ಹೊಂಗಲವಾಡಿಯಲ್ಲಿ ಸಿಸಿರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ

ಚಾಮರಾಜನಗರ : ತಾಲೂಕಿನ ಹೊಂಗಲವಾಡಿ ಗ್ರಾಮದ ಪರಿಶಿಷ್ಟ ಜಾತಿ ಬಡಾವಣೆಯ ಬೀದಿಯಲ್ಲಿ ೨೫ ಲಕ್ಷ ರೂ.ವೆಚ್ದದ ಸಿಸಿರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.


ಇದೇವೇಳೆ ಅವರು ಮಾತನಾಡಿ, ಹೊಂಗಲವಾಡಿ, ಸಿದ್ದಯ್ಯನಪುರ ಗ್ರಾಮಗಳಲ್ಲಿ ಮೂಲಭೂತಸೌಕರ್ಯಗಳಾದ ಕುಡಿಯುವ ನೀರು, ಸಂಪರ್ಕ ರಸ್ತೆ ನಿರ್ಮಿಸಿಕೊಡಲಾಗಿದ್ದು. ಹೊಂಗಲವಾಡಿಯಿಂದ ಸಿದ್ದಯ್ಯನಪುರಕ್ಕೆ ಸಂಪರ್ಕಿಸುವಲ್ಲಿ ಸಾರ್ವಜನಿಕರ ಸಂಚಾರಕ್ಕೆ ಬೃಹತ್ ಸೇತುವೆಯನ್ನು ನಿರ್ಮಿಸಿಕೊಡಲಾಗಿದೆ. ಆಶ್ರಯ, ಗಂಗಾಕಲ್ಯಾಣಯೋಜನೆಯಡಿ ಪರಿಕರವಿತರಣೆ ಮಾಡುವಲ್ಲೂ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದರು.
ಕಾಮಗಾರಿ ನಿರ್ವಹಣೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ೫ ಲಕ್ಷ ರೂ. ವೆಚ್ಚದಲ್ಲಿ ಪ್ರಗತಿಯಲ್ಲಿರುವ ಅಂಬೇಡ್ಕರ್ ಭವನದ ಕಾಮಗಾರಿಯನ್ನು ಶಾಸಕರು ಅಧಿಕಾರಿಗಳ ಜತೆ ತೆರಳಿಪರಿಶೀಲಿಸಿದರು.
ಗ್ರಾಮಸ್ಥರು ಭವನದ ಮುಂದುವರೆದ ಕಾಮಗಾರಿಗೆ ಅನುದಾನ ಮಂಜೂರುಮಾಡಿಸಿಕೊಡುವಂತೆ ಮನವಿ ಮಾಡಿದರು.
ಮುಖಂಡರಾದ ಲಕ್ಷ್ಮಿನರಸಿಂಹಮೂರ್ತಿ, ಗ್ರಾಮಪಂಚಾಯಿತಿ ಅಧ್ಯಕ್ಷೆ ಶೈಲಜಾಗೋವಿಂದರಾಜು, ಸದಸ್ಯರಾದ ಬಸವಣ್ಣ, ಬಸವರಾಜು, ಸೋಮಣ್ಣ, ತಾಪಂ ಮಾಜಿಸದಸ್ಯ ಪಿ.ಕುಮಾರನಾಯ್ಕ, ಗ್ರಾಪಂ ಮಾಜಿಅಧ್ಯಕ್ಷ ಶಿವಮಲ್ಲು, ಮಾಜಿಸದಸ್ಯ ಎನ್.ಮಹದೇವು, ಯಜಮಾನರಾದ ಬಸವಣ್ಣ, ವೆಂಕಟರಮಣ, ಚನ್ನಂಜಯ್ಯ , ಶ್ರೀಕಂಠಮೂರ್ತಿ, ಹನುಮಂತು, ಕುಂಬೇಶ್ವರಸ್ವಾಮಿ, ಪ್ರಭುಸ್ವಾಮಿ, ರಾಚಯ್ಯ,ಮೂರ್ತಿ, ಎಇಇ ಕೆಂಪರಾಜು ಗ್ರಾಮಸ್ಥರು ಹಾಜರಿದ್ದರು.