ಮೈಸೂರು: ಡಿ.ದೇವರಾಜ ಅರಸ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೌಟಿಲ್ಯ ರಘು ರಘು ಅವರು ಜಲದರ್ಶನಿ ಯ ಮುಂಭಾಗ ಬಾದಾಮಿ ಗಿಡ ವನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣ ವಾಗಿ ಆಚರಿಸಿದರು.
ಈ ವೇಳೆ ಮಾತನಾಡಿದ ಅವರು ವಿಶ್ವ ಪರಿಸರ ಉಳಿವಿಗಾಗಿ ಪ್ರತಿ ಮನೆ ಯ ಮುಂಭಾಗ ಗಿಡ ವನ್ನು ನೆಡಬೇಕು ಹಾಗೇಯೇ ಕೊರೊನಾ ಎಂಬ ಮಹಾ ಮಾರಿ ಯನ್ನು ಹೋಗಲಾಡಿಸಲು ಆಮ್ಲಜನಕ ದ ಅವಶ್ಯಕತೆ ಇದೆ ನಾವು ವಾಸಿಸುವ ಪರಿಸರ ವನ್ನು ಕಲ್ಮಶ ಗೊಳಿಸದೆ ಸ್ವಚ್ಛತೆಯಿಂದ ಇರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಮೊರ್ಚಾ ದ ನಗರ ಅಧ್ಯಕ್ಷ ಜೋಗಿಮಂಜು ಮಾತಾನಾಡಿ ವಾಯು ಮಾಲಿನ್ಯ, ಜಲ ಮಾಲಿನ್ಯವನ್ನು ತಡೆಯಲು ಪರಿಸರ ಮುಖ್ಯ, ಯುವ ಪೀಳಿಗೆಯು ಪರಿಸರವನ್ನು ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪರಿಸರ ನಾಶ ಮಾಡಿದರೆ ಮುಂದಿನ ದಿನಗಳಲ್ಲಿ ಮನುಕುಲಕ್ಕೆ ಕಂಟಕ ಎದುರಾಗುವುದಂತು ಸತ್ಯ. ಇದನ್ನರಿತು ಪರಿಸರ ಉಳಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿ.ವಿ.ಪುರಂ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕ ದಿವಾಕರ್, ಭಾ.ಜ.ಪ.ನಗರ ಪ್ರಧಾನ ಕಾರ್ಯದರ್ಶಿ ಗಿರೀಧರ್, ಪ್ರಧಾನ ಕಾರ್ಯದರ್ಶಿ ಗೋಪಾಲ್ ಇದ್ದರು.