ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಮೈಸೂರು ಸಂಸ್ಥಾನದ 25ನೇ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ 102ನೇಜಯಂತಿ ಅಂಗವಾಗಿ ಚಾಮರಾಜೇಂದ್ರ ವೃತ್ತದಲ್ಲಿರುವ ಜಯಚಾಮರಾಜೇಂದ್ರ ಒಡೆಯರ್ ರವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಕೋವಿಡ್-2 ನೇ ಅಲೆಯ ಲಕ್ ಡೌನ್ ಸಂದರ್ಭದಲ್ಲಿ ನಿರಂತರವಾಗಿ ಸೇವೆ ಮಾಡಿದಂತಹ ಕೊರೊನಾ ವಾರಿಯರ್ಸ್ ಗೆ ಸನ್ಮಾನಿಸಿ ಅಭಿನಂದಿಸಲಾಯಿತು,ಸನ್ಮಾನ ಸ್ವೀಕರಿಸಿದ ಕೊರೊನಾ ವಾರಿಯರ್ಸ್ ಗಳಾದಮಮತಾ (ಆರೋಗ್ಯ ಕೇಂದ್ರದ ನರ್ಸು )
ಪುಷ್ಪಲತಾ (ಆಶಾ ಕಾರ್ಯಕರ್ತೆ)ಸುರೇಶ್ (ಪೊಲೀಸ್ ಹೆಡ್ ಕಾನ್ ಸ್ಟೆಬಲ್ )ಗಾಯತ್ರಿ (ಪೌರಕಾರ್ಮಿಕರು )ಮುಬಾರಕ್( ಆಂಬುಲೆನ್ಸ್ ಡ್ರೈವರ್) ಸನ್ಮಾನಿಸಿ ಅಭಿನಂದಿಸಲಾಯಿತು
ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ ಜಯಚಾಮರಾಜ ಒಡೆಯರ್ ರವರು ತಮ್ಮ ಉದ್ದಕ್ಕೂ ತಮ್ಮ ಪ್ರೀತಿ ವಾತ್ಸಲ್ಯಕ್ಕೆ ಸಾಹಿತ್ಯ ಸಂಸ್ಕೃತಿ ಕಲೆ ಬಗ್ಗೆ ಕೂಡ ವಿಶೇಷ ಆಸಕ್ತಿ ಹೊಂದಿದ್ದರು , ದೀನ ದಲಿತರು ಮತ್ತು ಶೋಷಿತರ ಬಗ್ಗೆ ಉದ್ದಕ್ಕೂ ಅಂತಃಕರಣಪೂರ್ವಕವಾಗಿ ಅವರನ್ನ 1ಒಳ್ಳೆಯ ದಾರಿಯಲ್ಲಿ ಸಾಗಾಣಿಕೆ ದಿಟ್ಟ ನಿರ್ಧಾರಗಳನ್ನು ಕೈಗೊಂಡವರು ,
ಜಯಚಾಮರಾಜ ಒಡೆಯರ್ ಅವರು ಕೃಷಿ ಮತ್ತು ರೈತರ ಬಗ್ಗೆ ಕೂಡ ವಿಶೇಷ ಆಸಕ್ತಿ ವಹಿಸಿ ಕಾರ್ಯಕ್ರಮಗಳನ್ನು ಜಾರಿಗೆ ತಂದವರು ,ಸಂಸ್ಥಾನದಲ್ಲೇ ತಮ್ಮ ದೊಡ್ಡಪ್ಪ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಮಾದರಿಯನ್ನು ಮುಂದುವರೆಸಿಕೊಂಡು ನಾಲ್ವಡಿಯವರ ಸಮರ್ಥ ವಾರಸುದಾರರಾಗಿದರು ಇವತ್ತು ಕೂಡ ಅವರ ಆಳ್ವಿಕೆ ಜನ ಮುಖಿ ಆಲೋಚನೆಗಳು ತುಂಬ ಹೆಮ್ಮೆಯ ಸಂಗತಿ ಎಂದು ಹೇಳಿದರು ,
ನಂತರ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ವೈ ಡಿ ರಾಜಣ್ಣ ರವರುಜಯಚಾಮರಾಜ ಒಡೆಯರ್ ರವರು ಸ್ವಾತಂತ್ರ್ಯ ಪೂರ್ವದಲ್ಲೇ ತಮ್ಮ ದೂರದರ್ಶಿತ್ವವನ್ನು ಇಡೀ ದೇಶಕ್ಕೆ ಪಂಚವಾರ್ಷಿಕ ಯೋಜನೆಯ ಮೂಲಕ ಕೊಟ್ಟಂಥವರು ,ಮುಂದೆ 1952 ರಲ್ಲಿ ಅಂದಿನ ಪ್ರಧಾನಿ ನೆಹರುರವರು ಇದೇ ಯೋಜನೆಯನ್ನು ತಮ್ಮ ಆಳ್ವಿಕೆಯಲ್ಲಿ ಅಳವಡಿಸಿಕೊಂಡರು,ಶರಾವತಿ ಜಲವಿದ್ಯುತ್ ಯೋಜನೆ ಅನುಷ್ಠಾನ ಹಾಗೆ ಸಾಹಿತ್ಯ ಮತ್ತು ಶಿಕ್ಷಣ ಪ್ರೇಮಿಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕೂಡ ದೊಡ್ಡ ಮಟ್ಟದಲ್ಲೇ ಒತ್ತಾಸೆಯಾಗಿ ನಿಂತವರು ,ಸ್ವತಃ ಸಂಗೀತ ಪ್ರೇಮಿಯಾಗಿ ಸಂಗೀತಗಾರರಾಗಿ ಹಲವಾರು ಕೀರ್ತನೆಗಳನ್ನು ಹಾಗೆ ತಮ್ಮ ಸುಧೀರ್ಘ ವಿದೇಶ ಪ್ರವಾಸಗಳ ಅನುಭವಗಳ ಹಿನ್ನೆಲೆಯಲ್ಲಿ ಹಲವಾರು ಹೊಸ ಆ ಅಭಿವೃದ್ಧಿಯ ಆಯಾಮಗಳನ್ನ ಮೈಸೂರು ಸಂಸ್ಥಾನದಲ್ಲಿ ಅನುಷ್ಠಾನಗೊಳಿಸಿ ತಂದ ಕೀರ್ತಿ ಜಯಚಾಮರಾಜ ಒಡೆಯರ್ ಅವರಿಗೆ ಸಲ್ಲುತ್ತದೆ, ಈ ಸಂದರ್ಭದಲ್ಲಿ ಅವರ ಸ್ಮರಣಾರ್ಥ ಕರೋನ ಸಂದರ್ಭದಲ್ಲಿ ದುಡಿದ 5ಜನ ಸಾಧಕರಿಗೆ ಅಭಿನಂದನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ,ಪ್ರಜ್ಞಾವಂತ ನಾಗರಿಕ ವೇದಿಕೆಯ ಪಡೆಯ ಪದಾಧಿಕಾರಿಗಳ ಈ ಕಾರ್ಯ ಇತರರಿಗೂ ಮಾದರಿಯಾಗಲಿ ಎಂದು ಅಭಿಪ್ರಾಯಪಟ್ಟರು
ಇದೇ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ,ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ ವೈ ಡಿ ರಾಜಣ್ಣ ,ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್ ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಎಂ ಎನ್ ನವೀನ್ ಕುಮಾರ್ ,ಲಕ್ಷ್ಮೀದೇವಿ ,ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೊಳ ಜಗದೀಶ್ ,ಕೆಂಪೇಗೌಡ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಗಂಗಾಧರ್ ,ಬೆಟ್ಟೇಗೌಡ ,ಕೇಬಲ್ ಮಹೇಶ್ ,ಸುಚೀಂದ್ರ ,
ನವೀನ್ ,ಮಂಜುನಾಥ್ ,ಹಾಗೂ ಇನ್ನಿತರರು ಹಾಜರಿದ್ದರು