ಗರದ ರತ್ನೇಶ್ವರಿ ಹೋಟೆಲ್ ಸಭಾಂಗಣದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ಸಿ.ಎನ್. ,ಮಂಜೇಗೌಡ ಅವರ ಪರ ನಡೆದ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ನಾವು ಅಧಿಕಾರಕ್ಕೆ ಬಂದರೆ ಅನುದಾನದÀ ಹೊಳೆಯನ್ನೇ ಹರಿಸಿಬಿಡುತ್ತೇವೆ ಎಂದ ಬಿಜೆಪಿಸರಕಾರ, ಆಶ್ರಯ ಯೋಜನೆಯಡಿ ಮಂಜೂರಾದ ಒಂದು ಲಕ್ಷ ಆಶ್ರಯ ಮನೆಗಳಿಗೆ ಬಿಲ್ ಪಾವತಿಯಾಗಿಲ್ಲ ಸೀಮೆಎಣ್ಣೆ ವಿತರಿಸಲೂ ದುಡ್ಡೆ ಇಲ್ಲ.ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ನಲ್ಲಿ ಎಚ್.ಡಿ.ಕುಮಾರಸ್ವಾಮಿ ೨ ಬಾರಿ ಮುಖ್ಯಮಂತ್ರಿಯಾಗಿ ಇಡೀ ದೇಶದಲ್ಲಿ ಯಾವುದೇ ಮುಖ್ಯಮಂತ್ರಿ ಮಾಡದ ೨೫ ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದ್ದಾರೆ ಎಂದರು.


ಮಾತ್ತೆತ್ತಿದರೆ ಜೆಡಿಎಸ್ ಅಪ್ಪ ಮಕ್ಕಳ ಪಕ್ಷ ಅಂತ ಕಾಂಗ್ರೆಸ್ ಹಗುರಹೇಳಿಕೆ ನೀಡುತ್ತಿದೆ, ನಿಮ್ಮದು ಯಾವ ಪಕ್ಷ ? ನಿಮ್ಮ ಕಾಂಗ್ರೆಸ್ ನಲ್ಲಿ ಅವರ ತಾಯಿಮಗ ಇದ್ದಾರಲ್ಲ. ಅದು ತಾಯಿಮಗನಾ ಪಕ್ಷವೇ ? ಎಂದು ಮಾಜಿಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.ತಳಮಟ್ಟದಿಂದ ರಾಜಕೀಯ ಮಾಡಿಕೊಂಡು ಬಂದಿರುವ ನಮ್ಮ ಪಕ್ಷದ ಅಭ್ಯರ್ಥಿ ಮಂಜೇಗೌಡ ಅವರಿಗೆ ಮೊದಲ ಪ್ರಾಶಸ್ತ್ಯಮತವನ್ನು ನೀಡುವ ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.


ಅಭ್ಯರ್ಥಿ ಸಿ.ಎನ್.ಮಂಜೇಗೌಡ ಮಾತನಾಡಿ, ಪಶ್ಚಿಮಬಂಗಾಳ ರಾಜ್ಯದ ಮಾದರಿಯಲ್ಲಿ ಗ್ರಾಮಪಂಚಾಯಿತಿ ಸದಸ್ಯರಿಗೆ ೮ ಸಾವಿರ ರೂ. ಗೌರವಧನ ಏರಿಸುವುದು ಸೇರಿದಂತೆ ಗ್ರಾಮಪಂಚಾಯಿತಿಗಳಿಗೆ ಕೇಂದ್ರ ಹಾಗೂ ರಾಜ್ಯದಿಂದ ಹೆಚ್ಚಿನ ಅನುದಾನ ಹರಿದುಬರುವಂತೆ ಮಾಡುವುದು ನನ್ನ ಗುರಿಯಾಗಿದೆ. .ಗ್ರಾಮ ಪಂಚಾಯಿತಿ ಹಿತವನ್ನು ಕಾಪಾಡಲು ನನಗೆ ಮೊದಲ ಪ್ರಾಶಸ್ತ್ಯ ಮತವನ್ನು ನೀಡಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.ಜಿಲ್ಲಾಧ್ಯಕ್ಷ ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿದರು.
ಸಭೆಯಲ್ಲಿ ಶಾಸಕರಾದ ಅಶ್ವಿನ್ ಕುಮಾರ್, ಮಾದೇಗೌಡ, ಕೆ.ವಿ.ಮಹದೇವಸ್ವಾಮಿ, ವೀಕ್ಷಕ ಶಫಿ, ಸತ್ಯನಾರಾಯಣ್, ಜೆಡಿಎಸ್ ತಾಲೂಕು ಅಧ್ಯಕ್ಷ ಸೈಯದ್ ಅಕ್ರಂ, ಜಿಲ್ಲಾ ಉಪಾಧ್ಯಕ್ಷ ಮಹೇಶ್ ಗೌಡ, ಹರದನಹಳ್ಳಿ ರಾಮಚಂದ್ರ, ಇಂತಿಯಾಜ್, ಯೂತ್ ಜೆಡಿಎಸ್ ಅಧ್ಯಕ್ಷ ಹಬೀಬ್ ಅಹಮದ್, ಸಿ.ಎಂ.ಕೃಷ್ಣಮೂರ್ತಿ, ಬಂಗಾರು, ಡಿ.ಎನ್.ಉμ ನಾಗಸುಂದ್ರ ಜೂಲಿಯನಾ ವಿಲಿಯಂ, ಇತರರು ಭಾಗವಹಿಸಿದ್ದರು.