ಬಾನಂದೂರು
ಶ್ರೀಚಿಕ್ಕಲಿಂಗೇಗೌಡ ಶ್ರೀಮತಿ ಮೋಟಮ್ಮನವರ
ಮುದ್ದುಕಂದ ಕನ್ನಡದ ಆನಂದ
ಕಾಲಭೈರವೇಶ್ವರ ದಿವ್ಯಜ್ಯೋತಿ
ಗಂಗಾಧರೇಶ್ವರ ಪರಂಜ್ಯೋತಿ

ಜನನ:18.1.1945
ಮರಣ:13.1.2013
ಅದ್ಭುತ ಜನನ ಅನಿರೀಕ್ಷಿತ ನಿಧನ
ಸಂತುಷ್ಟ ನಡುವಣ ಜೀವನ ಪಾವನ
ಮಠ ಪೀಠ ಜೀವ ಕೋಟಿ ಮನನ
ವೇದೋಪನಿಷತ್ ಪುರಾಣ ಪಠನ
ಜಗದ ಆದಿಚುಂಚನಗಿರಿ ಸಿರಿಕ್ಷೇತ್ರದಲಿ
71ನೆಯ ಪೀಠಾಧ್ಯಕ್ಷರ ಗದ್ದುಗೆಯಲಿ
4ದಶಕ ಅವಿರತ ಅಮೋಘ ಅಭಿವೃದ್ಧಿ
ನಭೋತೋ ನಭವಿಷ್ಯತೀ ದಾಖಲೆಸಿದ್ಧಿ
ಝರಿಗರಿ ಗಿಡದರಿ ಗಿರಿಧಾಮದಲಿ
ಕಾಡಿನ ನಟ್ಟನಡುವೆ ದಿಟ್ಟತನದಲಿ
ವೈಭವ ವೈವಿಧ್ಯಮಯ ಕಲಾಪೂರ್ಣ
ದೇವಾಲಯಗಳ ನಿರ್ಮಾಣ ಪರಿಪೂರ್ಣ
ಜಗದ ಪ್ರಥಮ ಮಾನವ ನಿರ್ಮಿತ
ಇದೆಲ್ಲದರ ರೂವಾರಿ ಕಾರಣಕರ್ತ
ಕೈಂಕರ್ಯ ಕಾಯಕಲ್ಪದ ನಿರ್ಮಾತ
ನಿಮಗೆ ನೀವೇ ಸಾಟಿ ಜಗದ್ವಿಖ್ಯಾತ
ಅನ್ನಾಕ್ಷರಅರಿವು ತ್ರಿವಿಧ ದಾಸೋಹಮೇಟಿ
ದಿನವೂ ಸಾವಿರದಿಂದ ಲಕ್ಷ-ಕೋಟಿ-ಕೋಟಿ
ಆಶ್ರಯಪಡೆದು ಹೋಗಿಹರು ಸಾಗರದಾಟಿ
(ವಿ)ದೇಶದಲ್ಲು ನೆಲೆಸಿಹರಿರುತೆ ಉತ್ತಮಧಾಟಿ
ಕಷ್ಟನಷ್ಟ ದುಃಖದುಮ್ಮಾನ ಮೀರಿಮೀಟಿ
ಜಾತ್ಯಾತೀತ ಪ್ರಶ್ನಾತೀತ ಧನುಷ್ಕೋಟಿ
ದನರಾಸು ಕಾಮಧೇನು ಪುಣ್ಯಕೋಟಿ
ಚಿರಋಣಿ ನಿಮಗೆಇಡೀ ಮನುಷ್ಕೋಟಿ
ಜಗದಗಲದಾ ಭವದಾಳದಾ ತ್ಯಾಗಿ
ಯುಗದಾಯೋಗಿ ಆಧ್ಯಾತ್ಮಯೋಗಿ
ಭೈರವ ಜೋಗಿ ಗಂಗಾಧರ ಜೋಗಿ
ವಚನವೈಭೋಗಿ ಪ್ರವಚನಾಭೋಗಿ
ಅಸಾಮಾನ್ಯ ನೀ ಅಪರೂಪ ನೀ
ಅಸಾಧಾರಣ ನೀ ಅನುರೂಪ ನೀ
ಅಪೂರ್ವ ನೀ ಅತ್ಯಮೂಲ್ಯ ನೀ
ಅನಂತ ನೀ ಆಪ್ಯಾಯಮಾನ ನೀ
ನವಿಲು ನೇಗಿಲು ಪರಿಪಾಲಕ
ಪಕ್ಷಿ ಪ್ರಾಣಿ ವೃಕ್ಷ ಸಿರಿ ಪೋಷಕ
ಜನಮನ ಗಣಋಣ ಸಾರ್ಥಕ
ಧನಧಾನ್ಯ ಹಂಚಿಕೆ ಸಮರ್ಪಕ
ತನುಮನ ವಿರಕ್ತ ಭಕ್ತ ದರ್ಶಕ
ಭಕ್ತ ಭಗವಂತರ ಸಂದರ್ಶಕ
ಮುಗ್ಧ ಅಹಿಂದರ ಮಾರ್ಗದರ್ಶಕ
ಒಳಗೂ ಹೊರಗೂ ಪಾರದರ್ಶಕ
ನಿಸ್ವಾರ್ಥ ನಿಷಕ್ಪಟ ನಿಷ್ಕಲ್ಮಶ ಪರಾಕ್ರಮ
ಭವ್ಯ ಜ್ಞಾನಿ ಭವಿತವ್ಯ ವಿಜ್ಞಾನಿ ತ್ರಿವಿಕ್ರಮ
ನಿತ್ಯಸೇವಕ ಸತ್ಯನಿರಂಜನ ಮಹಾಮಹಿಮ
ಪಾರಮಾರ್ಥಿಕ ತ್ರಿಕರಣ ಪುರುಷೋತ್ತಮ

ಕುಮಾರಕವಿ ಬೋ.ನಾ.ನಟರಾಜ
9036976471
ಬೆಂಗಳೂರು