. ಪುಷ್ಪಾ ಶಂಭುಕುಮಾರ್, ವಿಜಯೇಂದ್ರ, ಕುಮಾರ್ ಗೌಡ, ಅನಿಲ್, ಶಾಂತಮೂರ್ತಿ, ಡಾ.ಮೊಗಣ್ಣಾಚಾರ್, ಸ್ವಾಮಿ, ನಂದಕುಮಾರ್, ಮಿನಿ ಬಂಗಾರಪ್ಪ, ರಾಧಾಕೃಷ್ಣ, ದರ್ಶನ್ ಗೌಡ, ನಂಜುಂಡಸ್ವಾಮಿ, ವಿನೋದ, ಜಗದೀಶ್ ಪಿ, ಗೊರೂರುಮಲ್ಲೇಶ್, ಸುಂದರಪ್ಪ, ಸೋಮಶೇಖರ್, ಭರತ್ ಡೀನ್, ರಘುರಾಂ ಎಂ, ಮನುನಾಯಕ್, ಪೈ. ಚೇತನ್ ಚಿರತೆ, ಗುರುಮಲ್ಲಪ್ಪ ಕೆ ಸಿ, ಬಸವರಾಜು, ದೂರ ಸುರೇಶ್, ವಿಜಯದೇವರಾಜೇಆರಸ್, ಕೃಷ್ಣ, ಕಲೀಂ ಇನ್ನೂ ಇತರರು ಉಪಸ್ಥಿತರಿದ್ದರು.