ಮೈಸೂರು: ನಗರದ ರಾಷ್ತ್ರಿಯ ಹಿಂದೂ ಸಮಿತಿ ಹಾಗೂ ವಿಕೆಎಸ್ ಫೌಂಡೇಷನ್ ವತಿಯಿಂದ ವಿವೇಕಾನಂದನಗರದ ಉದ್ಯಾನದಲ್ಲಿ ಪರಶುರಾಮ ಜಯಂತಿ ಮತ್ತು ಬಸವ ಜಯಂತಿಯನ್ನು ಸಸಿ ನೆಡುವ ಮೂಲಕ “ಪರಿಸರ ಉಳಿಸೋಣ ಆಮ್ಲಜನಕ ಪಡೆಯೋಣ” ಪರಿಸರ ಸಂರಕ್ಷಣೆ ಸಂದೇಶದೊಂದಿಗೆ ವಿವಿಧ ಜಾತಿಯ ಇಪ್ಪತೈದು ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿ ಅವರು, “ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ” ಜವಾಬ್ದಾರಿ ಕೂಡ ಪ್ರತಿ ದಿನ ಆಕ್ಸಿಜನ್ ಇಲ್ಲದೆ ಜನ ಪ್ರಾಣ ಕಳೆದುಕೊಳ್ಳುವುದನ್ನ ಕಾಣುತ್ತಿದ್ದೇವೆ ಆದ್ದರಿಂದ ಪ್ರತಿಯೊಂದು ಮನೆಗೂ ಒಂದೊಂದು ಗಿಡ ನೆಟ್ಟು ಜನರ ಪ್ರಾಣ ಉಳಿಸುವ ಕೆಲಸ ಮಾಡೋಣ ಎಂದು ಹೇಳಿದರು.
ಜೀವಧಾರ ರಕ್ತನಿಧಿ ಕೇಂದ್ರದ ಎಸ್.ಇ.ಗಿರೀಶ್ ಮಾತನಾಡಿ ಪಿತೃವಾಕ್ಯ ಪರಿಪಾಲಕ ಪರುಶುರಾಮ ಜಯಂತಿ ಮತ್ತು ಮಾನವಧರ್ಮವೇ ಶ್ರೇಷ್ಠವೆಂದೂ ಲೋಕಕ್ಕೆ ಸಾರಿದ ಬಸವಣ್ಣ ರವರ ಜಯಂತಿಯ ಅಂಗವಾಗಿ ಲಾಕ್ ಡೌನ್ ಇರುವ ಕಾರಣದಿಂದ ಪರಿಸರ ಸಂರಕ್ಷಣೆಯ ಸಂದೇಶದೊಂದಿಗೆ ರಾಷ್ಟ್ರೀಯ ಹಿಂದೂ ಸಮಿತಿಯ ವತಿಯಿಂದ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಶ್ಲಾಘನೀಯ. ಕೊರೋನಾ ಸಂಕಷ್ಟದ ಕಾಲದಲ್ಲಿ ಆಮ್ಲಜನಕವಿದ್ದರೆ ಮಾತ್ರ ಜೀವ ಉಳಿಯಬಹುದು ಎಂದು ಜನರಿಗೆ ಅರ್ಥವಾಗಿದೆ. ಜನಸಂಖ್ಯೆ ಹೆಚ್ಚಾದಂತೆ ತಾಂತ್ರಿಕ ಯುಗದಲ್ಲಿ ನಗರಪ್ರದೇಶದಲ್ಲಿ ಕಾಂಕ್ರಿಟ್ ಕಟ್ಟಡ ಹೆಚ್ಚಾಗಿರುವದಿಂದ ತಾಪಮಾನ ಮಾಲಿನ್ಯದಿಂದ ಆಮ್ಲಜನಕ ಕೊರತೆ ಉದ್ಭವಿಸುತ್ತಿದೆ ಹಾಗಾಗಿ ಇಂದಿನ ಯುವಪೀಳಿಗೆ ಭವಿಷ್ಯಕ್ಕಾಗಿ ಸಸಿ ನೆಡುವ ಕಡೆ ಮುಂದಾಗಬೇಕಿದೆ
ರಾಷ್ಟ್ರೀಯ ಹಿಂದು ಸಮಿತಿಯ ಪದಾಧಿಕಾರಿಗಳಾದ ಪ್ರದೀಪ್, ಗಗನ್, ತೇಜಸ್, ಜೀವಧಾರ ರಕ್ತ ಕೇಂದ್ರ ಗಿರೀಶ್, ಪಂಕಜ್, ಶರವಣ ಉಪಸ್ಥಿತರಿದ್ದರು.

By admin