ಚಾಮರಾಜನಗರ: ವಿದ್ಯುತ್ ದರವನ್ನು ಏರಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ನಗರದ ಸೆಸ್ಕಾಂ ಕಚೇರಿ ಮುಂಭಾಗ ಕರ್ನಾಟಕ ಸೇನಾ ಪಡೆ ಹಾಗೂ ಕನ್ನಡಪರ ಸಂಘಟನೆಗಳು ಪಂಜು ಹಿಡಿದು ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸೇನಾ ಪಡೆ ರಾಜ್ಯಾಧ್ಯಕ್ಷ ಚಾ.ರಂ,ಶ್ರೀನಿವಾಸಗೌಡ ಈಗಾಗಲೇ ದಿನ ಬಳಕೆ ವಸ್ತುಗಳು ಸೇರಿದಂತೆ ಪೆಟ್ರೋಲ್,ಡೀಸೆಲ್,ಅಡುಗೆ ಅನಿಲ ದರಗಳು ಗಗನಕ್ಕೇರಿದ್ದು ಜನರು ಜೀವನ ನಡೆಸಲು ಹರಸಾಹಸ ಪಡುತ್ತಿದ್ದಾರೆ.ಈ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಪರ ಸಂಘಟನೆಗಳ ಮುಖಂಡರಾದ ಶಾ.ಮುರುಳಿ, ನಿಜಧ್ವನಿ ಗೋವಿಂದರಾಜು,ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ರ.ಕುಮಾರ್,ಮಂಜುನಾಥ್,ಮಹೇಶ್ ಗೌಡ, ಅರುಣ್ ಕುಮಾರ್ ಗೌಡ, ತಾಂಡವಮೂರ್ತಿ, ಪುರುಷೋತ್ತಮ್,ಸುರೇಶ್, ಸಾಗರ್ ರಾವತ್,ವೀರಭದ್ರ, ನಂಜುಂಡಶೆಟ್ಟಿ ಸೇರಿದಂತೆ ಇತರರು ಇದ್ದರು.