ಮೈಸೂರು: ರಂಗಾಯಣದ ವತಿಯಿಂದ ಪರ್ವ ಪೂರ್ವರಂಗ ಎಂಬ 30 ನಿಮಿಷದ ಸಾಕ್ಷ್ಯಚಿತ್ರವನ್ನು ಜೂನ್ 7ರಂದು ಸಂಜೆ 6.30 ಗಂಟೆಗೆ ರಂಗಾಯಣದ ವೆಬ್ಸೈಟ್ www.rangayana.org ನಲ್ಲಿ ವೀಕ್ಷಿಸಬಹುದು ಎಂದು ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದ್ದಾರೆ.

ರಂಗಾಯಣವು ಡಾ. ಎಸ್.ಎಲ್. ಬೈರಪ್ಪನವರ ಪರ್ವ ಕಾದಾಂಬರಿಯನ್ನು ಆಧರಿಸಿ ಪ್ರಕಾಶ್ ಬೆಳವಾಡಿ ಅವರ ನಿರ್ದೇಶನದಲ್ಲಿ ಯಶಸ್ವಿ ರಂಗ ಪ್ರಯೋಗವನ್ನು ಪ್ರದರ್ಶಿಸಲಾಗಿದೆ. ಈ ರಂಗಪ್ರಯೋಗ ಭಾರತೀಯ ರಂಗಭೂಮಿಯಲ್ಲೇ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿದ್ದು, ಚಾರಿತ್ರಿಕ ದಾಖಲೆಯಾಗಿ ಉಳಿದಿದೆ. ಈ ರಂಗಪ್ರಯೋಗವನ್ನು ಸಿದ್ಧಪಡಿಸಿದ ಎಲ್ಲಾ ತಯಾರಿಗಳನ್ನು, ಕಲಾವಿದರ ಅನುಭವಗಳನ್ನು ಒಳಗೊಂಡ ‘ಪರ್ವ-ಪೂರ್ವರಂಗ’ ಎಂಬ ಶೀರ್ಷಿಕೆ ಸಾಕ್ಷ್ಯಚಿತ್ರವನ್ನು ರಾಷ್ಟ್ರ ಪುರಸ್ಕೃತ ಖ್ಯಾತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಅವರು ನಿರ್ದೇಶಿಸಿದ್ದಾರೆ. ಇದು ಕನ್ನಡ ರಂಗಭೂಮಿಯಲ್ಲಿ ಮೊದಲ ಪ್ರಯತ್ನವಾಗಿದೆ ಎಂದು ತಿಳಿಸಿದ್ದಾರೆ.

By admin