ಮನೆಗೊಬ್ಬರಂತೆ ಯುವಕರನ್ನ ಸೇನಾನಿಯಾಗಿ ಸ್ವಾತಂತ್ರ್ಯ ಹೋರಾಟಕ್ಕೆ ತಾಯಾರಿ ಮಾಡಿ ಭಾರತೀಯ ಭೂಸೇನಾ ನಿರ್ಮಿಸಿದವರೇ ನಮ್ಮ ನೇತಾಜಿ

ಭಾರತೀಯ ಭೂಸೇನಾ ಸಂಸ್ಥಾಪಕರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125ನೇ ಜನ್ಮದಿನೋತ್ಸವದ ಅಂಗವಾಗಿ ರಾಷ್ಟ್ರೀಯ ಹಿಂದೂ ಸಮಿತಿ ವತಿಯಿಂದ “ಜೈಹಿಂದ್ ರಕ್ತದಾನ ಶಿಬಿರ”ವನ್ನ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ  ಆಯೋಜಿಸಲಾಗಿತ್ತು, 50ಕ್ಕೂ ಹೆಚ್ವು ಯುವಕ ಯುವತಿಯರು ಜೈಹಿಂದ್ ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿದ್ದರು,

ಇದೇ‌ ಸಂಧರ್ಭದಲ್ಲಿ ಬಿಜೆಪಿ ರಾಜ್ಯ ವಕ್ತಾರ ಎಂ.ಜಿ  ಮಹೇಶ್ ರವರು ಮಾತನಾಡಿ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಪಡೆಯಲು ಅಲ್ಲಲ್ಲಿ ಪ್ರತಿಭಟನೆ ಧರಣಿ ಸತ್ಯಾಗ್ರಹ ಹೋರಾಟಗಳು ಸಾಂಕೇತಿಕವಾಗಿ  ನಡೆಯುತ್ತಿದ್ದಕ್ಕೆ ಕ್ರಾಂತಿಕಾರಿ  ಸ್ವರೂಪ  ಸಂಘಟನಾತ್ಮಕವಾಗಿ  ಬಲಿಷ್ಟವಾಗಲು ಯುವಕರೇ ರಕ್ತವನ್ನ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಕರೆ ನೀಡಿ ಮನೆಗೊಬ್ಬರಂತೆ ಯುವಕರನ್ನ ಸೇನಾನಿಯಾಗಿ ಸ್ವಾತಂತ್ರ್ಯ ಹೋರಾಟಕ್ಕೆ ತಾಯಾರಿ ಮಾಡಿ ಭಾರತೀಯ ಭೂಸೇನಾ ನಿರ್ಮಿಸಿದವರೇ ನಮ್ಮ ನೇತಾಜಿ ಸುಭಾಷ್ ಚಂದ್ರ ಬೋಸ್ ರವರು, ಸುಭಾಷ್ ರವರು ಐ.ಎ.ಎಸ್ ಪಡೆದರೂ ಸಹ  ಬ್ರಿಟೀಷರ ಗುಲಾಮಗಿರಿ ಆಡಳಿತದಲ್ಲಿ ಕೆಲಸ ಮಾಡಲು ಮನ ಒಪ್ಪದ ಕಾರಣ ತ್ಯಜಿಸಿದರು,

ಇವತ್ತಿನ ಭಾರತದಲ್ಲಿ ನಾವುಗಳು ಸುರಕ್ಷಿತವಾಗಿದ್ದೇವೆ ಎಂದರೆ‌ ಅದಕ್ಕೆ ನೇತಾಜಿ ರವರು ನಿರ್ಮಿಸಿರುವ ಭಾರತೀಯ ಭೂಸೇನೆ ಸೈನಿಕರು ಜೀವತ್ಯಾಗದಿಂದ ಬಲಿದಾನ ಹೋರಾಟದಿಂದ, ಯುವ ಸಮೂಹ ನೇತಾಜಿ ರವರ ಜೀವನಚರಿತ್ರೆಯನ್ನ ಆದರ್ಶವಾಗಿಟ್ಟುಕೊಂಡು ದೇಶಪ್ರೇಮ ಮನೋಭವಾ ರೂಡಿಸಿಕೊಳ್ಳಬೇಕು ಎಂದರು.


ನಂತರ ಬಿಜೆಪಿ ಮೈಸೂರು ವಕ್ತಾರ ಮಾ. ಮೋಹನ್ ರವರು ಮಾತನಾಡಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜಯಂತಿಯನ್ನ ನರೇಂದ್ರ ಮೋದಿ ರವರು ಪ್ರಧಾನಮಂತ್ರಿ ಯಾದ ಬಳಿಕ  ಪರಾಕ್ರಮ ದಿವಸ್ ಎಂದು ಕೇಂದ್ರ ಸರ್ಕಾರದಿಂದ ಆಚರಿಸಲು ಕ್ರಮಕೈಗೊಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು 125ನೇ ಜಯಂತಿಯ ಅಂಗವಾಗಿ ಶಾಲಾ ಕಾಲೇಜುಗಳಲ್ಲಿ ವರ್ಷಪೂರ್ತಿ ಆಚರಿಸಲು ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹ, ಮತ್ತು ದೆಹಲಿಯ ಗೇಟ್ ವೇ ಆಫ್ ಇಂಡಿಯಾ ಬಳಿ ನೇತಾಜಿ ರವರ ಪ್ರತಿಮೆ ನಿರ್ಮಾಣ ಸೈನಿಕರಿಗೆ ಸಂದ ಗೌರವವಾಗಿದೆ ಇದರಿಂದ ಪ್ರತಿಯೊಬ್ಬ ಭಾರತೀಯರಲ್ಲಿ ದೇಶಭಕ್ತಿ ಹೆಚ್ಚಿಸುತ್ತದೆ ಎಂದರು.


ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡ ರವರು ಮಾತನಾಡಿ ಮೈಸೂರಿನಲ್ಲಿ ಜಿಲ್ಲಾಡಳಿತ ಮತ್ತು ಮೈಸೂರು ವಿಶ್ವವಿದ್ಯಾನಿಲಯ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ದಿನಾಚರಣೆಯನ್ನ ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ದೇಶಪ್ರೇಮ ಮೂಡಿಸುವ ಸಾಂಸ್ಕೃತಿಕ ಕ್ರೀಡಾ ಕಾರ್ಯಕ್ರಮಗಳ ಮೂಲಕ  ಆಚರಿಸಲು ಯೋಜನೆ ರೂಪಿಸಬೇಕು ಎಂದು ಮಾತನಾಡಿದರು.


ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯ ವಕ್ತಾರರಾದ ಎಂ ಜಿ ಮಹೇಶ್ ,ನಗರ ಮೈಸೂರು ನಗರ ವಕ್ತಾರರಾದ  ಎಂ ಎ ಮೋಹನ್ ,ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡ, ನಗರಪಾಲಿಕೆ ಪಾಲಿಕೆ ಸದಸ್ಯರಾದ ಎಲ್  ಜಗದೀಶ್ ,ಅಜಯ್ ಶಾಸ್ತ್ರಿ  ರಾಕೇಶ್ ಭಟ್,ಟಿ ಎಸ್ ಅರುಣ್ , ರಾಷ್ಟ್ರೀಯ ಹಿಂದೂ ಸಮಿತಿಯ ವಿಕಾಸ್ ಶಾಸ್ತ್ರಿ, ತೇಜಸ್, ಗಗನ್, ಪ್ರದೀಪ್, ಚಿದಂಬರಂ, ಸುಚೀಂದ್ರ, ಕಿರಣ್, ಮಹೇಂದ್ರ ಎಂ ಶೈವ ,ವಿದ್ಯಾ ,ವರಲಕ್ಷ್ಮಿ ಅಜಯ್ ,ಸುವರ್ಣ, ವಿನಯ್, ಉಪಸ್ಥಿತರಿದ್ದರು