ಮೈಸೂರು: ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಿಕೋದ್ಯಮದಲ್ಲಿ ಸಾಧನೆಗೈದ ಪತ್ರಕರ್ತರನ್ನು ಮೈಸೂರು ಯುವ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ನಗರದ ಡಿ.ಸುಬ್ಬಯ್ಯ ರಸ್ತೆಯಲ್ಲಿರುವ ಗ್ರೀನ್ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ರವಿಕುಮಾರ್, ಮಾಜಿ ಪ್ರಧಾನಕಾರ್ಯದರ್ಶಿ ಲೋಕೇಶ್ ಬಾಬು, ಉಪಾಧ್ಯಕ್ಷರಾದ ರಂಗಸ್ವಾಮಿ, ಸಾಧ್ವಿ ಮಹೇಶ್ವರನ್, ಲಕ್ಷ್ಮಿ ನಾರಾಯಣ್ ಯಾದವ್, ಹಂಪಾ ನಾಗರಾಜ್, ರಾಜಕುಮಾರ್ ಭಾವಸಾರ್, ಪವನ್ ಮಳವಳ್ಳಿ, ಕೃಷ್ಣಾಜಿರಾವ್, ರಾಘವೇಂದ್ರ, ನಂದನ್, ಜನಕ್ ಸಿಂಗ್ ಬಾಟಿ, ಮಂಜುಶಂಕರ್, ಶ್ರೀನಿಧಿ, ಮಧುಸೂದನ್, ಉದಯ್, ಹರೀಶ್ ಸಿಂಗ್, ಜಯಶಂಕರ್, ರಾಜ್ ಅರಸ್, ಮಹಾದೇವ ಸ್ವಾಮಿ, ನಿಶಾಂತ್ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ಮಾತನಾಡಿ ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಯಂತೆ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಕಾರ್ಯಾಂಗ, ಶಾಸಕಾಂಗ ನ್ಯಾಯಾಂಗದ ಜತೆಯಲ್ಲಿ ಪತ್ರಿಕಾರಂಗವು ಬಹುಮುಖ್ಯವಾದ ಪಾತ್ರವಹಿಸುತ್ತಿದ್ದು, ಪತ್ರಕರ್ತರು ಕೊರೊನಾ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ಮಾತನಾಡಿ ಪತ್ರಿಕೆಗಳನ್ನು ಓದುವುದರಿಂದ ಮನುಷ್ಯನ ಜ್ಞಾನಭಂಡಾರ ಹೆಚ್ಚುತ್ತದೆ ಆದುದರಿಂದ ಮನೆಯಲ್ಲಿ ಪತ್ರಿಕೆ ಓದುವ ಹವ್ಯಾಸವನ್ನು ಮಕ್ಕಳು ಬೆಳಸಿಕೊಳ್ಳಬೇಕು ಎಂದರು
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಮಾತನಾಡಿ ಮಂಗಳೂರು ಸಮಾಚಾರ ಪತ್ರಿಕೆಯು ಪ್ರಾರಂಭವಾದ ದಿನದ ನೆನಪಿಗಾಗಿ ಪತ್ರಿಕಾ ದಿನಾಚರಣೆ ನಡೆದುಕೊಂಡು ಬರುತ್ತಿದೆ, ಸುಧರ್ಮಾ ಪತ್ರಿಕೆ ವಿಶ್ವದಲ್ಲೇ ಸಂಸ್ಕೃತದ ಏಕೈಕ ದಿನಪತ್ರಿಕೆಯಾಗಿ ಮೈಸೂರಿನಿಂದ ಪ್ರಕಟವಾಗುತ್ತಿದೆ. ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ಸುಧರ್ಮಾ ಪತ್ರಿಕೆ ಸಂಪಾದಕರಾದ ಸಂಪತ್ ಕುಮಾರ್ ದಂಪತಿಗಳಿಗೆ ಪ್ರಕಟಿಸಿದೆ. ದುರಾದೃಷ್ಟ ಕೊರೊನಾ ಕಾರಣದಿಂದಾಗಿ ವರ್ಷವಾದರೂ ಇನ್ನೂ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿರಲಿಲ್ಲ. ಈ ನಡುವೆ ಅವರು ಹೃದಯಾಘಾತದಿಂದ ನಿಧನರಾಗಿರುವುದು ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಈ ಸಂದರ್ಭ ಬನ್ನೂರು ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷರಾದ ಮಹೇಂದ್ರಸಿಂಗ್ ಕಾಳಪ್ಪ ರವರು ಪತ್ರಕರ್ತರ ವಿಮೆ ಅಥವಾ ಆರೋಗ್ಯ ನಿಧಿಯ ಸಹಕಾರಕ್ಕಾಗಿ 20ಸಾವಿರ ರೂ.ಗಳನ್ನು ಪತ್ರಕರ್ತರ ಸಂಘಕ್ಕೆ ನೀಡಲಾಗುವುದು ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ.ಪ್ರಕಾಶ್, ಮೂಡಾ ಸದಸ್ಯರಾದ ಎಂ.ಎನ್ ನವೀನ್ ಕುಮಾರ್, ಲಕ್ಷ್ಮೀದೇವಿ, ಕರ್ನಾಟಕ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ರಾಜ್ಯಸದಸ್ಯೆ ರೇಣುಕಾ ರಾಜ್, ಕಾಂತಿಲಾಲ್, ಜೀವಧಾರ ಗಿರೀಶ್, ಗಂಗಾಧರ್ ಗೌಡ, ಕೇಬಲ್ ಮಹೇಶ್, ಮೈಸೂರು ಯುವಬಳಗದ ನವೀನ್ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಮಂಜುನಾಥ್, ಸುಚಿಂದ್ರ ಇನ್ನಿತರರು ಇದ್ದರು.