ರಸ್ತೆ ಬದಿಯಲ್ಲೇ ಕಸದ ರಾಶಿ ತ್ಯಾಜ್ಯ ವಿಲೇವಾರಿ ಲೋಪ;
ಸ್ವಚ್ಛ, ಸುಂದರ, ಸಾಂಸ್ಕೃತಿಕ ನಗರಿ ನಮ್ಮ ಮೈಸೂರು ಎಂಬುದನ್ನು ಎಲ್ಲರೂ ಮರೆತಂತೆ ಇದೆ ಎನಿಸುತ್ತಿದೆ, ಈ ರಸ್ತೆಬದಿ ಕಸದ ರಾಶಿ ನೋಡಿದರೆ, ಮೈಸೂರು ನಗರದಲ್ಲಿ ಕಸ ವಿಲೇವಾರಿ ಪರಿಣಾಮ ನಗರದ ನಾನಾ ಬಡಾವಣೆಗಳಲ್ಲಿ ತ್ಯಾಜ್ಯ ವಿಲೇವಾರಿಯಾಗದೆ ರಸ್ತೆಯುದ್ದಕ್ಕೂ ಕಸದ ರಾಶಿ ರಾರಾಜಿಸುತ್ತಿದೆ. ವಾರ್ಡ್ 47 ರ ವ್ಯಾಪ್ತಿ ಬರುವ ಆರ್. ಟಿ. ಓ.ಹಾಗೂ ಬಲ್ಲಾಳ ವೃತ ಮದ್ಯೆ ಇರುವ ಅಮೃತ್ ಹೋಟೆಲ್ ಪಕ್ಕ ದಲ್ಲಿರುವ ಖಾಲಿ ಜಾಗದಲ್ಲಿ ದಿನ ನಿತ್ಯ ಕಸದ ಸಮಸ್ಯೆ ರಾರಾಜಿಸುತ್ತಿದೆ.
ಪ್ರತೀ ವರ್ಷ ಪಾಲಿಕೆಯಿಂದ ಕಸ ವಿಲೇವಾರಿಗಾಗಿ ಲಕ್ಷ ಗಟ್ಟಲೆ ಹಣ ವ್ಯಯ ಮಾಡಲಾಗುತ್ತಿದೆ ಎನ್ನುವ ಅಧಿಕಾರಿಗಳು ಬಿಡುಗಡೆಯಾದ ಅನುದಾನ ಸರಿಯಾಗಿ ಬಳಕೆಯಾಗುತ್ತಿದೆಯೇ ಎಂಬ ಬಗ್ಗೆ ಗಮನಹರಿಸುತ್ತಿಲ್ಲ ಹಾಗೂ ಅಧಿಕಾರಿಗಳ ಕರ್ತವ್ಯ ಲೋಪದಿಂದ ದಿನೇ ದಿನೆ ಕಸದ ಸಮಸ್ಯೆ ದ್ವಿಗುಣಗೊಳ್ಳುತ್ತಿದೆ ಇದರ ಪರಿಣಾಮ ಮೈಸೂರು ಸ್ವಚ್ಛ ನಗರ ಪಟ್ಟ ಕನಸು ಇನ್ನೂ ಕಗ್ಗಂಟಾಗುತ್ತಿದೆ.
ರಸ್ತೆ ಬದಿಯಲ್ಲೇ ಕಸ: ನಗರದ ಹಲವು ಬಡಾವಣೆಗಳಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗದೆ ರಸ್ತೆ ಬದಿಗಳಲ್ಲೇ ಕಸದ ರಾಶಿ ರಾರಾಜಿಸುತ್ತಿದೆ. ಪಾಲಿಕೆಯಿಂದ ನಿಯೋಜಿಸಿರುವ ಆಟೋ ಟಿಪ್ಪರ್ಗಳು ಸಮರ್ಪಕವಾಗಿ ಕಸ ನಿರ್ವಹಣೆ ಮಾಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಎಲ್ಲಾ ವ್ಯವಸ್ಥಿತವಾಗಿದೆ ಎಲ್ಲರ ಮನೆ ಮನೆ ಬಾಗಿಲಿಗೆ ಗಾಡಿಯನ್ನುಕಳಿಸಿ ಕಸವನ್ನು ಸಂಗ್ರಹಿಸಲಾಗುತ್ತಿದೆ ಎಂದು ಉತ್ತರಿಸುತ್ತಿದ್ದಾರೆ.
ಯಾರೂ ಈ ರಸ್ತೆ ಬದಿಯಲ್ಲೇ ಕಸ ಸುರಿಯುತ್ತಿದ್ದಾರೆ ಏಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ? ಇಲ್ಲಿನ ನಿವಾಸಿಗಳು, ಪಾದಚಾರಿಗಳು ಶಾಲೆ ಕಾಲೇಜು ವಿದ್ಯಾರ್ಥಿಗಳು ವಾರ್ಡಿನ ಕಾಂಪೋರೇಟರ್ ಬಗ್ಗೆ ಅಸಮದಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.